Railway Rules: ಇನ್ನುಮುಂದೆ ರೈಲಿನಲ್ಲಿ ಈ ವಸ್ತುಗಳನ್ನ ತಗೆದುಕೊಂಡು ಹೋಗುವಂತಿಲ್ಲ, ಮೂರೂ ವರ್ಷ ಜೈಲು ಶಿಕ್ಷೆ ಖಚಿತ.

ಹಬ್ಬದ ಸಮಯದಲ್ಲಿ ರೈಲು ಪ್ರಯಾಣ ಮಾಡುವವರಿಗೆ ಹೊಸ ನಿಯಮ.

Indian Railway New Rule: ಪ್ರಯಾಣಕ್ಕಾಗಿ ಜನರು ಹೆಚ್ಚಾಗಿ ರೈಲು ಪ್ರಯಾಣವನ್ನೇ ಆರಿಸುತ್ತಾರೆ. ರೈಲುಪ್ರಯಾಣವು ಹೆಚ್ಚಿನ ಸುರಕ್ಷತೆಯ ಜೊತೆಗೆ ರಾತ್ರಿ ಪ್ರಯಾಣಕ್ಕೆ ಉತ್ತಮವಾಗಿರುತ್ತಾದೆ. ಇತ್ತೀಚೆಗಂತೂ ಭಾರತೀಯ ರೈಲ್ವೆಗಳಲ್ಲಿ ಪ್ರವೈಣಿಕರಿಗಾಗಿ ಹತ್ತು ಹಲವು ಸೌಕರ್ಯವನ್ನು ಇಲಾಖೆ ಪರಿಚಯಿಸುತ್ತಿದೆ.

ರೈಲು ಪ್ರಯಾಣಿಕ್ರಿಗೆ Railway Ticket ಪಡೆಯಲು ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಟಿಕೆಟ್ ಬುಕಿಂಗ್ ಗಾಗಿ ಪ್ರತ್ಯೇಕ ಆಪ್ ಅನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಇನ್ನು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಡುವ ರೈಲ್ವೆ ಇಲಾಖೆಗೆ ರೈಲು ಪ್ರಯಾಣಕ್ಕೆ ಹೆಚ್ಚಿನ ನಿಯಮವನ್ನು ಜಾರಿಗೊಳಿಸಿದೆ. ಸದ್ಯ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ. ನೀವು ರೈಲುಗಳಲ್ಲಿ ಪ್ರಯಾಣಿಸುವ ಮುನ್ನ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.

Indian Railway Latest Update
Image Credit: News 18

ಇನ್ನುಮುಂದೆ ರೈಲಿನಲ್ಲಿ ಈ ವಸ್ತುಗಳನ್ನ ತಗೆದುಕೊಂಡು ಹೋಗುವಂತಿಲ್ಲ
ಸದ್ಯ ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಇನ್ನೇನು ಒಂದೇ ವಾರದಲ್ಲಿ ಮನೆ ಮಾಡಲಿದೆ. November 12 ರಂದು ಬರಲಿರುವ ದೀಪಾವಳಿ ಹಬ್ಬದ ವಿಶೇಷಕ್ಕಾಗಿ ಜನರು ಕಾಯುತ್ತಿದ್ದಾರೆ ಎನ್ನಬಹುದು.

ಈ ದೀಪಾವಳಿ ಹಬ್ಬದ ವಿಶೇಷಕ್ಕೆ ರೈಲುಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಿರುತ್ತದೆ ಎನ್ನಬಹುದು. ಊರು ಬಿಟ್ಟು ಬೇರೆ ಕಡೆ ನೆಲೆ ಊರಿರುವ ಸಾಕಷ್ಟು ಜನರು ದೀಪಾವಳಿ ಹಬ್ಬಕ್ಕೆ ಊರಿಗೆಂದು ಆಗಮಿಸುತ್ತಾರೆ. ಲಕ್ಷಾಂತರ ಪ್ರಯಾಣಿಕರು ಈಗಾಗಲೇ ದೀಪಾವಳಿ ಹಬ್ಬಕ್ಕೆ ಪ್ರಯಾಣ ಬೆಳಸಲು ನಿರ್ಧರಿಸಿರುತ್ತಾರೆ. ಇದೀಗ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ರೈಲ್ವೆ ಇಲಾಖೆ ಹೊಸ ನಿಯಮವನ್ನು ಪರಿಚಯಿಸಿದೆ.

Indian Railway New Rule
Image Credit: Mathrubhumi

ಹಬ್ಬದ ಸಮಯದಲ್ಲಿ ರೈಲು ಪ್ರಯಾಣ ಮಾಡುವವರಿಗೆ ಹೊಸ ನಿಯಮ
ಭಾರತೀಯ ರೈಲ್ವೆಯು ಪಟಾಕಿ ಮತ್ತು ಸ್ಪಾರ್ಕ್ಲರ್‌ ಗಳಂತಹ ಧಹಿಸುವ ವಸ್ತುಗಳನ್ನು ಪ್ಯಾಸೆಂಜರ್ ರೈಲುಗಳಲ್ಲಿ ಸಾಗಿಸಲು ಅನುಮತಿಸುವುದಿಲ್ಲ. ಆದ್ದರಿಂದ ನೀವು ಪಟಾಕಿ ಮತ್ತು ಇತರ ರೀತಿಯ ವಸ್ತುಗಳನ್ನು ನಿಮ್ಮೊಂದಿಗೆ ಸಾಗಿಸಲು ಯೋಜಿಸಿದ್ದರೆ ಇಂದೇ ಈ ಯೋಜನೆಯನ್ನು ಕೈಬಿಟ್ಟುಬಿಡಿ. ನೀವು ರೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಕೊಂಡೊಯ್ದರೆ ಇಲಾಖೆ ನಿಮಗೂ ದಂಡವನ್ನು ವಿಧಿಸುತ್ತದೆ.

Join Nadunudi News WhatsApp Group

ಮೂರೂ ವರ್ಷ ಜೈಲು ಶಿಕ್ಷೆ ಖಚಿತ
ಭಾರತೀಯ ರೈಲ್ವೇ ಪಟಾಕಿಗಳೊಂದಿಗೆ ಪ್ರಯಾಣಿಸದಂತೆ ಪ್ರಯಾಣಿಕರಿಗೆ ಸೂಚನೆ ನೀಡಿದೆ. ರೈಲ್ವೆ ಕಾಯಿದೆಯ ಸೆಕ್ಷನ್ 164 ರ ಅಡಿಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ಸೆಕ್ಷನ್ ಅಡಿಯಲ್ಲಿ ಪ್ರಯಾಣಿಕರಿಗೆ ರೂ. 1000 ದಂಡ ಅಥವಾ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆ ಇದೆ. ಪಟಾಕಿಗಳು ನಿಷೇಧಿತ ವಸ್ತುಗಳ ವರ್ಗದಲ್ಲಿ ಬರುವುದರಿಂದ ರೈಲಿನಲ್ಲಿ ಸಿಕ್ಕಿಬಿದ್ದರೆ ನೀವು ಶಿಕ್ಷೆಗೆ ಗುರಿಯಾಗುತ್ತೀರಿ ಎನ್ನುವುದ ಬಗ್ಗೆ ಅರಿವು ನಿಮಗಿರಲಿ.

Join Nadunudi News WhatsApp Group