Platform Ticket: ಇನ್ನುಮುಂದೆ ಟಿಕೆಟ್ ಇದ್ದರೂ ಫ್ಲಾಟ್ ಫಾರ್ಮ್ ಟಿಕೆಟ್ ಪಡೆಯಬೇಕು, ಹೊಸ ನಿಯಮ ಜಾರಿಗೆ.
ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ, ರೈಲ್ವೆ ಟಿಕೆಟ್ ಜೊತೆಗೆ ಫ್ಲ್ಯಾಟ್ ಫಾರ್ಮ್ ಟಿಕೆಟ್ ಪಡೆಯಬೇಕು.
Indian Railway Platform Ticket Rule: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ವಿವಿಧ ನಿಯಮವನ್ನು ಜಾರಿಗೊಳಿಸುತ್ತಿದೆ. ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು (Train Travel) ಬಯಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ. ಇನ್ನು ರೈಲು ಪ್ರಯಾಣದಲ್ಲಿ ಸಾಕಷ್ಟು ನಿಯಮಗಳು ಕೂಡ ಇರುತ್ತವೆ.
ರೈಲಿನಲ್ಲಿ ಪಯಣಿಸುವವರು ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಇದೀಗ ರೈಲ್ವೆ ಸಂಚಾರ ನಿಯಮದಲ್ಲಿ ಹೊಸ ನಿಯಮವೊಂದು ಸೇರಿಕೊಂಡಿದೆ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಈ ತಪ್ಪುಗಳನ್ನು ಮಾಡಿದರೆ ದಂಡದ ಜೊತೆಗೆ ನೀವು ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ.
ರೈಲ್ವೆ ಟಿಕೆಟ್ ನಿಯಮದಲ್ಲಿ ಬದಲಾವಣೆ
ರೈಲ್ವೆ ಇಲಾಖೆಯು ಸಾಕಷ್ಟು ಸೌಲಭ್ಯಗಳ ಜೊತೆಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು ರೈಲ್ವೆ ಟಿಕೆಟ್ ನಲ್ಲಿ ಸಾಕಷ್ಟು ನಿಯಮಗಳು ಇವೆ. ರೈಲ್ವೆ ಟಿಕೆಟ್ ನಿಯಮವನ್ನು ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ವಿದಿಸಬೇಕಾಗುತ್ತದೆ.
ರೈಲ್ವೆ ಫ್ಲಾಟ್ ಫಾರ್ಮ್ ಟಿಕೆಟ್
ರೈಲ್ವೆ ನಿಲ್ದಾಣದಲ್ಲಿ ನೀವು ರೈಲು ಬರುವ ಮುಂಚೆಯೇ ತಲುಪಬೇಕಾಗುತ್ತದೆ. ನಿಮ್ಮ ರೈಲು ಬರುವಿಕೆಯ ಮೊದಲ 2 ಗಂಟೆಯ ವರೆಗೂ ರೈಲ್ವೆ ನಿಲ್ದಾಣದಲ್ಲಿ ಉಳಿಯಬಹುದು. ಹಗಲು ರೈಲು ಸಂಚಾರವಾಗಿದ್ದರೆ 30 ನಿಮಿಷಗಳು ಹಾಗೂ ರಾತ್ರಿ ಸಂಚಾರವಾಗಿದ್ದರೆ 1 ಗಂಟೆ ಕಾಲ ಮೊದಲು ನೀವು ನಿಲ್ದಾಣವನ್ನು ತಲುಪಬೇಕು. ನಿಗದಿತ ಸಮಯದೊಳಗೆ ರೈಲ್ವೆ ನಿಲ್ದಾಣ ತಲುಪಿದರೆ ಯಾವುದೇ ದಂಡ ಪಾವತಿಸುವ ಅಗತ್ಯ ಇರುವುದಿಲ್ಲ.
ಇನ್ನುಮುಂದೆ ಟಿಕೆಟ್ ಇದ್ದರೂ ಫ್ಲಾಟ್ ಫಾರ್ಮ್ ಟಿಕೆಟ್ ಪಡೆಯಬೇಕು
ಒಬ್ಬ ವ್ಯಕ್ತಿಯು ಹಗಲಿನಲ್ಲಿ 2 ಗಂಟೆ ಹಾಗೂ ರಾತ್ರಿವೇಳೆ 6 ಗಂಟೆಗಳ ಕಾಲ ನಿಲ್ದಾಣದಲ್ಲಿ ಉಳಿಯಬಹುದು. ಇದಕ್ಕಾಗಿ ನೀವು ನಿಮ್ಮ ಟಿಕೆಟ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.
ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ರೈಲ್ವೆ ನಿಲ್ದಾಣದಲ್ಲಿ ತಂಗಿದರೆ, ಪ್ಲಾಟ್ ಫಾರ್ಮ್ ಟಿಕೆಟ್ ಅನ್ನು ಪಡೆಯಬೇಕು. ಪ್ಲಾಟ್ ಫಾರ್ಮ್ ಟಿಕೆಟ್ ನ ಅವಧಿಯು 2 ಗಂಟೆಗಳ ವರೆಗೆ ಮಾತ್ರ ಇರುತ್ತದೆ. ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಫ್ಲಾಟ್ ಫಾರ್ಮ್ ಟಿಕೆಟ್ ಇಲ್ಲದೆ ತಂಗಿದ್ದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ.