Indian Railway: ರೈಲಿನಲ್ಲಿ ಮತ್ತು ನಿಲ್ದಾಣದಲ್ಲಿ ಈ ತಪ್ಪು ಮಾಡಿದರೆ 10 ವರ್ಷ ಜೈಲು, ಕೇಂದ್ರದ ಖಡಕ್ ನಿರ್ಧಾರ.
ಈ ಕೆಲವು ತಪ್ಪುಗಳಿಗೆ ರೈಲ್ವೆ ಇಲಾಖೆಯಲ್ಲಿ ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತದೆ.
Indian Railway Rules: ಭಾರತೀಯ ರೈಲ್ವೆ (Indian Railway) ಪ್ರಯಾಣಿಕರಿಗೆ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಅನೇಕ ರೀತಿಯ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಒದಗಿಸುತ್ತದೆ.
ಇತ್ತೀಚಿಗೆ ರೈಲ್ವೆ ಇಲಾಖೆಯಿಂದ ಹೊಸ ಹೊಸ ನಿಯಮಗಳು ಜಾರಿ ಆಗಿದೆ. ರೈಲ್ವೆಯು ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದರ ಜೊತೆಗೆ ಹಲವು ನಿಯಮಗಳನ್ನು ಹೊರ ತರುತ್ತಿದೆ.
ರೈಲುಗಳ ಮೇಲೆ ಕಲ್ಲು ಎಸೆಯುವವರಿಗೆ ಹೊಸ ಮಾಹಿತಿ
ರೈಲುಗಳ ಮೇಲೆ ಕಲ್ಲು ಎಸೆಯುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿವೆ. ಈ ಕಾರಣದಿಂದ ರೈಲ್ವೆ ಇಲಾಖೆ ಇಂತಹವರಿಗೆ ಕಠಿಣ ಶಿಕ್ಷೆಯನ್ನು ಕೊಡಲು ಮುಂದಾಗುತ್ತಿದೆ. ಅಲ್ಲದೆ ರೈಲಿನ ಮೇಲೆ ಕಲ್ಲು ತೂರಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗಲಿದೆ ಎನ್ನಲಾಗುತ್ತಿದೆ.
ಬೆಂಗಳೂರು ವಿಭಾಗದ ರೈಲ್ವೆ ಭದ್ರತಾ ಹಿರಿಯ ಆಯುಕ್ತ ದೇವಾಂಶ್ ಶುಕ್ಲಾ ಅವರು ಮಾಹಿತಿ ನೀಡಿದ್ದು, ರೈಲುಗಳ ಮೇಲೆ ಕಲ್ಲು ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದಿದ್ದಾರೆ.
ಕೆಲವು ಜನರು ಶೋಕಿಗಾಗಿ ಹಾಗು ಇನ್ನು ಕೆಲವು ಜನರು ವಿಕೃತ ಸಂತೋಷಕ್ಕಾಗಿ ರೈಲುಗಳ ಮೇಲೆ ಕಲ್ಲುಗಳನ್ನು ಎಸೆಯುತ್ತಾರೆ. ಹೀಗೆ ಕಲ್ಲು ಎಸೆದಾಗ ರೈಲುಗಳಿಗೆ ಹಾನಿಯಾಗುವುದು ಅಲ್ಲದೆ ಅದರಲ್ಲಿ ಪ್ರಯಾಣಿಸುತ್ತಿದ್ದಂತ ಪ್ರಯಾಣಿಕರು ಗಾಯಗೊಳ್ಳುವಂತೆ ಆಗಿದೆ. ಕೆಲವರು ಕಣ್ಣೇ ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ರೈಲುಗಳ ಮೇಲೆ ಕಲ್ಲು ಎಸೆತದಂತ ಸಂದರ್ಭಗಳಲ್ಲಿ ಕೆಲವು ವೇಳೆ ಪ್ರಯಾಣಿಕರ ಪ್ರಾಣವೇ ಹೋಗಬಹುದು. ಇಂತಹ ಪ್ರಕರಣಗಳನ್ನು ತಡೆಯಲು ಎಲ್ಲರೂ ಮುಂದಾಗಬೇಕು. ಇಲ್ಲವೇ ರೈಲ್ವೆ ಪೊಲೀಸರ ಗಮನಕ್ಕೆ ತರಬೇಕು.
ರೈಲಿನ ಮೇಲೆ ಕಲ್ಲು ಎಸೆದವರಿಗೆ 10 ವರ್ಷದ ವರೆಗೆ ಜೈಲು ಶಿಕ್ಷೆಯಾಗಬಹುದು ಎಂಬುದಾಗಿ ಎಚ್ಚರಿಸಿದರು. ಕೆಲ ದಿನಗಳಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು, ಮೆಟ್ರೋ ರೈಲು ಸೇರಿದಂತೆ ಹಲವು ರೈಲುಗಳ ಮೇಲೆ ಅಲ್ಲಲ್ಲಿ ಕಲ್ಲು ತೂರಿದಂತ ಪ್ರಕರಣಗಳು ನಡೆದಿದ್ದವು. ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ.