Railway Rule: ರೈಲಿನಲ್ಲಿ ಪ್ರಯಾಣಿಸುವಾಗ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ, ಹೊಸ ನಿಯಮ ಜಾರಿಗೆ.
ರೈಲಿನಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ಈ ತಪ್ಪುಗಳನ್ನ ಮಾಡಿದರೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನ ಅನುಭವಿಸಬೇಕು.
New Rule For Train Passengers: ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು (Train Travel) ಬಯಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ. ಇನ್ನು ರೈಲು ಪ್ರಯಾಣದಲ್ಲಿ ಸಾಕಷ್ಟು ನಿಯಮಗಳು ಕೂಡ ಇರುತ್ತವೆ.
ರೈಲಿನಲ್ಲಿ ಪಯಣಿಸುವವರು ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಇದೀಗ ರೈಲ್ವೆ ಸಂಚಾರ ನಿಯಮದಲ್ಲಿ ಹೊಸ ನಿಯಮವೊಂದು ಸೇರಿಕೊಂಡಿದೆ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಈ ತಪ್ಪುಗಳನ್ನು ಮಾಡಿದರೆ, ದಂಡದ ಜೊತೆಗೆ ನೀವು ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ.
ರೈಲು ಪ್ರಯಾಣ ಮಾಡುವವರಿಗೆ ಹೊಸ ನಿಯಮ
ರೈಲು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ರೈಲ್ವೆ ಇಲಾಖೆ ನೀಡುತ್ತದೆ. ಇನ್ನು ರೈಲ್ವೆ ಕಡೆಯಿಂದ ಎಸಿ ಕೋಚ್ ಗಳಲ್ಲಿ ವಿಶಷ ಸೌಲಭ್ಯ ನೀಡಲಾಗುತ್ತದೆ. ಎಸಿ ಕೋಚ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬೆಡ್ ಶೀಟ್, ದಿಂಬು ಸೇರಿದಂತೆ ಟವೆಲ್ ಗಳನ್ನೂ ನೀಡಲಾಗುತ್ತದೆ.
ಕೆಲವರು ಈ ಅಗತ್ಯವಸ್ತುಗಳ ಪ್ರಯೋಜನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರಯಾಣದ ಅನುಕೂಲಕ್ಕಾಗಿ ಒದಗಿಸಿದ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ತಪ್ಪುಗಳನ್ನು ಮಾಡಿದವರಿಗೆ ರೈಲ್ವೆ ಇಲಾಖೆ ದಂಡದ ಜೊತೆಗೆ ಶಿಕ್ಷೆ ವಿಧಿಸಲಿದೆ. ರೈಲ್ವೆ ಇಲಾಖೆ ಅಗತ್ಯ ವಸ್ತುಗಳನ್ನು ಕಳ್ಳತನ ಮಾಡಿದವರಿಗೆ ಯಾವ ಶಿಕ್ಷೆಯನ್ನು ವಿಧಿಸುತ್ತದೆ ಎಂದು ನೋಡೋಣ.
ನಿಯಮ ಪಾಲಿಸದಿದ್ದರೆ ದಂಡದ ಜೊತೆಗೆ ಜೈಲು ವಾಸ
ಯಾಣದ ಅನುಕೂಲಕ್ಕಾಗಿ ಒದಗಿಸಿದ ವಸ್ತುಗಳನ್ನು ಪ್ರಯಾಣಿಕರು ಮನೆಗೆ ಕದ್ದುಕೊಂಡು ಹೋದರೆ ರೈಲ್ವೆ ನಿಯಮದ ಪ್ರಕಾರ, ಮೊದಲ ಬಾರಿಗೆ ಸಿಕ್ಕಿಬಿದ್ದರೆ ಒಂದು ವರ್ಷದ ಜೈಲು ಶಿಕ್ಷೆ ಅಥವಾ 1000 ದಂಡವನ್ನು ವಿಧಿಸುತ್ತದೆ. ಎರಡನೇ ಬಾರಿ ಮತ್ತೆ ಅದೇ ತಪ್ಪು ಮಾಡಿದರೆ ಎರಡು ವರ್ಷ ಜೈಲು ಶಿಕ್ಷೆ ಅಥವಾ 2000 ದಂಡವನ್ನು ವಿಧಿಸಬಹುದು. ವ್ಯಕ್ತಿತು ಪದೇ ಪದೇ ಈ ತಪ್ಪುಗಳನ್ನು ಮಾಡಿದರೆ ವ್ಯಕ್ತಿಗೆ 5 ವರ್ಷಗಳ ಶಿಕ್ಷೆಯನ್ನು ವಿಧಿಸಬಹುದು.