Railway Rules: ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಇಂದಿನಿಂದ ಹೊಸ ನಿಯಮ, ತಪ್ಪಿದರೆ 5000 ರೂ ದಂಡ.

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಘೋಷಿಸಿದ ರೈಲ್ವೆ ಇಲಾಖೆ.

Indian Railways: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ ರೈಲು (Indian Railway) ಪ್ರಯಾಣವನ್ನ ಇಷ್ಟಪಡುತ್ತಾರೆ. ಹೌದು ದೂರ ಸ್ಥಳಗಳಿಗೆ ಬಹಳ ಬೇಗ ತಲುಪುವ ಕಾರಣ ಜನರು ರೈಲು ಪ್ರಯಾಣವನ್ನ ಬಹಳ ಇಷ್ಟಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ರೈಲು ಪ್ರಯಾಣ ಮಾಡುವ ಜನರಿಗೆ ಸಾಕಷ್ಟು ನಿಯಮಗಳು ಜಾರಿಯಲ್ಲಿ ಇದೆ.

ಹೌದು ರೈಲು ಪ್ರಯಾಣವನ್ನ ಮಾಡುವ ಜನರು ಕೆಲವು ಅಗತ್ಯ ನಿಯಮಗಳನ್ನ ತಿಳಿದುಕೊಳ್ಳುವುದು ಅತ್ಯವಶ್ಯಕ ಕೂಡ ಆಗಿರುತ್ತದೆ. ಅದೇ ರೀತಿಯಲ್ಲಿ ಈಗ ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವ ಜನರಿಗೆ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದ್ದು ಜನರು ಈ ನಿಯಮಗಳ ಕಡೆ ಗಮನವನ್ನ ಕೊಡುವುದು ಅತ್ಯವಶ್ಯಕವಾಗಿದೆ.

New rule for people traveling at night
Image Credit: News18

ರಾತ್ರಿ ಪ್ರಯಾಣ ಮಾಡುವ ಜನರಿಗೆ ಹೊಸ ನಿಯಮ
ಹೌದು ಜನರು ಹೆಚ್ಚು ರಾತ್ರಿ ಸಮಯದಲ್ಲಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ರೈಲಿನಲ್ಲಿ ಹೆಚ್ಚಿನ ಆಯಾಸ ಇಲ್ಲದೆ ಪ್ರಯಾಣ ಮಾಡಬಹುದು ಅನ್ನುವ ಕಾರಣಕ್ಕೆ ಜನರು ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡಲು ಬಹಳ ಇಷ್ಟಪಡುತ್ತಾರೆ. ಇದರ ನಡುವೆ ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವ ಜನರಿಗೆ ರೈಲ್ವೆ ಇಲಾಖೆ ಹೊಸ ನಿಯಮಗಳನ್ನ ಜಾರಿಗೊಳಿಸಿದ್ದು ಜನರು ಈ ನಿಯಮಗಳ ಪಾಲಿಸದಿದ್ದರೆ ದಂಡವನ್ನ ಖಚಿತವಾಗಿ ಕಟ್ಟಬೇಕಾಗುತ್ತದೆ.

ರಾತ್ರಿ ಪ್ರಯಾಣ ಮಾಡುವ ಜನರಿಗೆ ಇರುವ ನಿಯಮಗಳು ಏನು
ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವ ಜನರು 9 ಗಂಟೆಯ ನಂತರ ಮೊಬೈಲ್ ಬಳಸುವುದನ್ನ ನಿಷೇಧ ಮಾಡಲಾಗಿದೆ. ಹೌದು ಮೊಬೈಲ್ ಬಳಸಿದರು ಇತರರಿಗೆ ತೊಂದರೆತಾಗದಂತೆ ಬಳಸಬೇಕು ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಮೊಬೈಲ್ ಗಾನ ಕೇಳುವುದು, ಮೊಬೈಲ್ ಲೈಟ್ ಆನ್ ಮಾಡುವುದು, ಗಟ್ಟಿಯಾಗಿ ಮೊಬೈಲ್ ನಲ್ಲಿ ಮಾತನಾಡುವುದನ್ನ ನಿಷೇಧ ಮಾಡಲಾಗಿದೆ.

Railway department announced new rules for traveling by train.
Image Credit: Economictimes

ಹೆಚ್ಚು ಮೊಬೈಲ್ ಬಳಸುವ ಜನರಿಗೆ ಈ ನಿಯಮಗಳನ್ನ ಜಾರಿಗೆ ತರಲಾಗಿದೆ. ಇನ್ನು ಜನರು ಈ ನಿಯಮದ ಅಡಿಯಲ್ಲಿ ತಪ್ಪುಗಳನ್ನ ಮಾಡಿದರೆ 5000 ತನಕ ದಂಡ ಕೂಡ ಕಟ್ಟಬೇಕಾಗುತ್ತದೆ. ಸದ್ಯ ಈ ನಿಯಮ ತಿಳಿದುಕೊಂಡು ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುವುದು ಉತ್ತಮ. ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾತ್ರ ಈ ನಿಯಮ ಅನ್ವಯ ಆಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group