Ticket Concession: 60 ವರ್ಷ ಮೇಲ್ಪಟ್ಟ ಜನರಿಗೆ ರೈಲು ಟಿಕೆಟ್ ನಲ್ಲಿ ಇಷ್ಟು ರಿಯಾಯಿತಿ ಘೋಷಣೆ, ಸ್ಪಷ್ಟನೆ ನೀಡಿದ ಕೇಂದ್ರ

ರೈಲಿನಲ್ಲಿ ಪ್ರಯಾಣ ಮಾಡುವ 60 ವರ್ಷ ಮೇಲ್ಪಟ್ಟ ಹಿರಿಯನಾಗರೀಕರಿಗೆ ಟಿಕೆಟ್ ನಲ್ಲಿ ರಿಯಾಯಿತಿ

Indian Railway Ticket Concession For Senior Citizen: ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೈಲು ಸೇವೆ ಈಗ ಎಲ್ಲಾ ಪ್ರದೇಶಗಳಿಗೂ ಲಭ್ಯ ಇರುವುದರಿಂದ ಹಾಗು ಹಲವು ಸೌಲಭ್ಯಗಳನ್ನು ರೈಲ್ವೆ ನೀಡುವುದರಿಂದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.

ಆರಾಮದಾಯಕ ಪ್ರಯಾಣಕ್ಕೆ ರೈಲು ಬಹಳ ಸಹಾಯಕ ಆಗಿದೆ. ಹಾಗೆಯೆ ಹಿರಿಯ ನಾಗರಿಕರು ತಮಗೆ ರೈಲು ಟಿಕೆಟ್ ದರದಲ್ಲಿ ವಿನಾಯತಿ ಬೇಕು ಎಂದು ಒತ್ತಾಯಿಸುತ್ತಿದ್ದು, ಆ ಬಗ್ಗೆ ರೈಲೇ ಸಚಿವೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.

Indian Railway Ticket Concession For Senior Citizen
Image Credit: Aajtak

ಹಿರಿಯನಾಗರಿಕರಿಗೆ ಶೇಕಡಾ 55 ರಷ್ಟು ರಿಯಾಯಿತಿ ಸಿಗುತ್ತದೆ

ಹಿರಿಯನಾಗರಿಕರು ರೈಲಿನ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಬೇಕೆಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಭಾರತೀಯ ರೈಲ್ವೇಯು ಕೋವಿಡ್ ಪೂರ್ವದ ಸಮಯದಂತೆ ಟಿಕೆಟ್ ದರದ ರಿಯಾಯಿತಿಗಳನ್ನು ನೀಡಲು ಪ್ರಾರಂಬಿಸಿಸುತ್ತೇವೆ, ಪ್ರತಿ ಪ್ರಯಾಣಿಕರಿಗೆ ರೈಲು ಪ್ರಯಾಣದಲ್ಲಿ ಶೇಕಡಾ 55 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ. ಹಿರಿಯ ನಾಗರಿಕರು ಮತ್ತು ಮಾಧ್ಯಮದ ವ್ಯಕ್ತಿಗಳಿಗೆ ಕೋವಿಡ್ ಪೂರ್ವದ ಪ್ರಯಾಣ ದರದ ರಿಯಾಯಿತಿಗಳನ್ನು ಮರುಸ್ಥಾಪಿಸಲು ಒತ್ತಾಯಿಸಿದಾಗ ಅವರು ಇದನ್ನು ಹೇಳಿದರು.

Indian Railway New Rules
Image Credit: News 18

ಈ ಹಿಂದೆ ರೈಲ್ವೇ ರಿಯಾಯಿತಿ ನೀಡುತ್ತಿತ್ತು

Join Nadunudi News WhatsApp Group

ಮಾರ್ಚ್ 2020 ರಲ್ಲಿ ವಿಧಿಸಲಾದ COVID-19 ಲಾಕ್‌ಡೌನ್‌ಗೆ ಮೊದಲು, ರೈಲ್ವೇಯು ಹಿರಿಯ ನಾಗರಿಕರು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲು ದರಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿತ್ತು.

ಲಾಕ್‌ಡೌನ್ ಸಮಯದಲ್ಲಿ ರೈಲ್ವೇ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು, ಆದರೆ ಜೂನ್ 2022 ರಲ್ಲಿ ಅದು ಸಂಪೂರ್ಣವಾಗಿ ಪುನರಾರಂಭಗೊಂಡಾಗ ರೈಲ್ವೆ ಸಚಿವಾಲಯವು ಈ ರಿಯಾಯಿತಿಗಳನ್ನು ಪುನಃಸ್ಥಾಪಿಸಲಿಲ್ಲ ಮತ್ತು ಅಂದಿನಿಂದ ಸಂಸತ್ತಿನ ಉಭಯ ಸದನಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ಸಮಸ್ಯೆಯನ್ನು ಎತ್ತಿಹಿಡಿಯಲಾಗಿತ್ತು. ಆದರೆ ಈಗ ಈ ವಿಷಯದ ಕುರಿತು ಸಚಿವರು ಹೇಳಿಕೆ ನೀಡಿದ್ದಾರೆ. ಸದ್ಯ ಈ ರೀತಿಯಲ್ಲಿ ಯಾವುದೇ ರಿಯಾಯಿತಿ ಇಲ್ಲ ಮತ್ತು ಕೇಂದ್ರ ಇದರ ಕುರಿತು ಯಾವುದೇ ನಿರ್ಧಾರ ತಗೆದುಕೊಂಡಿಲ್ಲ ಎಂದು ಸಚಿವರು ಹೇಳಿದ್ದಾರೆ.

Join Nadunudi News WhatsApp Group