Ticket Rule: ಟಿಕೆಟ್ ಇದ್ದರೂ ನಿಮ್ಮ ಸೀಟ್ ನಲ್ಲಿ ಕುಳಿತುಕೊಳ್ಳುವಂತಿಲ್ಲ, ಭಾರತೀಯ ರೈಲ್ವೆ ಇನ್ನೊಂದು ನಿಯಮ.

ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದರು ಕೂಡ ನಿಮ್ಮ ಆಸನದಲ್ಲಿ ನೀವು ಕುಳಿತುಕೊಳ್ಳುವಂತಿಲ್ಲ.

Indian Railway Ticket Rule: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ನಿಯಮದಲ್ಲಿ ಬಾರಿ ಬದಲಾವಣೆ ತರಲಾಗಿದೆ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳ ಜೊತೆ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ. ರೈಲು ಪ್ರಯಾಣಿಕರು ರೈಲ್ವೆ ನಿಯಮವನ್ನು ಉಲ್ಲಂಘಿಸಬಾರದು. ರೈಲ್ವೆ ನಿಯಮದ ಉಲ್ಲಂಘನೆಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಇನ್ನು ಇತ್ತೀಚಿಗೆ ರೈಲ್ವೆ ಇಲಾಖೆ ಹತ್ತು ಹಲವು ಸೌಲಭ್ಯವನ್ನು ಪ್ರಯಾಣಿಕರ ರಕ್ಷಣೆಗಾಗಿ ಒದಗಿಸುತ್ತದೆ. ಇನ್ನು ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಕೂಡ ವಿನಾಯಿತಿಯನ್ನು ನೀಡುತ್ತಿದೆ. ಇದೀಗ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ನೀವು ರೈಲು ಪ್ರಯಾಣಿಕರಾಗಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ.

Indian Railway Ticket Rules latest
Image Credit: Thehansindia

ಇನ್ನುಮುಂದೆ ಟಿಕೆಟ್ ಇದ್ದರೂ ನಿಮ್ಮ ಸೀಟ್ ನಲ್ಲಿ ಕುಳಿತುಕೊಳ್ಳುವಂತಿಲ್ಲ
ಸಾಮಾನ್ಯವಾಗಿ ಪ್ರತಿನಿತ್ಯ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲು ಪ್ರಯಾಣಕ್ಕೆ ಟಿಕೆಟ್ ಪಡೆಯುವುದು ಮುಖ್ಯವಾಗಿರುತ್ತದೆ. ರೈಲು ಪ್ರಯಾಣಿಕರು ಟಿಕೆಟ್ ಪಡೆದಿದ್ದಾರೋ ಅಥವಾ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ರೈಲುಗಳಲ್ಲಿ ಟಿಟಿಇ ಅವರನ್ನು ನೇಮಿಸಲಾಗುತ್ತದೆ. ಪ್ರಯಾಣಿಕರು ಒಂದು ಅಥವಾ ಎರಡು ನಿಲ್ದಾಣಗಳ ನಂತರವೂ ರೈಲಿನಲ್ಲಿ ತನ್ನ ಬರ್ತ್ ತಲುಪುತ್ತಿದ್ದರೆ ಟಿಟಿಇ ಅವರ ಹಾಜರಾತಿಯನ್ನು ಗುರುತಿಸುತ್ತಿದ್ದರು.

ಆದರೆ ಈಗ ಪ್ರಯಾಣಿಕರು ರೈಲು ಹತ್ತುವಲ್ಲಿ 10 ನಿಮಿಷಕ್ಕಿಂತ ಹೆಚ್ಚು ಕಾಲ ತಡವಾದರೆ ಅವರ ಟಿಕೆಟ್ ರದ್ದುಗೊಳಿಸಿ ಬೇರೆ ಪ್ರಯಾಣಿಕರಿಗೆ ಸೀಟು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಟಿಟಿಇ ತಪಾಸಣೆಯ ವೇಳೆ ಕಾಯ್ದಿರಿಸಿದ ಟಿಕೆಟ್ ನ ಸೀಟ್ ನಲ್ಲಿ ಪ್ರಯಾಣಿಕರು ಬರಲು 10 ನಿಮಿಷ ಕಾಯುತ್ತಾರೆ. ಪ್ರಯಾಣಿಕರ ಅನುಪಸ್ಥಿತಿ ದಾಖಲಿಸಿದ ನಂತರ ಆ ಟಿಕೆಟ್ ಅನ್ನು ರದ್ದು ಪಡಿಸಿ ಇನ್ನೊಂದು ಪ್ರಯಾಣಿಕರಿಗೆ ಆ ಸೀಟನ್ನು ನೀಡಲಾಗುತ್ತದೆ.

Indian Railway Ticket Rules latest
Image Credit: Livemint

ಪ್ರಯಾಣಿಕರ ಅನುಪಸ್ಥಿತಿ ಟಿಕೆಟ್ ರದ್ದತಿಗೆ ಕಾರಣವಾಗಬಹುದು
TTE ಅವರ ಬಳಿ ಇದೀಗ ಹ್ಯಾಂಡ್ ಹೋಲ್ಡ್ ಟರ್ಮಿನಲ್ ಇರುವ ಕಾರಣ ಅವರು ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸುತ್ತಾರೆ ಮತ್ತು ಅವರ ಆಗಮನದ ವಿವರಗಳನ್ನು ಭರ್ತಿ ಮಾಡುತ್ತಾರೆ. ಟಿಕೆಟ್ ಅನ್ನು ಕಾಯ್ದಿರಿಸಿದ ನಂತರ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಸ್ಟೇಷನ್ ನಿಂದಲೇ ರೈಲನ್ನು ಹತ್ತಬೇಕು ಮತ್ತು ತಮ್ಮ ಸೀಟ್ ಅನ್ನು ತಲುಪಬೇಕು. ಪ್ರಯಾಣಿಕರು ಹೀಗೆ ಮಾಡದಿದ್ದರೆ ಅವರ ಟಿಕೆಟ್ ರದ್ದಾಗುತ್ತದೆ. ಇನ್ನುಮುಂದೆ ನೀವು ಕಾಯ್ದಿರಿಸಿದ ಆಸನಕ್ಕೆ ನಿಗದಿತ ಸಮಯದೊಳಗೆ ತಲುಪಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group