Waiting Ticket: ಟಿಕೆಟ್ ವೈಟಿಂಗ್ ಲಿಸ್ಟ್ ಇದ್ದರೂ ಕೂಡ ಪ್ರಯಾಣ ಮಾಡಬಹುದು, ರೈಲು ಪ್ರಯಾಣಿಕರಿಗೆ ಇನ್ನೊಂದು ಹೊಸ ಸೇವೆ.

ಈಗ ಟಿಕೆಟ್ ವೈಟಿಂಗ್ ಲಿಸ್ಟ್ ಇದ್ದರೂ ಕೂಡ ಪ್ರಯಾಣ ಮಾಡಬಹುದು.

Railway Waiting Ticket Rule: ರೈಲ್ವೆ ಪ್ರಯಾಣಕ್ಕೆ ಮುಖ್ಯವಾಗಿ Railway Ticket ಅನ್ನು ಪಡೆಯುವುದು ಅಗತ್ಯವಾಗಿದೆ. Ticket ಇಲ್ಲದಿದ್ದರೆ ರೈಲು ಪ್ರಯಾಣ ಮಾಡಲು ಸಾದ್ಯವಾಗುವುಲ್ಲ. ಇನ್ನು ರೈಲ್ವೆ ಟಿಕೆಟ್ ಪಡೆದುಕೊಳ್ಳುವುದು ಪ್ರಯಾಣಿಕರಿಗೆ ಸ್ವಲ್ಪ ಕಷ್ಟವಾಗುತ್ತದೆ ಎನ್ನಬಹುದು. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಈಗಾಗಲೇ Online Ticket Booking ಅನ್ನು ಪರಿಚಯಿಸಿದೆ. ರೈಲುಗಳಲ್ಲಿ ಸೀಟು ಖಾಲಿಯಾದಾಗ ನೀವು ದೃಢೀಕೃತ ಟಿಕೆಟ್ ಪಡೆಯುತ್ತೀರಿ.

ಸೀಟು ಖಾಲಿ ಇಲ್ಲದಿದ್ದರೆ ನಿಮಗೆ ವೇಟಿಂಗ್ ಟಿಕೆಟ್ ನೀಡಲಾಗುತ್ತದೆ. ನಿಮಗೆ Waiting Ticket ಸಿಕ್ಕರೆ ನಿಮಗೆ ಸೀಟ್ ಲಭ್ಯವಾಗುವುದಿಲ್ಲ. ಇನ್ನೊಬ್ಬರು ತಮ್ಮ ಟಿಕೆಟ್ ಅನ್ನು ರದ್ದುಪಡಿಸುವವರೆಗೂ ಕಾಯಬೇಕಾಗುತ್ತದೆ. ನೀವು ವೈಟಿಂಗ್ ಲಿಸ್ಟ್ ನಲ್ಲಿ ಇದ್ದರು ಕೂಡ ಟಿಕೆಟ್ ಅನ್ನು ಹುಡುಕಿಕೊಂಡು ಸುಲಭವಾಗಿ ಪ್ರಯಾಣಿಸಲು ರೈಲ್ವೆ ಅವಕಾಶವನ್ನು ನೀಡುತ್ತಿದೆ. ಟಿಕೆಟ್ ವೈಟಿಂಗ್ ಲಿಸ್ಟ್ ಇದ್ದರೂ ಕೂಡ ಹೇಗೆ ಪ್ರಯಾಣ ಮಾಡಬಹುದು..? ಎನ್ನುವ ಬಗ್ಗೆ ವಿವರ ಇಲ್ಲಿದೆ.

Railway Waiting Ticket Rule
Image Credit: Zeebiz

ಟಿಕೆಟ್ ವೈಟಿಂಗ್ ಲಿಸ್ಟ್ ಇದ್ದರೂ ಕೂಡ ಪ್ರಯಾಣ ಮಾಡಬಹುದು
ಕೆಲವೊಮ್ಮೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಟಿಕೆಟ್ ಫುಲ್ ಆದ ನಂತರ ಟಿಕೆಟ್ ಮಾಡಲು ಕಷ್ಟವಾಗುತ್ತದೆ. ಈ ವೇಳೆ ಟಿಕೆಟ್ ಅನ್ನು ವೈಟಿಂಗ್ ನಲ್ಲಿ ಇಡಲಾಗುತ್ತದೆ. ಇನ್ನು Ticket ಕನ್ಫರ್ಮ್ ಆಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಲು TTE ಅನ್ನು ಸಂಪರ್ಕಿಸಬೇಕಾಗುತ್ತದೆ.

TTE ರೈಲಿನಲ್ಲಿ ಖಾಲಿ ಸೀಟ್ ಇದ್ದರೆ ನಿಮಗೆ ಮಾಹಿತಿ ನೀಡುತ್ತಾರೆ. ಆದರೆ ಇದೀಗ ರೈಲ್ವೆ ಇಲಾಖೆ ಈ ಬಗ್ಗೆ ಮಾಹಿತಿ ತಿಳಿಯಲು ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಯೋಜನೆ ಮೂಲಕ ಪ್ರಯಾಣಿಕರು ಮೂರನೇ ವ್ಯಕ್ತಿಯ ಸಹಾಯವಿಲ್ಲದೆ ರೈಲಿನಲ್ಲಿ ಸೀಟ್ ಖಾಲಿ ಇದೆಯೋ ಇಲ್ಲವೋ ಎನ್ನುವುದು ನೀವು ತಿಳಿದುಕೊಳ್ಳಬಹುದು.

Indian Railway Waiting Ticket Rule Update
Image Credit: The Begusarai

ರೈಲಿನಲ್ಲಿ ಖಾಲಿ ಸೀಟುಗಳನ್ನು ಈ ರೀತಿಯಾಗಿ ಹುಡುಕಿ
*ನೀವು IRCTC ವೆಬ್ ಸೈಟ್ ಅಥವಾ ಅಪ್ಲಿಕೇಶನ್ ನ ಸಹಾಯದ ಮೂಲಕ ರೈಲಿನಲ್ಲಿ ಖಾಲಿ ಸೀಟ್ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group

*ಅಲ್ಲಿ Charts / vacancy ಎಂಬ ಆಯ್ಕೆ ಕಾಣುತ್ತಾದೆ.

*ಅದರ ಮೇಲೆ ಕ್ಲಿಕ್ ಮಾಡಿದರೆ Reservation Charts ತೆರೆಯುತ್ತದೆ.

*Reservation Charts ತೆರೆದಾಗ ಮೊದಲ ಬಾಕ್ಸ್ ನಲ್ಲಿ ರೈಲಿನ ಹೆಸರು ಅಥವಾ ರೈಲು ಸಂಖ್ಯೆಯನ್ನು ಮತ್ತು ಎರಡನೇ ಬಾಕ್ಸ್ ನಲ್ಲಿ ಬೋರ್ಡಿಂಗ್ ನಿಲ್ದಾಣದ ಹೆಸರನ್ನು ನಮೂದಿಸಬೇಕು.

*ಇದಾದ ಬಳಿಕ ನೀವು ಗೆಟ್ ಟ್ರೈನ್ ಚಾರ್ಟ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಖಾಲಿ ಸೀಟುಗಳ ಬಗ್ಗೆ ನಿಮಗೆ ಮಾಹಿತಿ ಸಿಗಲಿದೆ.

Join Nadunudi News WhatsApp Group