Indian Railways ticket Fair Hike: ಭಾರತೀಯ ರೈಲ್ವೆ ಜಗತ್ತಿನ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಭಾರತದಲ್ಲಿ ಪ್ರತಿನಿತ್ಯ ಎರಡು ಕೋಟಿಗೂ ಅಧಿಕ ಪ್ರಯಾಣಿಕರು ರೈಲುಗಳಲ್ಲಿ ಸಂಚಾರ ಮಾಡುತ್ತಾರೆ. ಇದು 65,000 ಕಿಲೋಮೀಟರ್‌ಗಿಂತಲೂ ಹೆಚ್ಚು ರೈಲು ಮಾರ್ಗವನ್ನು ಹೊಂದಿದ್ದು, ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ದೂರ ಊರುಗಳಿಗೆ ಬಹಳ ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಹೆಚ್ಚಿನ ಪ್ರಯಾಣಿಕರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇತ್ತೀಚಿಗೆ ಭಾರತೀಯ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು. ಇದೀಗ ರೈಲ್ವೆ ಇಲಾಖೆ ರೈಲ್ವೆ ಟಿಕೆಟ್ ದರದಲ್ಲಿ ಏರಿಕೆ ಮಾಡಿದ್ದೂ, ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ. ಡಿಸೆಂಬರ್ 26 ರಿಂದ ಭಾರತೀಯ ರೈಲುಗಳ ಟಿಕೆಟ್ ದರ ಏರಿಕೆ ಆಗಲಿದೆ. ಹಾಗಾದರೆ ಡಿಸೆಂಬರ್ 26 ರಿಂದ ರೈಲುಗಳ ಟಿಕೆಟ್ ದರದಲ್ಲಿ ಎಷ್ಟು ಏರಿಕೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರೈಲ್ವೆ ಟಿಕೆಟ್ ದರದಲ್ಲಿ ಏರಿಕೆ
ಇದೀಗ ರೈಲ್ವೆ ಇಲಾಖೆ ಟಿಕೆಟ್ ದರದಲ್ಲಿ ಏರಿಕೆ ಮಾಡಿದೆ. ಈ ಹೊಸ ದರಗಳು ಡಿಸೆಂಬರ್ 26, 2025 ರಿಂದ ಜಾರಿಗೆ ಬರಲಿದೆ. ಆದರೆ ಈ ಹೊಸ ದರಗಳು ದೈನಂದಿನ ಪ್ರಯಾಣಿಕರು ಮತ್ತು ಕಡಿಮೆ ದೂರ ಪ್ರಯಾಣ ಮಾಡುವ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬಿರುದಿಲ್ಲ. ಬದಲಾದ ಟಿಕೆಟ್ ದರಗಳು ಈ ಕೆಳಗಿನಂತಿದೆ.
- ಸಾಮಾನ್ಯ ವರ್ಗದಲ್ಲಿ 215 ಕಿಲೋಮೀಟರ್ ಗಳವರೆಗಿನ ಪ್ರಯಾಣಕ್ಕೆ ಯಾವುದೇ ಏರಿಕೆ ಇಲ್ಲ. ಆದರೆ 215 ಕಿಮೀ ಮೀರಿದ ಪ್ರಯಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ 1 ಪೈಸೆ ಹೆಚ್ಚು ಪಾವತಿಮಾಡಬೇಕು.
- ಎಕ್ಸ್ಪ್ರೆಸ್ ಟ್ರೈನ್ ಗಳ AC ಮತ್ತು NON AC ತರಗತಿಗಳಲ್ಲಿ ಪ್ರತಿ ಕಿಮೀ ಗೆ 2 ಪೈಸೆ ಏರಿಕೆ ಮಾಡಲಾಗಿದೆ. (500 ಕಿಲೋಮೀಟರ್ NON AC ಪ್ರಯಾಣಕ್ಕೆ ಸುಮಾರು 10 ರೂಪಾಯಿ ಹೆಚ್ಚುವರಿ ಬರುತ್ತದೆ. ಅದೇ ರೀತಿ AC ಕೋಚ್ ಗಳಲ್ಲಿ ಕೂಡ ಸಮಾನ ಹೆಚ್ಚಳ ಮಾಡಲಾಗಿದೆ.
- ಈ ಬದಲಾವಣೆ Rajdhani, Shatabdi, Trains, Vande Bharat, Tejas, Humsafar ಮುಂತಾದ ಪ್ರೀಮಿಯಂ ರೈಲುಗಳಿಗೂ ಅನ್ವಯವಾಗುತ್ತದೆ.
ಯಾರಿಗೆ ವಿನಾಯಿತಿ ನೀಡಲಾಗಿದೆ
- ದೈನಂದಿನ ಪ್ರಯಾಣಿಕರಿಗೆ ವಿನಾಯಿತಿ ನೀಡಲಾಗಿದೆ.
- ಉಪನಗರ ರೈಲುಗಳು ಮತ್ತು ಮಾಸಿಕ ಸೀಸನ್ ಟಿಕೆಟ್ ಗಳಿಗೆ ಯಾವುದೇ ಬದಲಾವಣೆ ಇಲ್ಲ.
- ಸಾಮಾನ್ಯ ವರ್ಗದಲ್ಲಿ 215 ಕಿಮೀ ಒಳಗಿನ ಪ್ರಯಾಣಕ್ಕೂ ಏರಿಕೆ ಇಲ್ಲ.
ಟಿಕೆಟ್ ದರ ಏರಿಕೆ ಮಾಡಲು ಕಾರಣ ಏನು?
- ಕಳೆದ ಒಂದು ದಶಕದಲ್ಲಿ ದೇಶದಲ್ಲಿ ರೈಲ್ವೆ ಜಾಲವನ್ನು ವಿಸ್ತರಿಸಲಾಗಿದೆ. ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಿ ವೆಚ್ಚ ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚ ಸುಮಾರು 1.15 ಲಕ್ಷ ಕೋಟಿ ದಾಟಿದ್ದು, ಪಿಂಚಣಿ ವೆಚ್ಚ 60 ಸಾವಿರ ಕೋಟಿ ರೂಪಾಯಿ ಆಗಿದೆ.
- 2024-25 ರಲ್ಲಿ ಒಟ್ಟು ಕಾರ್ಯಾಚರಣೆ ವೆಚ್ಚ ಸುಮಾರು 2.63 ಲಕ್ಷ ಕೋಟಿ ರೂಪಾಯಿ. ಈ ಸಣ್ಣ ಏರಿಕೆಯಿಂದ 2025-26 ರ ಹಣಕಾಸು ವರ್ಷದಲ್ಲಿ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ.
- ಇದು ಜುಲೈ 2025 ರಲ್ಲಿ ಆದ ಏರಿಕೆಯ ನಂತರ ಮಾಡಿದ ಏರಿಕೆಯಾಗಿದೆ (ಆಗ ಸುಮಾರು 700 ಕೋಟಿ ಆದಾಯ ಬಂದಿದೆ). ರೈಲ್ವೆಯು ಸರಕು ಸಾಗಾಣಿಕೆ ಹೆಚ್ಚಿಸಿ ಮತ್ತು ದಕ್ಷತೆ ಸುಧಾರಿಸಿ ವೆಚ್ಚ ನಿಯಂತ್ರಿಸುತ್ತಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

