Indian Railway Lower Berth Quota Facility For Womens: ದೇಶದಲ್ಲಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ರೈಲು ಪ್ರಯಾಣ ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕವಾಗಿದೆ. ಇತ್ತೀಚಿಗೆ ರೈಲ್ವೆ ನಿಮಯದಲ್ಲಿ ಅನೇಕ ಬದಲಾವಣೆಯನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ 60 ವರ್ಷ ಮೇಲ್ಪಟ್ಟವರಿಗಾಗಿ ರೈಲ್ವೆ ಇಲಾಖೆ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ರೈಲ್ವೆ ಇಲಾಖೆ 45 ವರ್ಷ ಮೇಲ್ಪಟ್ಟ ಮಹಿಳೆಯರಿಗೂ ಕೂಡ ಹೊಸ ಯೋಜನೆಯನ್ನು ಜಾರಿಗೆ ತಂದಿಗೆ. ಹಾಗಾದರೆ 45 ವರ್ಷ ದಾಟಿದ ಮಹಿಳೆಯರಿಗೆ ಭಾರತೀಯ ರೈಲ್ವೆ ನೀಡುತ್ತಿರುವ ಹೊಸ ಸೇವೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾರು ಈ ಯೋಜನೆಗೆ ಅರ್ಹರು?
* ಹಿರಿಯ ನಾಗರಿಕರು, ಅಂದರೆ 60 ವರ್ಷ ಮೇಲ್ಪಟ್ಟ ಪುರುಷರು
* 45 ವರ್ಷ ಮೇಲ್ಪಟ್ಟ ಮಹಿಳೆಯರು
* ಗರ್ಭಿಣಿ ಮಹಿಳೆಯರು
* ಅಂಗವೈಫಲ್ಯ ಹೊಂದಿದವರು
ಟಿಕೆಟ್ ಬುಕ್ ಮಾಡುವಾಗ ನೀವು ಲೋವರ್ ಬರ್ತ್ ಆಯ್ಕೆ ಮಾಡಿಕೊಳ್ಳದಿದ್ದರೂ, ರೈಲ್ವೆ ಇಲಾಖೆಯ ಕಂಪ್ಯೂಟರ್ರೈಸ್ಡ್ ಸಿಸ್ಟಮ್ ಲೋವರ್ ಬರ್ತ್ ನಲ್ಲಿ ಖಾಲಿ ಇದ್ದರೆ ನಿಮಗೆ ಹಂಚಿಕೆ ಮಾಡುತ್ತದೆ. ಇದರಿಂದ TTE ಬಳಿ ಸೀಟ್ ಬದಲಾವಣೆಗಾಗಿ ಕೇಳುವ ಅಗತ್ಯ ಇಲ್ಲ. ಇದನ್ನು ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರು ರಾಜ್ಯ ಸಭೆಯಲ್ಲಿ ಡಿಸೆಂಬರ್ 5 ರಂದು ಜಾರಿಗೆ ತಂದಿದ್ದಾರೆ.
ಪ್ರತಿ ಕೋಚ್ ನಲ್ಲಿ ಎಷ್ಟು ಲೋವರ್ ಬರ್ತ್ ಮೀಸಲು ಇರುತ್ತದೆ?
* ಸ್ಲೀಪರ್ ಕ್ಲಾಸ್ (SL) ನಲ್ಲಿ 6 ರಿಂದ 7 ಲೋವರ್ ಬರ್ತ್ ಗಳು ಇರುತ್ತದೆ.
* ಥರ್ಡ್ AC (3AC) ನಲ್ಲಿ 4 ರಿಂದ 5 ಲೋವರ್ ಬರ್ತ್ ಗಳು ಇರುತ್ತದೆ.
* ಸೆಕೆಂಡ್ AC (2AC) ನಲ್ಲಿ 3 ರಿಂದ 4 ಲೋವರ್ ಬರ್ತ್ ಗಳು ಇರುತ್ತದೆ.
* ಫರ್ಸ್ಟ್ AC (1AC) ನಲ್ಲಿ 2 ರಿಂದ 3 ಲೋವರ್ ಬರ್ತ್ ಗಳು ಇರುತ್ತದೆ.
* Reserved Second ಸಿಟ್ಟಿಂಗ್ (2S) /ಚೇರ್ ಕಾರ್ (CC) ನಲ್ಲಿ 4 ಸೀಟ್ ಗಳು ಇರುತ್ತದೆ.
ಬುಕ್ ಮಾಡುವ ಸರಳ ವಿಧಾನ
IRCTC ವೆಬ್ ಸೀಟ್ ಅಥವಾ ಆಫ್ ನಲ್ಲಿ ಟಿಕೆಟ್ ಬುಕ್ ಮಾಡುವಾಗ ನಿಮ್ಮ ವಯಕ್ತಿಕ ವಿವರವನ್ನು {ವಯಸ್ಸು, ಲಿಂಗ, ವರ್ಗ (ಹಿರಿಯ / ಗರ್ಭಿಣಿ / PwD)} ನೀಡಬೇಕು. ರೈಲ್ವೆ ಇಲಾಖೆಯ ಕಂಪ್ಯೂಟರ್ರೈಸ್ಡ್ ಸಿಸ್ಟಮ್ ಲೋವರ್ ಬರ್ತ್ ಸೀಟ್ ಹಚಿಕೆ ನೀಡುತ್ತದೆ. “Confirm ticket only if lower berth available” ಆಯ್ಕೆಯನ್ನು ಬಳಸಬೇಕು. ಲೋವರ್ ಬರ್ತ್ ಖಾಲಿ ಇಲ್ಲದಿದ್ದರೆ ಟಿಕೆಟ್ ಬುಕ್ ಆಗುವುದಿಲ್ಲ ಮತ್ತು ಪ್ರಯಾಣದಲ್ಲಿ ಖಾಲಿ ಬರ್ತ್ ಸಿಕ್ಕರೆ, TTE ಸಹಾಯ ಪಡೆದುಕೊಂಡು ಸೀಟ್ ಪಡೆದುಕೊಳ್ಳಬಹುದು.
ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು
* ವಂದೇ ಭಾರತ್ ರೈಲು ಗಳಲ್ಲಿ ಬ್ರೈಲ್ ಸೈನ್ ಬೋರ್ಡ್ ಗಳು, ವೀಲ್ ಚೇರ್ ಪಾರ್ಕಿಂಗ್, ವಿಶಾಲ ಬಾಗಿಲುಗಳು ಮತ್ತು ಲ್ಯಾವೇಟರಿಗಳು ಇರುತ್ತದೆ.
* ವೀಲ್ ಚೇರ್ ಸೇವೆ, ಪ್ರಯಾಣಿಕ ಸಹಾಯಕ ಕೌಂಟರ್‌ಗಳು ಸ್ಟೇಷನ್ ನಲ್ಲಿ ಲಭ್ಯವಿದೆ.
* PwDಗೆ 75% ಕನ್ಸೆಷನ್, ಕೆಲವು ವಿದ್ಯಾರ್ಥಿ ಮತ್ತು ರೋಗಿ ವರ್ಗಗಳಿಗೆ ರಿಯಾಯಿತಿ ನೀಡಲಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

