Indian Railways Luggage Rules: ದೇಶದಲ್ಲಿ ಹೆಚ್ಚಿನ ಜನರು ರೈಲ್ವೆ ಪ್ರಯಾಣವನ್ನು ಆರಿಸಿಕೊಳ್ಳುತ್ತಾರೆ. ಏಕೆಂದರೆ ರೈಲು ಪ್ರಯಾಣ ಆರಾಮದಾಯಕವಾಗಿರುತ್ತದೆ ಅನ್ನುವ ಕಾರಣಕ್ಕೆ. ರೈಲ್ವ ಇಲಾಖೆ ಪ್ರಯಾಣಿಕರಿಗೆ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಇದೀಗ ಕೇಂದ್ರ ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರು ರೈಲಿನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಎಷ್ಟು ಲಗೇಜ್ ಅನ್ನು ತೆಗೆದುಕೊಂಡು ಹೋಗಬೇಕು ಅನ್ನುವ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಉಚಿತ ಮಿತಿಗಿಂತ ಹೆಚ್ಚು ಲಗೇಜ್ ಸಾಗಿಸಿದರೆ ಶುಲ್ಕವನ್ನು ಪಾವತಿ ಮಾಡಬೇಕು. ಹಾಗಾದರೆ ಲಗೇಜ್ ನ ಉಚಿತ ಮಿತಿ ಎಷ್ಟು..? ಹಾಗೆ ಮಿತಿ ಮೀರಿದರೆ ಎಷ್ಟು ಶುಲ್ಕ ಪಾವತಿ ಮಾಡಬೇಕು..? ಈ ಹೊಸ ನಿಯಮದ ಪ್ರಯಾಣಿಕರಿಗೆ ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆ ಲಗೇಜ್ ನಿಯಮ
ಪ್ರಯಾಣಿಕರು ತಮ್ಮ ಕ್ಲಾಸ್ ಗೆ ಅನುಗುಣವಾಗಿ ಲಗೇಜ್ ನಿಯಮವನ್ನು ಜಾರಿಗೆ ತರಲಾಗಿದೆ.
* AC ಫಸ್ಟ್ ಕ್ಲಾಸ್ 70 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 150 ಕೆಜಿ)
* AC 2 – ಟೈರ್ 50 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 100 ಕೆಜಿ)
* AC 3 – ಟೈರ್ / ಸ್ಲೀಪರ್ 40 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 80 ಕೆಜಿ)
* ಜನರಲ್ 35 kg (ಹೆಚ್ಚುವರಿ ಶುಲ್ಕದೊಂದಿಗೆ ಗರಿಷ್ಠ 70 KG )
ನಿಗದಿತ ತೂಕ ಮೀರಿದರೆ ಪ್ರಯಾಣಿಕರು, ಸಾಮಾನ್ಯ ದರಕ್ಕಿಂತ 1.5 ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಈ ನಿಯಮ ಹೊಸದಲ್ಲ ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಬಗ್ಗೆ ಚರ್ಚೆ ನೆಡೆಯುತ್ತಿದೆ.
ಲಗೇಜ್ ಬುಕಿಂಗ್
* ಸ್ಥಳ
ಪ್ರಯಾಣದ ನಿಲ್ದಾಣದ ಪಾರ್ಸೆಲ್ / ಲಗೇಜ್ ಕಚೇರಿಯಲ್ಲಿ ಬುಕ್ ಮಾಡಬಹುದು.
* ಸಮಯ
ಪ್ರಯಾಣದ ದಿನಕ್ಕಿಂತ ಒಂದು ದಿನ ಮೊದಲು ಬುಕ್ ಮಾಡುವುದು ಸೂಕ್ತ.
* ದಾಖಲೆ
ಟಿಕೆಟ್ ಮತ್ತು ಲಗೇಜ್ ಬುಕಿಂಗ್ ರಸೀದಿ ಅವಶ್ಯಕವಾಗಿ ಇಟ್ಟುಕೊಳ್ಳಿ.
ಹೆಚ್ಚು ಲಗೇಜ್ ಸಾಗಿಸುದರಿಂದ ತೊಂದರೆಗಳು ಏನು?
* ರೈಲಿನಲ್ಲಿ ಸ್ಥಳ ಕಡಿಮೆಯಾಗಿ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.
* ಸುರಕ್ಷತೆ, ನೈರ್ಮಲ್ಯ ಮತ್ತು ಸೌಕರ್ಯಕ್ಕೆ ಇದು ಧಕ್ಕೆಯಾಗುತ್ತದೆ.
* ಹೆಚ್ಚು ಲಗೇಜ್ ನಿಂದಾಗಿ ಭದ್ರತಾ ಪರಿಶೀಲನೆ ಕಷ್ಟವಾಗುತ್ತದೆ.
* ನಿಲ್ದಾಣ ಗಳಲ್ಲಿ ಮತ್ತು ರೈಲಿನಲ್ಲಿ ಲಗೇಜ್ ನಿರ್ವಹಣೆಗೆ ರೈಲ್ವೆಯ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.
ಪ್ರಯಾಣಿಕರಿಗೆ ಎಚ್ಚರಿಕೆ
ನಿಲ್ದಾಣಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿ ಲಗೇಜ್ ಪರಿಶೀಲಿಸಲಾಗುತ್ತಿದೆ. ಈ ಕಾರಣದಿಂದ ಪ್ರಯಾಣಕ್ಕೂ ಮುನ್ನ ನಿಮ್ಮ ಟಿಕೆಟ್ ಕ್ಲಾಸ್ ಪರಿಶೀಲಿಸಿಕೊಂಡು ಲಗೇಜ್ ತೂಕ ಮಾಡಿ. ಲಗೇಜ್ ಮಿತಿಗಿಂತ ಹೆಚ್ಚಿದ್ದರೆ ಮೊದಲೇ ಶುಲ್ಕ ಪಾವತಿ ಮಾಡಿ ಬುಕ್ ಮಾಡಿಕೊಳ್ಳಿ. ಲಗೇಜ್ ಬುಕಿಂಗ್ ರಸೀದಿ ಅವಶ್ಯಕವಾಗಿ ಇಟ್ಟುಕೊಳ್ಳಿ. ಇದರಿಂದ ಹೆಚ್ಚುವರಿ ದಂಡದಿಂದ ತಪ್ಪಿಸಿಕೊಳ್ಳಬಹುದು. ದೊಡ್ಡ ವಸ್ತುಗಳನ್ನು ಕಂಪಾರ್ಟ್ಮೆಂಟ್ ಬದಲು ಬ್ರೇಕ್ ವ್ಯಾನ್ ನಲ್ಲಿ ಬುಕ್ ಮಾಡಲು ಸೂಚನೆ ನೀಡಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

