Indian Railway Ticket Rules 2026: ಭಾರತದಲ್ಲಿ ಪ್ರತಿನಿತ್ಯ ಎರಡು ಕೋಟಿಗೂ ಅಧಿಕ ಪ್ರಯಾಣಿಕರು ರೈಲುಗಳಲ್ಲಿ ಸಂಚಾರ ಮಾಡುತ್ತಾರೆ. ದೂರ ಪ್ರದೇಶಗಳಿಗೆ ಬಹಳ ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಹೆಚ್ಚಿನ ಪ್ರಯಾಣಿಕರು ರೈಲು ಪ್ರಯಾಣವನ್ನು ಆರಿಸಿಕೊಳ್ಳುತ್ತಾರೆ. ಇತ್ತೀಚಿಗೆ ಭಾರತೀಯ ರೈಲ್ವೆ ಈಗ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು. ಇದೀಗ ರೈಲ್ವೆ ಇಲಾಖೆ ಟಿಕೆಟ್ ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಯನ್ನ ಜಾರಿಗೆ ತಂದಿದೆ. ರೈಲ್ವೆ ಟಿಕೆಟ್ ಗೆ ಸಂಬಂಧಿಸಿದಂತೆ ನೆಡೆಯುತ್ತಿರುವ ವಂಚನೆಯನ್ನು ತಡೆಯುವ ಉದ್ದೇಶದಿಂದ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಹಾಗಾದರೆ ನಾವೀಗ ಆ ಹೊಸ ಬದಲಾವಣೆ ಏನು ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಮೊಬೈಲ್ ನಲ್ಲಿ ರೈಲು ಟಿಕೆಟ್ ಇನ್ನುಮುಂದೆ ಮಾನ್ಯವಲ್ಲ
ಈ ಹಿಂದೆ ರೈಲ್ವೆ ಪ್ರಯಾಣಿಕರು ರೈಲ್ವೆ ಟಿಕೆಟ್ ಗಳನ್ನೂ ಮೊಬೈಲ್ ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿದ್ದರು. ಆದರೆ ಇನ್ನುಮುಂದೆ ಅನ್ ರೀಸರ್ವ್ಡ್ ಟಿಕೆಟ್ ಗಳನ್ನ ಮೊಬೈಲ್ ನಲ್ಲಿ ತೋರಿಸುವುದು ಮಾನ್ಯವಲ್ಲ. AI ಬಳಸಿ ನಕಲಿ ಟಿಕೆಟ್ ಗಳನ್ನೂ ತೋರಿಸುತ್ತಿರುವ ಹಗರಣವನ್ನು ತಡೆಯಲು ರೈಲ್ವೆ ಇಲಾಖೆ 2025 ರ ಕೊನೆಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪೇಪರ್ ಲೆಸ್ ಪ್ರಯಾಣವನ್ನು ರೈಲ್ವೆ ಇಲಾಖೆ ಪ್ರೋಸ್ಸಾಹಿಸುತ್ತದೆ ಆದರೆ, ನಕಲಿ ಟಿಕೆಟ್ ಸಮಸ್ಯೆ ಹೆಚ್ಚಾದ ಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಹೊಸ ನಿಯಮದ ಪ್ರಕಾರ
ಭಾರತೀಯ ರೈಲ್ವೆ ಡಿಜಿಟಲ್ ಟಿಕೆಟ್ ಗಳು ಮಾನ್ಯ ಎಂದು ಸ್ಪಷ್ಟಪಡಿಸಿದೆ, ಆದರೆ ಕಾಯ್ದಿರಿಸದ ಟಿಕೆಟ್ ಗಳಿಗೆ (unreserved tickets) ಕೆಲವೊಮ್ಮೆ ಮುದ್ರಿತ ಪ್ರತಿ ಬೇಕಾಗುತ್ತದೆ, ವಿಶೇಷವಾಗಿ ನಕಲಿ ಟಿಕೆಟ್ ಗಳ ಹಾವಳಿ ತಡೆಯಲು ಈ ನಿರ್ಧಾರವನ್ನು ಕೈಗೊಂಡಿದೆ. ನೀವು UTS ಆಪ್ ನಿಂದ ಬುಕ್ ಮಾಡಿದರೆ ಅದೇ ಮೊಬೈಲ್ ನಲ್ಲಿ ಟಿಕೆಟ್ ತೋರಿಸಬಹುದು, ಆದರೆ ಕಾಯ್ದಿರಿಸದ ಟಿಕೆಟ್ ಗಳನ್ನು ಮುದ್ರಿಸದಿದ್ದರೆ ಟಿಕೆಟ್ ಪರಿಶೀಲನೆಯ ಸಮಯದಲ್ಲಿ ಟಿಕೆಟ್ ಅನ್ನು ಮೊಬೈಲ್ ನಲ್ಲಿ ತೋರಿಸುವಂತಿಲ್ಲ. ಒಟ್ಟಾರೆಯಾಗಿ ಮೊಬೈಲ್ ನಲ್ಲಿ ಬುಕ್ ಮಾಡಿದ ಡಿಜಿಟಲ್ ಟಿಕೆಟ್ ಗಳು ಮಾನ್ಯವಾಗಿರುತ್ತದೆ ಮತ್ತು ಮುದ್ರಣ ಕಡ್ಡಾಯವಲ್ಲ, ಆದರೆ ನಕಲಿ ಟಿಕೆಟ್ ಹಾವಳಿ ತಡೆಯಲು ಮುದ್ರಿತ ಪ್ರತಿಗಳನ್ನು ಕೊಂಡೊಯ್ಯುವುದು ಅಗತ್ಯವಾಗಿದೆ.
RailOne app
ಮಾರ್ಚ್ 2026 ರಿಂದ UTS ಆಪ್ ಸಂಪೂರ್ಣ ನಿಲ್ಲಿಸುವ ಸಾಧ್ಯತೆ ಇದೆ. ಅನ್ ರೀಸರ್ವ್ಡ್ ಟಿಕೆಟ್ ಬುಕಿಂಗ್ RailOne app ನಲ್ಲಿ ಮಾಡಿಕೊಳ್ಳಬಹುದಾಗಿದೆ. RailOne app ನಲ್ಲಿ ಈಗಾಗಲೇ R-Wallet ಮೂಲಕ ಪಾವತಿ ಮಾಡಿದರೆ ಮಾತ್ರ ಶೇ.3 ಕ್ಯಾಶ್ ಬ್ಯಾಕ್ ಸಿಗುತ್ತಿತ್ತು. ಆದರೆ ಇನ್ನುಮುಂದೆ UPI, Debit card, Credit card, Net Banking ಸೇರಿದಂತೆ ಯಾವುದೇ ಡಿಜಿಟಲ್ ಪಾವತಿ ಮಾಡಿದರೂ ನೇರವಾಗಿ ಶೇ.3 ರಿಯಾಯಿತಿ ಸಿಗಲಿದೆ.
ಸಲಹೆ
- ಟಿಕೆಟ್ ಚೆಕಿಂಗ್ ಸಮಯದಲ್ಲಿ TTE ಗಳು QR ಕೋಡ್ ಸ್ಕ್ಯಾನ್ ಮಾಡಿ ಪರಿಶೀಲನೆ ಮಾಡುತ್ತಾರೆ.
- ನಕಲಿ ಟಿಕೆಟ್ ಬಳಸಿದರೆ ದಂಡ ಮತ್ತು ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.
- ಹಬ್ಬಗಳ ಸಮಯದಲ್ಲಿ ಪ್ರಯಾಣಿಸುವವರು ಮುಂಚಿತವಾಗಿ ಪ್ರಿಂಟ್ ತೆಗೆದುಕೊಳ್ಳುದು ಉತ್ತಮ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

