Traffic Rules 2023: ಈಗ ಸೀಟ್ ಬೆಲ್ಟ್ ಹಾಕಿದರು ಬೀಳಲಿದೆ ದಂಡ, ಹೊಸ ಟ್ರಾಫಿಕ್ ನಿಯಮ ಜಾರಿಗೆ.
ಸೀಟ್ ಬೆಲ್ಟ್ ವಿಷಯವಾಗಿ ಹೊಸ ನಿಯಮವಾಗಿ ಹೊಸ ನಿಮ್ಮ ಜಾರಿಗೆ ತಂಡ ಟ್ರಾಫಿಕ್ ಪೊಲೀಸರು.
Seat Belt Traffic Rules: ಸಂಚಾರ ವ್ಯವಸ್ಥೆಯಲ್ಲಿ ಈಗಾಗಲೇ ಸರ್ಕಾರ ಹಲವು ರೀತಿಯಾದ ನಿಯಮಗಳನ್ನು ಜಾರಿಗೆ ತಂದಿದೆ. ರಸ್ತೆಯಲ್ಲಿ ಸಂಚರಿಸುವಾಗ ವಾಹನ ಚಾಲಕರು ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರು (Traffic Police) ಅವರಿಗೆ ದಂಡ ವಿಧಿಸತ್ತಾರೆ. ಈಗಾಗಲೇ ಹೆಲ್ಮೆಟ್ ಧರಿಸದಿದ್ದರೆ ದಂಡ ಬೀಳುತ್ತದೆ ಎಂಬ ನಿಯಮ ಜಾರಿಯಾಗಿದೆ. ಕಾರಿನಲ್ಲಿ ಸಂಚರಿಸುವಾಗ ಸಹ ಸೀಟ್ ಬೆಲ್ಟ್ ಹಾಕದಿದ್ದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ.
ಕಾರಿನ ಪ್ರಯಾಣಿಕರು ಸಹ ಇನ್ನು ಮುಂದೆ ಸೀಟ್ ಬೆಲ್ಟ್ ಧರಿಸಬೇಕು
ಇದೀಗ ಕಾರು ಪ್ರಯಾಣಿಕರಿಗೆ ಎಚ್ಚರದ ಸುದ್ದಿ ಒಂದು ಹೊರ ಬಿದ್ದಿದೆ. ಬೆಂಗಳೂರಿನ ಹಲವು ಕಾರು ಪ್ರಯಾಣಿಕರಿಗೆ ಟ್ರಾಫಿಕ್ ಇಲಾಖೆ ದಂಡ ವಿಧಿಸಿದೆ. ಆದರೆ ದಂಡ ವಿಧಿಸಿದ ಕಾರಣ ಕೇಳಿ ಕಾರು ಪ್ರಯಾಣಿಕರು ಆಶ್ಚರ್ಯಕಚಿತರಾಗಿದ್ದಾರೆ.
ಕಾರು ಚಾಲಕರು ಮಾತ್ರವಲ್ಲ ಕಾರಿನ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಇದೆ ನಿಯಮದ ಪ್ರಕಾರ ಹಲವು ಕಾರು ಪ್ರಯಾಣಿಕರಿಗೆ ಭಾರಿ ದಂಡ ವಿಧಿಸಲಾಗಿದೆ.
ಕಾರಿನಲ್ಲಿ ಪ್ರಯಾಣಿಸುವವರಿಗೆ ಟ್ರಾಫಿಕ್ ಇಲಾಖೆಯಿಂದ ಹೊಸ ಸುದ್ದಿ
ಸಾಕಷ್ಟು ರಾಜಕೀಯ ನಾಯಕರು ಸಹ ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಮಾಡುವುದು ಹಲವು ಕಡೆ ಕಂಡು ಬಂದಿದೆ. ಅವರಿಗೆ ಈ ನಿಯಮ ಅನ್ವಯವಾಗುವುದಿಲ್ಲವೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಇದೀಗ ಟ್ರಾಫಿಕ್ ಇಲಾಖೆ ಕಾರು ಪ್ರಯಾಣದ ವೇಳೆ ಸಹ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸುವಂತೆ ಸೂಚನೆ ನೀಡಿದೆ.
ಹಲವು ಕಡೆ ಟ್ರಾಫಿಕ್ ಪೋಲಿಸರು ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ದಂಡ ವಿಧಿಸಿದ್ದಾರೆ. ಇನ್ನು ಮುಂದೆ ಈ ನಿಯಮ ರಾಜಕಾರಣಿಗಳಿಗೂ ಹಾಗು ಸಾಮಾನ್ಯ ಜನರಿಗೂ ಅನ್ವಯ ಆಗಲಿದೆ ಎಂದು ಟ್ರಾಫಿಕ್ ಇಲಾಖೆ ವರದಿ ನೀಡಿದೆ.