Lakshadweep Island: ಲಕ್ಷದ್ವೀಪಕ್ಕೆ ಹೋಗಲು ಲೈಸನ್ಸ್ ಪಡೆಯುವುದು ಹೇಗೆ…? ಈ ಲೈಸನ್ಸ್ ಇಲ್ಲದಿದ್ದರೆ ಲಕ್ಷದ್ವೀಪಕ್ಕೆ ನೋ ಎಂಟ್ರಿ

ಲಕ್ಷದ್ವೀಪಕ್ಕೆ ಹೋಗಲು ಲೈಸನ್ಸ್ ಅಗತ್ಯ, ಅಷ್ಟಕ್ಕೂ ಲೈಸನ್ಸ್ ಮಾಡಿಸುವುದು ಹೇಗೆ ಗೊತ್ತಾ...?

Indians Need Entry Permit To Visit Lakshadweep: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಯವರು ಹಿಂದಿನ ವಾರ ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೋ ಗಳನ್ನೂ ಶೇರ್ ಮಾಡಿದ ಕುರಿತು ನಾವು ಕೇಳಿದ್ದೇವೆ. ಲಕ್ಷದ್ವೀಪದ ಕೆಲವು ಅದ್ಭುತ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ದೇಶದಲ್ಲಿ ಇಂತಹ ಸೌಂದರ್ಯ ಇರುವ ಸ್ಥಳ ಇದ್ದು ಬೇರೆಕಡೆ ಯಾಕೆ ಹೋಗಬೇಕು ಎಂದು ಹೇಳಿದ್ದಾರೆ. ಸಧ್ಯಕ್ಕೆ ಈಗ ಇದೆ ವಿಚಾರಕ್ಕೆ ಚಿಕ್ಕ ಕೇಂದ್ರಾಡಳಿತ ಪ್ರದೇಶ ಸಾಕಷ್ಟು ಸುದ್ದಿಯಲ್ಲಿದೆ. ಲಕ್ಷದ್ವೀಪದ ಶಾಂತಿಯುತ ಪರಿಸರವನ್ನು ಒಂದು ಆಕರ್ಷಣೆ ಎಂದು ಬಣ್ಣಿಸಿದ್ದರು, ಗೂಗಲ್ ಸರ್ಚ್‌ನಲ್ಲೂ ಈ ವಿಚಾರ ಟ್ರೆಂಡಿಂಗ್‌ ನಲ್ಲಿದೆ.

Entry Permit For Lakshadweep
Image Credit: Holidify

ಲಕ್ಷದ್ವೀಪಕ್ಕೆ ಭೇಟಿ ನೀಡಲು ಪರವಾನಿಗೆ ಅಗತ್ಯ

ಈಗಾಗಲೇ ಪ್ರಧಾನಿ ಮೋದಿಯವರು ಲಕ್ಷ ದ್ವೀಪದ ಸೌಂದರ್ಯದ ಬಗ್ಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದು, ಈ ಫೋಟೋಗಳನ್ನು ನೋಡಿದವರಿಗೆಲ್ಲ ಒಮ್ಮೆ ಲಕ್ಷದ್ವೀಪಕ್ಕೆ ಭೇಟಿ ನೀಡಬೇಕೆಂದು ಅನಿಸುತ್ತದೆ. ಆದರೆ ಲಕ್ಷದ್ವೀಪಕ್ಕೆ ಭೇಟಿ ನೀಡಲು ಭಾರತೀಯರಿಗೂ ಪ್ರವೇಶ ಪರವಾನಗಿ ಅಗತ್ಯವಿದೆ. ನಿಯಮಗಳ ಪ್ರಕಾರ ಲಕ್ಷದ್ವೀಪಕ್ಕೆ ಭೇಟಿ ನೀಡಲು ಪರವಾನಗಿಯನ್ನು ಪಡೆಯಬೇಕು. ಅಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳನ್ನು ರಕ್ಷಿಸಲು ಈ ನಿಯಮ ಮಾಡಲಾಗಿದೆ.

ಲಕ್ಷದ್ವೀಪ ಭೇಟಿಗೆ ಅಗತ್ಯ ದಾಖಲೆಗಳು

Join Nadunudi News WhatsApp Group

ಲಕ್ಷದ್ವೀಪ ಭೇಟಿಗೆ ಪರವಾನಗಿ ಪಡೆಯಲು ಮಾನ್ಯವಾದ ಗುರುತಿನ ಚೀಟಿಯ ಫೋಟೊಕಾಪಿ ಸಲ್ಲಿಸಬೇಕಾಗುತ್ತದೆ. (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಇತ್ಯಾದಿ). ಇದಲ್ಲದೆ ಪ್ರಯಾಣದ ಪುರಾವೆ ಅಂದರೆ ವಿಮಾನ ಟಿಕೆಟ್ ಅಥವಾ ಬೋಟ್‌ ಬುಕ್ಕಿಂಗ್‌ ವಿವರಗಳನ್ನು ನೀಡಬೇಕು. ಪ್ರತಿ ಅರ್ಜಿದಾರರಿಗೆ 50 ರೂಪಾಯಿ, 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಪರಂಪರೆ ಶುಲ್ಕ 100 ರೂಪಾಯಿ, 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಶುಲ್ಕ 200 ರೂಪಾಯಿ ವಿಧಿಸಲಾಗುತ್ತದೆ.

ಲಕ್ಷದ್ವೀಪ, ಮಿನಿಕಾಯ್ ಮತ್ತು ಅಮಿನಿ ದ್ವೀಪಗಳ ಪ್ರವೇಶಕ್ಕೆ ಪರವಾನಗಿಯಲ್ಲಿ ಕೆಲವರಿಗೆ ಮಾತ್ರ ವಿನಾಯಿತಿ ಇದೆ. ಈ ದ್ವೀಪಗಳಲ್ಲಿ ಕೆಲಸ ಮಾಡುತ್ತಿರುವ ಅಥವಾ ಭೇಟಿ ನೀಡುವ ಸರ್ಕಾರಿ ಅಧಿಕಾರಿಗಳ ಕುಟುಂಬ ಸದಸ್ಯರು ಮತ್ತು ಸಶಸ್ತ್ರ ಪಡೆಗಳ ಸದಸ್ಯರಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ.

Indians need entry permit to visit Lakshadweep
Image Credit: Jagran

ಲಕ್ಷದ್ವೀಪ ಭೇಟಿಗೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇ-ಪರ್ಮಿಟ್ ಪೋರ್ಟಲ್‌ ಗೆ ಹೋಗಬೇಕು (https://epermit.utl.gov.in/pages/signup). ಅಲ್ಲಿ ಖಾತೆಯನ್ನು ರಚಿಸಿ ಮತ್ತು ಅಗತ್ಯವಿರುವ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ. ಈ ಪ್ರಕ್ರಿಯೆಯ ನಂತರ, ಪ್ರವಾಸಕ್ಕೆ 15 ದಿನಗಳ ಮೊದಲು ಇಮೇಲ್ ಮೂಲಕ ಪರವಾನಗಿ ಸಿಗುವ ನಿರೀಕ್ಷೆ ಇರುತ್ತದೆ.

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಲಕ್ಷದ್ವೀಪ ಆಡಳಿತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ಜಿಲ್ಲಾಧಿಕಾರಿ ಕಚೇರಿಯಿಂದ ಪಡೆದುಕೊಳ್ಳಬೇಕು. ನಂತರ ಅರ್ಜಿ ನಮೂನೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ದೀರ್ಘವಾಗಿರುತ್ತದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

Join Nadunudi News WhatsApp Group