Indie River: ಮಾರುಕಟ್ಟೆಗೆ ಬಂತು 90 ಕಿಲೋ ಮೀಟರ್ ಮೈಲೇಜ್ ಕೊಡುವ SUV ಸ್ಕೂಟರ್, ಅಗ್ಗದ ಸ್ಕೂಟರ್.
90 ಕಿಲೋಮೀಟರ್ ಮೈಲೇಜ್ ಕೊಡುವ SUV ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್.
Indie River Electric Scooter: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಹೆಚ್ಚಿನ ಸೆಲ್ ಕಾಣುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ (Electric Vehicle) ತಯಾರಾಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತವೆ.
ಇದೀಗ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಾಕ ಕಂಪನಿಯದ ಇಂಡಿ ರಿವರ್ (Indie River) ತನ್ನ ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯದಲ್ಲೇ ಈ ಎಲೆಕ್ಟ್ರಿಕ್ ಮಾದರಿ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ.
ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್
ಇಂಡೀ ರಿವರ್ ಕಂಪನಿಯು ನೂತನ ವಿನ್ಯಾಸದ ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಗೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಂಪನಿಯು ಗ್ರಾಹಕರಿಗೆ ಟೆಸ್ಟ್ ರೇಡ್ ಮತ್ತು ಬುಕಿಂಗ್ ನೀಡುತ್ತಿದೆ. ಈ ಸ್ಕೂಟರ್ ನಲ್ಲಿ ಮೂರು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದೆ. ಈ ಮೋಡ್ ಗಳು ಬೈಕ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಈ ಬೈಕ್ ನಲ್ಲಿ 33 ಲೀಟರ್ ಸೀಟ್ ಸ್ಟೋರೇಜ್ ಜೊತೆಗೆ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಲೈಟ್ ಗಳನ್ನೂ ನೀಡಲಾಗಿದೆ.
ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ (Indie River Electric Scooter) ಬೆಲೆ
ಈ ಸ್ಕೂಟರ್ ನಲ್ಲಿ ಸವಾರರ ಅನುಕೂಲಕ್ಕಾಗಿ ಮುಂಭಾಗದಲ್ಲಿ 12 ಲೀಟರ್ ಸ್ಟೋರೇಜ್ ನೀಡಲಾಗಿದೆ. ಸೆಪ್ಟೆಂಬರ್ ನಲ್ಲಿಯೇ ಈ ಸ್ಕೂಟರ್ ನ ವಿತರಣೆ ಆಗಲಿದೆ ಎನ್ನುವ ಬಗ್ಗೆ ಕಂಪನಿ ಹೇಳಿಕೊಂಡಿದೆ. ಇನ್ನು ನೂತನ ಸುಧಾರಿತ ವೈಶಿಷ್ಟ್ಯಗಳಿರುವ ಈ ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಗೆ 1,25,000 ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ವಿಭಿನ್ನ ವೈಶಿಷ್ಟ್ಯಗಳಿರುವ ಈ ಸ್ಕೂಟರ್ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರಣ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.
ಮಾರುಕಟ್ಟೆಗೆ ಬಂತು 90 ಕಿಲೋ ಮೀಟರ್ ಮೈಲೇಜ್ ಕೊಡುವ ಸ್ಕೂಟರ್
ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ 4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದು ಇಕೋ ಮೋಡ್‌ನಲ್ಲಿ 26 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ 6.7 kWh ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಗಂಟೆಗೆ 90 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಸ್ಕೂಟರ್ ಕೇವಲ 4 ಸೆಕೆಂಡುಗಳಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ.