Infinix Laptop: Jio Book ಬೆನ್ನಲ್ಲೇ ಇನ್ನೊಂದು ಕಡಿಮೆ ಬೆಲೆಯ ಲಪ್ಟ್ ಟಾಪ್ ಲಾಂಚ್ ಮಾಡಿದ Infinix, 512 GB ಸ್ಟೋರೇಜ್.
ಇದೀಗ ಮಾರುಕಟ್ಟೆಗೆ ಇನ್ ಫಿನಿಕ್ಸ್ ಕಂಪನಿ ಬಜೆಟ್ ಬೆಲೆಯಲ್ಲಿ ಹೊಸ ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡಿದೆ.
Infinix INBook X3 Slim Laptop: ಡಿಜಿಟಲ್ ಯುಗದಲ್ಲಿ ಇತ್ತೀಚಿಗೆ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್(Laptop) ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಇನ್ನು ಸಂಬಂಧಪಟ್ಟ ಕಂಪನಿಗಳು ವಿವಿಧ ವಿನ್ಯಾಸದ ಹೊಸ ಹೊಸ ಮಾದರಿಯ ವಸ್ತುಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಇನ್ನು ಪ್ರತಿಷ್ಠಿತ ಇ- ಕಾಮರ್ಸ್ ವೆಬ್ ಸೈಟ್ ಗಳೂ ಕೂಡ ಕೆಲ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ರಿಯಾಯಿತಿಯನ್ನು ಕೂಡ ಘೋಷಿಸಿವೆ.
ಆನ್ಲೈನ್ ವೆಬ್ ಸೈಟ್ ಗಾಲ ರಿಯಾಯಿತಿಯ ಮೇಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇತ್ತೀಚಿಗೆ ವರ್ಕ್ ಫ್ರಮ್ ಹೋಮ್ ಹೆಚ್ಚುತ್ತಿದೆ. ಮನೆಯಲ್ಲಿಯೇ ಕುಳಿತು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಹೀಗಾಗಿ ಮನೆಗಳಲ್ಲಿ ಒಂದಾದರು ಲ್ಯಾಪ್ ಟಾಪ್ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಲ್ಯಾಪ್ ಟಾಪ್ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯಲ್ಲೂ ಲಭ್ಯವಿರುತ್ತದೆ. ಮಾರುಕಟ್ಟೆಯಲ್ಲಿ ಇದೀಗ ಹೊಸ ಲ್ಯಾಪ್ ಟಾಪ್ ಬಿಡುಗಡೆಯಾಗಿದೆ.
ಇನ್ ಫಿನಿಕ್ಸ್ ಇನ್ ಬುಕ್ X3 ಸ್ಲಿಮ್ (Infinix INBook X3 Slim)
ಇದೀಗ ಮಾರುಕಟ್ಟೆಗೆ ಇನ್ ಫಿನಿಕ್ಸ್ ಕಂಪನಿ ಬಜೆಟ್ ಬೆಲೆಯಲ್ಲಿ ಹೊಸ ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡಿದೆ. ಇನ್ ಫಿನಿಕ್ಸ್ ಇನ್ ಬುಕ್ X3 ಸ್ಲಿಮ್ ಲ್ಯಾಪ್ ಟಾಪ್ 14 ಇಂಚಿನ HD ಡಿಸ್ ಪ್ಲೇ ಅನ್ನು ಹೊಂದಿದೆ. 300 ನೈಟ್ಸ್ ಗರಿಷ್ಟ ಬ್ರೈಟ್ನೆಸ್ ಆಯ್ಕೆಯನ್ನು ನೀಡಲಾಗಿದ್ದು, 100 % sRGB ಕವರೇಜ್ ಹಾಗೂ 72 % NTSC ಹೊಂದಿದೆ. ಈ ಲ್ಯಾಪ್ ಟಾಪ್ ಇಂಟೆಲ್ ಯುಹೆಚ್ ಡಿ ಗ್ರಾಫಿಕ್ಸ್ ಬೆಂಬಲದೊಂದಿಗೆ 4 .4 GHz 12 ನೇ ಜನ್ ಇಂಟೆಲ್ ಕೋರ್ i3 -1215U ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸಲಿದೆ.
ಇನ್ ಫಿನಿಕ್ಸ್ ಇನ್ ಬುಕ್ X3 ಸ್ಲಿಮ್ ಬೆಲೆ
ಇದರ ಜೊತೆ X3 4 .4 GHz 12th ಜನ್ ಇಂಟೆಲ್ ಕೋರ್ i5 -1235U ಮತ್ತು ಐರಿಸ್ Xe ಗ್ರಾಫಿಕ್ಸ್ ನೊಂದಿಗೆ 4 .7 GHz ಕೋರ್ i7 -1255U ಪ್ರೊಸೆಸರ್ ಬಲವನ್ನು ಪಡೆಯಲಿದೆ. ಇನ್ನು ಈ ಲ್ಯಾಪ್ ಟಾಪ್ 8GB RAM 512GB ಸ್ಟೋರೇಜ್ ರೂಪಾಂತರಕ್ಕೆ 33,990 ರೂ. ಆಗಿದ್ದು, 16GB RAM ಹಾಗೂ 512GBGB ಸ್ಟೋರೇಜ್ ಆಯ್ಕೆಗೆ 49,990 ರೂ. ಆಗಿದೆ.
ಇನ್ ಫಿನಿಕ್ಸ್ ಇನ್ ಬುಕ್ X3 ಸ್ಲಿಮ್ ಫೀಚರ್
ಈ ಲ್ಯಾಪ್ ಟಪ್ ಎಸ್ ಡಿ ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸಲಿದೆ. ವೈ-ಫೈ 6 802.11ax, ಬ್ಲೂಟೂತ್ ಆವೃತ್ತಿ 5.1, ಯುಎಸ್‌ಬಿ ಟೈಪ್-ಸಿ ಪೋರ್ಟ್, ಹೆಚ್ ಡಿಎಮ್ ಐ ಸೇರಿದಂತೆ ವಿವಿಧ ಸಮರ್ಕ ಆಯ್ಕೆ ಲಭ್ಯವಿದೆ. ಕೆಂಪು, ಹಸಿರು, ಬೂದು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿ ಈ ಲ್ಯಾಪ್ ಟಪ್ ಅನ್ನು ಖರೀದಿಸಬಹುದು.ಇನ್ನು ಆಗಸ್ಟ್ 25 ರಿಂದ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ.