Infinix: JBL ಸ್ಪೀಕರ್ ಮತ್ತು 108 MP DSLR ಕ್ಯಾಮೆರಾ, ಈ ಅಗ್ಗದ ಮೊಬೈಲ್ ಮುಂದೆ ಬೇಡಿಕೆ ಕಳೆದುಕೊಂಡ Iphone

ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ ಹೊಂದಿದ ನೂತನ ಸ್ಮಾರ್ಟ್ ಫೋನ್ ಪರಿಚಯಿಸಿದ Infinix.

Infinix Note 30 5G Smart Phone: ಸದ್ಯ ದೇಶದಲ್ಲಿ ಮೊಬೈಲ್ ಫೋನ್ ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತಿವೆ. Vivo, Samsung, Techno, IQ, Realme, Infinix ಸೇರಿದಂತೆ ಇನ್ನಿತರ ಕಂಪನಿಗಳು ಹೊಸ ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತವೆ.

ಇದೀಗ ವಿವಿಧ ಮಾದರಿಯ ಫೋನ್ ಗಳಿಗೆ ಪೈಪೋಟಿ ನೀಡಲು Infinix ಇದೀಗ ನೂತನ ಮಾದರಿಯ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ನಾವು ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ ಹೊಂದಿದ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿ ತಿಳಿಯೋಣ.

Infinix Note 30 5G smart phone
Image Credit: Gizbot

Infinix Note 30 5G Smart Phone Features
Infinix Note 30 5G ಸ್ಮಾರ್ಟ್ ಫೋನ್ 6.78 ಇಂಚಿನ FHD ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 SoC ಚಿಪ್‌ಸೆಟ್ ಅನ್ನು ಹೊಂದಿದೆ. ಈ ಚಿಪ್‌ಸೆಟ್‌ನೊಂದಿಗೆ 5G ಸಂಪರ್ಕವನ್ನು ಒದಗಿಸಲಾಗಿದೆ. ಹಾಗೆ JBL ಸ್ಟಿರಿಯೊ ಸ್ಪೀಕರ್‌ ಅನ್ನು ಸಹ ಈ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿದೆ.

Infinix Note 30 5G Smart Phone Camera
Infinix Note 30 5G ಸ್ಮಾರ್ಟ್ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್​ನಿಂದ ಕೂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸೆನ್ಸಾರ್​ನದ್ದಾಗಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. Infinix Note 30 5G Smart Phone 5000 mAh ಬ್ಯಾಟರಿಯನ್ನು ಪಡೆದುಕೊಂಡಿದೆ.

Infinix Note 30 5G smart phone price
Image Credit: Yugatech

Infinix Note 30 5G Smart Phone Price
Infinix Note 30 5G ಸ್ಮಾರ್ಟ್ ಫೋನ್ ನ ಎರಡು ರೂಪಾಂತರ ಭಾರತದಲ್ಲಿ ಲಭ್ಯವಿದೆ. 4GB RAM ಹಾಗೂ 128GB ಸ್ಟೋರೇಜ್ ರೂಪಾಂತರದ ಬೆಲೆ 14999 ರೂಪಾಯಿ ಆಗಿದೆ. 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 15,999 ರೂಪಾಯಿ ಆಗಿದೆ.

Join Nadunudi News WhatsApp Group

Join Nadunudi News WhatsApp Group