BSNL Freedom Offer 1 Rupee Sim: BSNL ತನ್ನ ಗ್ರಾಹಕರ ಅಗತ್ಯವನ್ನು ಪೂರೈಸಲು ಆಕರ್ಷಕ ಯೋಜನೆಯನ್ನು ಜಾರಿಗೆ ತರುತ್ತಿರುತ್ತದೆ. ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನ ಜಾರಿಗೆ ತರುವಲ್ಲಿ BSNL ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲ್ಲ. ಹೌದು ಇದೀಗ ನಾವು ನಿಮಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ BSNL ಪರಿಚಯಿಸಿದ ಒಂದು ಅದ್ಭುತ ಪ್ರೀಪೇಯ್ಡ್ ಯೋಜನೆಯ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ.
BSNL ಫ್ರೀಡಂ ಆಫರ್
BSNL ತನ್ನ ಹೊಸ ಗ್ರಾಹಕರಿಗಾಗಿ “ಫ್ರೀಡಂ ಆಫರ್” ಎಂಬ ವಿಶೇಷ ಯೋಜನೆಯನ್ನು ಆಗಸ್ಟ್ 1 ರಿಂದ ಆಗಸ್ಟ್ 31, 2025 ರವರೆಗೆ ಲಭ್ಯವಾಗುವಂತೆ ಘೋಷಿಸಿದೆ. ಈ ಯೋಜನೆಯಡಿ, ಕೇವಲ 1 ರೂಪಾಯಿಗೆ 30 ದಿನಗಳ ಕಾಲ 2GB 4G ಡೇಟಾ, ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು ಉಚಿತ 4G ಸಿಮ್ ಕಾರ್ಡ್ ಲಭ್ಯವಿದೆ. ಈ ಆಫರ್ ಭಾರತದಾದ್ಯಂತ BSNL ರಿಟೇಲ್ ಸ್ಟೋರ್‌ಗಳಲ್ಲಿ ಮತ್ತು ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ (CSC) ಲಭ್ಯವಿದೆ.
ಯಾರು ಪ್ರಯೋಜನವನ್ನ ಪಡೆದುಕೊಳ್ಳಬಹುದು
ಈ ಯೋಜನೆಯು ಕೇವಲ ಹೊಸ BSNL ಗ್ರಾಹಕರಿಗೆ ಮಾತ್ರ ಸೀಮಿತವಾಗಿದೆ. ಈಗಾಗಲೇ BSNL ಬಳಕೆದಾರರಾಗಿರುವವರು ಈ ಆಫರ್‌ನ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಒಂದು ವೇಳೆ ನೀವು BSNLನ ಗ್ರಾಹಕರಾಗಿದ್ದರೆ, ಈ ಆಫರ್‌ಗೆ ಅರ್ಹರಾಗಿರುವುದಿಲ್ಲ. ಹೊಸ ಗ್ರಾಹಕರು BSNL ರಿಟೇಲ್ ಅಂಗಡಿಗಳಿಗೆ ಭೇಟಿ ನೀಡಿ ಅಥವಾ CSC ಮೂಲಕ ಸಿಮ್ ಕಾರ್ಡ್ ಪಡೆದು ಈ ಯೋಜನೆಯನ್ನು ಸಕ್ರಿಯಗೊಳಿಸಬಹುದು.
ವಿಶೇಷತೆಗಳು
- 2GB 4G ಡೇಟಾ: ದಿನಕ್ಕೆ 2GB ಹೈ-ಸ್ಪೀಡ್ 4G ಡೇಟಾ. ಈ ಮಿತಿಯನ್ನು ಮೀರಿದ ನಂತರ, ವೇಗವು 40kbpsಗೆ ಇಳಿಯುತ್ತದೆ.
- ಅನಿಯಮಿತ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಕರೆಗಳು.
- 100 SMS: ದಿನಕ್ಕೆ 100 ಉಚಿತ SMS.
- ಉಚಿತ 4G ಸಿಮ್: ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸಿಮ್ ಕಾರ್ಡ್ ಲಭ್ಯ.
ಷರತ್ತು
ಈ ಆಫರ್‌ನ ಒಂದು ಪ್ರಮುಖ ಷರತ್ತು ಏನೆಂದರೆ, ಇದು ಕೇವಲ ಹೊಸ ಗ್ರಾಹಕರಿಗೆ ಮಾತ್ರ ಲಭ್ಯ. ಇದರ ಜೊತೆಗೆ, BSNLನ ಡೋರ್‌ಸ್ಟೆಪ್ ಸಿಮ್ ಡೆಲಿವರಿ ಸೇವೆಯ ಮೂಲಕ ಈ ಆಫರ್ ಲಭ್ಯವಾಗುತ್ತದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದ್ದರಿಂದ, ಈ ಆಫರ್‌ನ ಪ್ರಯೋಜನ ಪಡೆಯಲು BSNL ಸ್ಟೋರ್ ಅಥವಾ CSCಗೆ ಭೇಟಿ ನೀಡುವುದು ಉತ್ತಮ.
BSNL ನ ಸವಾಲುಗಳು
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಇತ್ತೀಚಿನ ಡೇಟಾದ ಪ್ರಕಾರ, BSNL ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಈ ಫ್ರೀಡಂ ಆಫರ್ BSNLಗೆ ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ಒಂದು ಕಾರಣವಾಗಿದೆ. ಈ ಆಫರ್‌ನ ಮೂಲಕ BSNL ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ.