Property Documents Verification: ಸ್ವಂತ ಮನೆ, ಆಸ್ತಿ ಅಥವಾ ಸೈಟ್ ಖರೀದಿ ಮಾಡುವ ಸಮಯದಲ್ಲಿ ನಾವು ಕೆಲವು ದಾಖಲೆಗಳನ್ನು ಅಗತ್ಯವಾಗಿ ಪರಿಶೀಲನೆ ಮಾಡದೆ ಇದ್ದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ನಷ್ಟ ಅನುಭವಿಸಬೇಕಾಗುತ್ತದೆ. ಯಾವುದೇ ಮನೆ, ಆಸ್ತಿ ಅಥವಾ ಸೈಟ್ ಖರೀದಿ ಮಾಡುವ ಸಮಯದಲ್ಲಿ ಕೆಲವು ಮೂಲಭೂತ ದಾಖಲೆ ಪರಿಶೀಲನೆ ಅತೀ ಕಡ್ಡಾಯ ಆಗಿರುತ್ತದೆ. ಹಾಗಾದರೆ ಹೊಸ ಮನೆ, ಅಸ್ತಿ ಅಥವಾ ಸೈಟ್ ಖರೀದಿ ಮಾಡುವ ಸಮಯದಲ್ಲಿ ಯಾವ ಕೆಲವು ದಾಖಲೆಗಳನ್ನು ಅಗತ್ಯಾಗಿ ಪರಿಶೀಲನೆ ಮಾಡಬೇಕು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಭೂಮಿ ವಹಿವಾಟುಗಳು
ಇತ್ತೀಚಿನ ದಿನಗಳಲ್ಲಿ ನಾವು ಕರ್ನಾಟಕದಲ್ಲಿ ಭೂಮಿ ವಹಿವಾಟು ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು. 2025 ರ ವರ್ಷದಲ್ಲಿ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಬಹಳ ಎತ್ತರಕ್ಕೆ ಬೆಳೆದಿರುವುದನ್ನು ನಾವು ಗಮನಿಸಬಹುದು. ಅದೇ ರೀತಿಯಲ್ಲಿ ಭೂಮಿ ಅಥವಾ ಆಸ್ತಿ ಮಾರಾಟದ ಹೆಸರಿನಲ್ಲಿ ವಂಚನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಭೂಮಿ ಮಾರಾಟಕ್ಕೆ ಕರ್ನಾಟಕ ಸರ್ಕಾರ ಕೆಲವು ಅಗತ್ಯ ದಾಖಲೆ ಪರಿಶೀಲನೆ ಮಾಡುವುದು ಕಡ್ಡಾಯ ಅನ್ನುವ ನಿಯಮ ಜಾರಿಗೆ ತಂದಿದೆ.
ಮೂಲಭೂತ ದಾಖಲೆಗಳ ಪರಿಶೀಲನೆ
ಭೂಮಿ ಖರೀದಿ ಮಾಡುವ ಸಮಯದಲ್ಲಿ ಕೆಲವು ಮೂಲಭೂತ ದಾಖಲೆ ಪರಿಶೀಲನೆ ಮಾಡುವುದು ಅತೀ ಅಗತ್ಯವಾಗಿದೆ. ಹಾಗೆ ಭೂಮಿ ಖರೀದಿ ಮಾಡುವ ಸಮಯದಲ್ಲಿ ಎನ್ಕಂಬ್ರನ್ಸ್ ಸರ್ಟಿಫಿಕೇಟ್ (EC) ಪರಿಶೀಲನೆ ಮಾಡುವುದು ಅತೀ ಅಗತ್ಯವಾಗಿದೆ. ಇನ್ನು ಈ ಎನ್ಕಂಬ್ರನ್ಸ್ ಸರ್ಟಿಫಿಕೇಟ್ (EC) ನೀವು ಖರೀದಿ ಮಾಡುವ ಆಸ್ತಿಯ ಮೇಲೆ ಯಾವುದೇ ಸಾಲ, ಮಾರ್ಟ್ಗೇಜ್, ಕೇಸ್ ಅಥವಾ ಇತರೆ ಯಾವುದೇ ಸಮಸ್ಯೆ ಇಲ್ಲ ಅನ್ನುವುದನ್ನು ಸಾಭೀತುಪಡಿಸುವ ಒಂದು ಪ್ರಮಪತ್ರವಾಗಿದೆ. ಆಸ್ತಿ ಖರೀದಿ ಮಾಡುವ ಸಮಯದಲ್ಲಿ ನೀವು ಸಬ್-ರಿಜಿಸ್ಟ್ರಾರ್ ಕಚೇರಿಯಿಂದ 30 ವರ್ಷಗಳ EC ಪಡೆದುಕೊಳ್ಳುವುದು ಬಹಳ ಉತ್ತಮ. kaveri ವೆಬ್ಸೈಟ್ ಮೂಲಕ ನೀವು ಆನ್ಲೈನ್ ನಲ್ಲಿ EC ಪಡೆದುಕೊಳ್ಳಬಹುದು.
ಖಾತಾ ದಾಖಲೆಗಳ ಪರಿಶೀಲನೆ ಮಾಡುವುದು
ಒಂದು ಭೂಮಿ ಅಥವಾ ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಖಾತಾ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಖಾತಾ ಸರ್ಟಿಫಿಕೇಟ್ ಮತ್ತು ಖಾತಾ ಎಕ್ಸ್ಟ್ರಾಕ್ಟ್ ನಲ್ಲಿ ಮಾಲೀಕರ ಹೆಸರು, ಗ್ರಾಮ ಪಂಚಾಯತಿ ವಿವರ ಮತ್ತು ಪಾವತಿ ಮಾಡಿದ ತೆರಿಗೆ ವಿವರವನ್ನು ಕೂಡ ತಿಳಿದುಕೊಳ್ಳಬಹುದು.
RTC ಅಥವಾ ಪಹಣಿ ಪರಿಶೀಲನೆ ಮಾಡುವುದು
ಒಂದು ಭೂಮಿ ಅಥವಾ ಅಥವಾ ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಮೊದಲನೆಯದಾಗಿ ನಾವು RTC ಅಥವಾ ಪಹಣಿಯನ್ನು ಪರಿಶೀಲನೆ ಮಾಡುವುದು ಬಹಳ ಅಗತ್ಯ ಆಗಿರುತ್ತದೆ. ರೆಕಾರ್ಡ್ ಆಫ್ ರೈಟ್ಸ್, ಟೆನಾನ್ಸಿ ಅಂಡ್ ಕ್ರಾಪ್ಸ್. ಭೂಮಿಯ ಸರ್ವೇ ನಂಬರ್, ಗಾತ್ರ, ಬೆಳೆ ಪ್ರಕಾರ, ಮಾಲೀಕತ್ವ ಮತ್ತು ಮ್ಯುಟೇಷನ್ ವಿವರಗಳು ಇರುತ್ತವೆ. ಭೂಮಿ ವೆಬ್ಸೈಟ್ ಗೆ ಭೇಟಿನೀಡುವುದರ ಮೂಲಕ ಸುಲಭವಾಗಿ ನೀವು ಖರೀದಿಸುವ ಆಸ್ತಿಯ RTC ಪಡೆದುಕೊಳ್ಳಬಹುದು.
ತೆರಿಗೆ ಮತ್ತು ಹಣಕಾಸು ದಾಖಲೆಗಳು
ನೀವು ಯಾವುದೇ ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಆ ಆಸ್ತಿಗೆ ಸಂಬಂಧಿಸಿದಂತೆ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಲಾಗಿದೆಯೇ ಅಥವಾ ಆಗಿಲ್ವ ಎಂದು ತಿಳಿದುಕೊಳ್ಳುವುದು ಬಹಳ ಅಗತ್ಯ. ಕನಿಷ್ಠ 5 ರಿಂದ 10 ವರ್ಷಗಳ ತೆರಿಗೆ ರಸೀದಿ ನೀವು ಪಡೆದುಕೊಳ್ಳಬಹುದು. ಒಂದುವೇಳೆ ತೆರಿಗೆ ಪಾವತಿ ಮಾಡದೆ ಇದ್ದರೆ ಮಾಲೀಕರು ತೆರಿಗೆ ಪಾವತಿ ಮಾಡಿದ ನಂತರ ಆಸ್ತಿ ಖರೀದಿ ಮಾಡಬೇಕು. BBMP ಅಥವಾ ಪಂಚಾಯತ್ ನೀವು ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
NOC ಸರ್ಟಿಫಿಕೇಟ್ ಪಡೆದುಕೊಳ್ಳಿ
ಯಾವುದೇ ಭೂಮಿ ಖರೀದಿ ಮಾಡುವ ಸಮಯದಲ್ಲಿ ಯಾವುದೇ ತಕರಾರು ಇಲ್ಲ ಅನ್ನುವುದಕ್ಕೆ ಸಂಬಂಧಿಸಿದಂತೆ NOC ಪಡೆದುಕೊಳ್ಳಬೇಕಾಗುತ್ತದೆ. ವಿದ್ಯುತ್, ನೀರು, ಗ್ಯಾಸ್ ಬಿಲ್ಗಳ ಬಾಕಿ ಇಲ್ಲ ಎಂದು ನೀವು ಸಂಬಂಧಪಟ್ಟ ಇಲಾಖೆಯಿಂದ NOC ಪಡೆದುಕೊಳ್ಳಬೇಕು.
ಬ್ಯಾಂಕಿನಿಂದ ಸಾಲದ ಬಗ್ಗೆ ಡಾಕ್ಯುಮೆಂಟ್ಸ್ ಪಡೆದುಕೊಳ್ಳಬೇಕು
ಆಸ್ತಿಯ ಮಾಲೀಕ ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದ್ದು ಆ ಸಾಲವನ್ನು ಸರಿಯಾದ ಸಮಯಕ್ಕೆ ತೀರಿಸಲಾಗಿದೆಯಾ ಅಥವಾ ಇಲ್ಲವ ಅನ್ನುವುದಕ್ಕೆ ಸಂಬಂಧಿಸಿದಂತೆ ನೀವು ಬ್ಯಾಂಕಿನಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಒಂದುವೇಳೆ ಬ್ಯಾಂಕ್ ಸಾಲ ತಿರಿದ್ದರೆ ನೀವು ಬ್ಯಾಂಕಿನಿಂದ NOC ಪಡೆದುಕೊಳ್ಳುವುದು ಅತ್ತೀ ಕಡ್ಡಾಯ.
ಕನ್ವರ್ಷನ್ ಆರ್ಡರ್ ಪರಿಶೀಲನೆ ಮಾಡುವುದು
ನೀವು ಖರೀದಿ ಮಾಡುವ ಆಸ್ತಿ ಕೃಷಿ ಭೂಮಿಗೆ ಸೇರಿದ್ದ ಅಥವಾ ವಾಣಿಜ್ಯ ಭೂಮಿಗೆ ಸೇರಿದ್ದ ಅನ್ನುವುದಕ್ಕೆ ಸಂಬಂಧಿಸಿದಂತೆ ಕನ್ವರ್ಷನ್ ಆರ್ಡರ್ ಪಡೆದುಕೊಳ್ಳಬೇಕು. ಒಂದುವೇಳೆ ಕನ್ವರ್ಷನ್ ಭೂಮಿ ಆಗದೆ ಇದ್ದಲ್ಲಿ ನಿಮಗೆ ಬ್ಯಾಂಕಿನಿಂದ ಮನೆ ನಿರ್ಮಾಣ ಮಾಡಲು ಸಾಲ ಸಿಗಲ್ಲ.

									 
					