Pan Card Cancellation Deadline: ದೇಶದಲ್ಲಿ ಪಾನ್ ಕಾರ್ಡ್ (Pan Card) ಅನ್ನುವುದು ಒಂದು ಪ್ರಮುಖವಾದ ಆರ್ಥಿಕ ಗುರುತಿನ ಚೀಟಿಯಾಗಿದೆ. ತೆರಿಗೆ ಪಾವತಿ ಆಗಿರಬಹುದು ಮತ್ತು ಬ್ಯಾಂಕಿಂಗ್ ವಹಿವಾಟುಗಳಿಗೆ ಪಾನ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿದೆ. ಪಾನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಅಗತ್ಯ ನಿಯಮಗಳನ್ನು ಜಾರಿಗೆ ತಂದಿದ್ದು ಸದ್ಯ ಈಗ ಕೊನೆಯ ಎಚ್ಚರಿಕೆ ನೀಡಿದೆ. ಡಿಸೆಂಬರ್ 31 ರ ಕೊನೆಯ ಗಡುವು ನೀಡಿರುವ ಕೇಂದ್ರ ಸರ್ಕಾರ ಜನವರಿಯಿಂದ ಕೆಲವರ ಪಾನ್ ಕಾರ್ಡ್ ರದ್ದು ಮಾಡುವ ತೀರ್ಮಾನ ಮಾಡಿದೆ.
ಜನವರಿಯಿಂದ ರದ್ದಾಗಲಿದೆ ಕೆಲವರ ಪಾನ್ ಕಾರ್ಡ್
ಕೇಂದ್ರ ಸರ್ಕಾರ ಈಗಾಗಲೇ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ (Pan Card and Aadhaar Card Link Deadline) ಮಾಡಲು ಅನೇಕ ಗಡುವು ನೀಡಿದ್ದು ಈಗ ಕೊನೆಯ ಗಡುವು ಕೂಡ ಮುಕ್ತಾಯವಾಗುತ್ತ ಬಂದಿದೆ. ಡಿಸೆಂಬರ್ 31 ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಆಗಿದೆ ಮತ್ತು ಜನವರಿಯಿಂದ ಪಾನ್ ಕಾರ್ಡ್ ಜೊತೆಗೆ ಯಾವ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೋ ಅಂತವರ ಪಾನ್ ಕಾರ್ಡ್ ರದ್ದು ಮಾಡಲು ಕೇಂದ್ರ ತೀರ್ಮಾನವನ್ನು ತಗೆದುಕೊಂಡಿದೆ.
ಪಾನ್ ಕಾರ್ಡ್ ರದ್ದಾಗಲು ಕಾರಣ ಏನು?
ಇತ್ತೀಚಿನ ಪಾನ್ ಕಾರ್ಡ್ ಬಳಸಿಕೊಂಡು ವಂಚನೆ ಮಾಡುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಪಾನ್ ಕಾರ್ಡ್ ಸಂಖ್ಯೆ ಬಳಸಿಕೊಂಡು ಕೆಲವು ವಂಚನೆಯ ಪ್ರಕರಣಗಳು ಹೆಚ್ಚಾದ ಕಾರಣ UIDAI ಸೂಚನೆಯಂತೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಈಗ ಪಾನ್ ಕಾರ್ಡುಗಳನ್ನು ರದ್ದು ಮಾಡುವ ಬಗ್ಗೆ ತೀರ್ಮಾನ ಮಾಡಿದೆ. ಆಧಾರ್ ಕಾರ್ಡುಗಳಿಗೆ ಲಿಂಕ್ ಆಗದ ಪಾನ್ ಕಾರ್ಡುಗಳು ಅಸುರಕ್ಷಿತ ಪಾನ್ ಕಾರ್ಡುಗಳಾಗಿದ್ದು ಅಂತಹ ಪಾನ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತದೆ.
ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಆಧಾರ್ ತೆರಿಗೆ ಇಲಾಖೆಯ https://www.incometax.gov.in/iec/foportal/ ಗೆ ಭೇಟಿನೀಡುವುದರ ಮೂಲಕ ಸುಲಭವಾಗಿ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ವೆಬ್ಸೈಟ್ ಗೆ ಭೇಟಿನೀಡಿ ನಿಮ್ಮ 10 ಸಂಖ್ಯೆಯ ಪಾನ್ ಕಾರ್ಡ್ ನಂಬರ್ ಮತ್ತು 2 ಸಂಖ್ಯೆಯ ಆಧಾರ್ ನಂಬರ್ ನಮೂದಿಸಿ 1000 ರೂ ಪಾವತಿ ಮಾಡುವುದರ ಮೂಲಕ ಸುಲಭವಾಗಿ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ನಂತರ PAN ಸ್ಥಿತಿ ತಿಳಿಯಲು e-filing ಪೋರ್ಟಲ್ನಲ್ಲಿ ಲಾಗಿನ್ ಆಗಿ ಪರಿಶೀಲಿಸಿ.
ಡಿಸೆಂಬರ್ 31 ರೊಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಏಕೆ ಆಗಬೇಕು?
ಡಿಸೆಂಬರ್ 31 ರೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ವ್ಯಾವಹಾರಿಕ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಮತ್ತು ಅನೇಕ ಬ್ಯಾಂಕಿಂಗ್ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕಿಂಗ್ ವಹಿವಾಟುಗಳಿಗೆ ಪಾನ್ ಕಾರ್ಡ್ ಬಹಳ ಅಗತ್ಯ ಆಗಿದೆ ಮತ್ತು ಹೊಸ ಬ್ಯಾಂಕ್ ಖಾತೆ ತೆರೆಯಲು ಕೂಡ ಸಾಧ್ಯವಾಗುವುದಿಲ್ಲ.
ಹೊಸ ಪಾನ್ ಕಾರ್ಡ್ ಪಡೆದುಕೊಳ್ಳುವ ವಿಧಾನ
ಹೊಸ ಪಾನ್ ಕಾರ್ಡ್ ಪಡೆದುವುದು ಒಂದು ಸುಲಭವಾದ ವಿಧಾನ ಆಗಿರುತ್ತದೆ. ಆಧಾರ್ಗೆ PAN ಲಿಂಕ್ ಮಾಡಿ e-filing ಪೋರ್ಟಲ್ನಲ್ಲಿ ‘Link Aadhaar’ ಆಯ್ಕೆ ಬಳಸಿ OTP ಬಂದ ನಂತರ ನೀವು ಹೊಸ ಪಾನ್ ಕಾರ್ಡ್ ಅಥವಾ ಫಿಸಿಕಲ್ ಕಾರ್ಡಿಗೆ ಅರ್ಜಿ ಹಾಕಬಹುದು. ಪಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ 15 ಅಥವಾ 20 ದಿನಗಳ ಒಳಗಾಗಿ ನೀವು ಹೊಸ ಪಾನ್ ಕಾರ್ಡ್ ಪಡೆದುಕೊಳ್ಳಬಹುದು. ಹೊಸ ಪಾನ್ ಕಾರ್ಡ್ ಪಡೆದುಕೊಳ್ಳಲು ನೀವು ಸುಮಾರು 50 ರಿಂದ 107 ರೂ ಶುಲ್ಕ ಪಾವತಿ ಮಾಡಬಕಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

