Bank Nominee Death Rules 2025: ಖಾತೆದಾರನ ಮರಣದ ಸಂದರ್ಭದಲ್ಲಿ ಖಾತೆಯ ಹಣವನ್ನು ಸ್ವೀಕರಿಸಲು ಖಾತೆದಾರರಿಂದ ನೇಮಿಸಲ್ಪಟ್ಟ ವ್ಯಕ್ತಿ ಅನ್ನು ನಾವು ನಾಮಿನಿ ಎಂದು ಕರೆಯುತ್ತೇವೆ. ಆದರೆ ಈಗ ಖಾತೆದಾರ ಮತ್ತು ನಾಮಿನಿ ಇಬ್ಬರೂ ಏಕಕಾಲದಲ್ಲಿ ಮರಣ ಹೊಂದಿದರೆ ಖಾತೆಯಲ್ಲಿನ ಹಣ ಯಾರಿಗೆ ಸೇರುತ್ತದೆ ಎನ್ನುದು ಈಗಿನ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ RBI ನಿಯಮ ಹೇಳುದೇನು ಅನ್ನುವ ಬಗ್ಗೆ ತಿಳಿದುಕೊಳ್ಳೋಣ.
ನಾಮಿನಿ ಮತ್ತು ಖಾತೆದಾರನ ಮರಣದ ನಂತರ ಹಣದ ಹಕ್ಕು
ಬ್ಯಾಂಕ್ ಖಾತೆಯಲ್ಲಿ ನಾಮಿನಿ ಇದ್ದರೆ, ಖಾತೆದಾರನ ಮರಣದ ನಂತರ ನಾಮಿನಿಗೆ ಹಣ ಸಿಗುತ್ತದೆ. ಆದರೆ, ಇಬ್ಬರೂ ಮರಣ ಹೊಂದಿದರೆ, ಹಣದ ಹಕ್ಕು ಕಾನೂನು ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಭಾರತೀಯ ಉತ್ತರಾಧಿಕಾರ ಕಾಯ್ದೆ 1925ರ ಪ್ರಕಾರ, ಇದು ಪತಿ/ಪತ್ನಿ, ಮಕ್ಕಳು, ಪೋಷಕರು ಅಥವಾ ಸಹೋದರರಿಗೆ ಸಿಗಬಹುದು. ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಇದನ್ನು ಕುಟುಂಬ ಸದಸ್ಯರಿಗೆ ವಿತರಿಸುತ್ತದೆ. ಉದಾಹರಣೆಗೆ, ಒಂದು ಕುಟುಂಬದಲ್ಲಿ ಖಾತೆದಾರ ಮತ್ತು ನಾಮಿನಿ (ಪತ್ನಿ) ಇಬ್ಬರೂ ಅಪಘಾತದಲ್ಲಿ ಮರಣ ಹೊಂದಿದರೆ, ಮಕ್ಕಳು ಅಥವಾ ಪೋಷಕರು ಹಕ್ಕುದಾರರಾಗುತ್ತಾರೆ.
ಕುಟುಂಬ ಸದಸ್ಯರು ಬ್ಯಾಂಕ್‌ಗೆ ಮರಣ ಪ್ರಮಾಣಪತ್ರ ಸಲ್ಲಿಸಬೇಕು. ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ, ಕಾನೂನು ಉತ್ತರಾಧಿಕಾರಿ ಪ್ರಮಾಣಪತ್ರ ಅಥವಾ ಸಕ್ಸೆಷನ್ ಸರ್ಟಿಫಿಕೇಟ್ ಕೇಳಬಹುದು. ಹಣದ ಮೊತ್ತ ಹೆಚ್ಚಿದ್ದರೆ, ನ್ಯಾಯಾಲಯದಿಂದ ಸಕ್ಸೆಷನ್ ಸರ್ಟಿಫಿಕೇಟ್ ಅಗತ್ಯವಾಗುತ್ತದೆ. ಇದರ ನಂತರ ಬ್ಯಾಂಕ್ ಹಣವನ್ನು ಕಾನೂನು ಹಕ್ಕುದಾರರ ನಡುವೆ ವಿತರಿಸುತ್ತದೆ. ಖಾತೆದಾರನ ವಿಲ್ ಇದ್ದರೆ, ಅದರ ಪ್ರಕಾರ ಹಣ ವಿತರಣೆಯಾಗುತ್ತದೆ.
ಬ್ಯಾಂಕ್ ನಿಯಮ
ಆರ್‌ಬಿಐಯ ಡೆಸಿಡ್ ಡೆಪಾಸಿಟರ್ ನೀತಿಯ ಪ್ರಕಾರ, ನಾಮಿನಿ ಮರಣ ಹೊಂದಿದರೆ ಹಣವನ್ನು ಟ್ರಸ್ಟಿಯಾಗಿ ಕಾಯ್ದಿರಿಸಿ ಕಾನೂನು ಉತ್ತರಾಧಿಕಾರಿಗಳಿಗೆ ನೀಡುತ್ತದೆ. ಜಂಟಿ ಖಾತೆಯಲ್ಲಿ ಇಬ್ಬರೂ ಮರಣ ಹೊಂದಿದರೆ, ಸರ್ವೈವರ್ ಕ್ಲಾಸ್ ಇದ್ದರೂ ಹಣ ಉತ್ತರಾಧಿಕಾರಿಗಳಿಗೆ ಸೇರುತ್ತದೆ. 2025ರಲ್ಲಿ ಬ್ಯಾಂಕ್‌ಗಳು ಡಿಜಿಟಲ್ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಆನ್‌ಲೈನ್ ಸಲ್ಲಿಕೆ ಸಾಧ್ಯವಾಗಿದೆ. ಆದರೆ, ದಾಖಲೆಗಳು ಸರಿಯಾಗಿರಬೇಕು, ಇಲ್ಲದಿದ್ದರೆ ವಿಳಂಬವಾಗಬಹುದು.
ಕೆಲವು ಬ್ಯಾಂಕ್‌ಗಳು ಡಿಸ್‌ಕ್ಲೇಮರ್ ಲೆಟರ್ ಅಥವಾ ಇಂಡೆಮ್ನಿಟಿ ಬಾಂಡ್ ಕೇಳಬಹುದು. ಖಾತೆಯಲ್ಲಿ ರೂ. 5 ಲಕ್ಷಕ್ಕಿಂತ ಕಡಿಮೆ ಹಣವಿದ್ದರೆ ಪ್ರಕ್ರಿಯೆ ಸುಲಭವಾಗಿರುತ್ತದೆ. ಹಿಂದೂ ಕುಟುಂಬಗಳಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯವಾಗುತ್ತದೆ, ಮುಸ್ಲಿಂ ಕುಟುಂಬಗಳಲ್ಲಿ ಮುಸ್ಲಿಂ ಪರ್ಸನಲ್ ಲಾ ಅನುಸರಿಸಲಾಗುತ್ತದೆ.