5 Government Schemes Higher Return Than FD: ಮುಂದಿನ ಭವಿಷ್ಯ ಉತ್ತಮವಾಗಿರಬೇಕು ಅಂದರೆ ಈಗಲೇ ಹಣ ಉಳಿತಾಯ ಮಾಡುವುದು ಬಹಳ ಅಗತ್ಯವಾಗಿದೆ. ಹಣ ಹೂಡಿಕೆ ಮಾಡಲು ಅನೇಕ ಆಯ್ಕೆಗಳು ಇದೆ, ಆದರೆ ಎಲ್ಲಿ ಸುರಕ್ಷತೆ ಇದೆಯೋ ಅಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ. ಬ್ಯಾಂಕುಗಳಲ್ಲಿ ಜನರು ಹೆಚ್ಚು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸ್ಥಿರ ಆದಾಯ ಸಿಗುತ್ತೆ ಅನ್ನುವ ಕಾರಣ FD ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ನಾವು ಗಮನಿಸಬಹುದು. ಆದರೆ ಬ್ಯಾಂಕ್ FD ಯೋಜನೆಯ ಬದಲು ಈ 5 ಸರ್ಕಾರೀ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ಮತ್ತು ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ FD ಯೋಜನೆಗಿಂದ ಅಧಿಕ ಆದಾಯ ತಂದುಕೊಡುವ 5 ಸರ್ಕಾರೀ ಯೋಜನೆ ಯಾವುದು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
1. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (POMIS)
ಅಂಚೆ ಕಚೇರಿಯಲ್ಲಿ ಜಾರಿಯಲ್ಲಿರುವ ಮಾಸಿಕ ಆದಾಯ ಯೋಜನೆ (Monthly Income Scheme ) ನಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.4 ರಷ್ಟು ಬಡ್ಡಿ ಪಡೆದುಕೊಳ್ಳಬಹುದು, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ 9 ಲಕ್ಷ ರೂ ತನಕ ಹೂಡಿಕೆ ಮಾಡಬಹುದು ಮತ್ತು ಜಂಟಿಯಾಗಿ 15 ಲಕ್ಷ ರೂ ಹೂಡಿಕೆ ಮಾಡಬಹುದು. ಯೋಜನೆಯ ಅವಧಿ 5 ವರ್ಷಗಳು ಆಗಿದೆ ಮತ್ತು ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. FD ಯೋಜನೆಗೆ ಹೋಲಿಕೆ ಮಾಡಿದರೆ ಇದೊಂದು ಉತ್ತಮವಾದ ಆದಾಯ ತಂದುಕೊಡುವ ಯೋಜನೆಯಾಗಿದೆ.
2. ಹಿರಿಯ ನಾಗರೀಕ ಉಳಿತಾಯ ಯೋಜನೆ (Senior Citizens Saving Schemes)
ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿರುವ ಹಿರಿಯ ನಾಗರೀಕ ಉಳಿತಾಯ ಯೋಜನೆ ಕೂಡ ಉತ್ತಮ ಆದಾಯ ತಂದುಕೊಡುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 8.2% ಬಡ್ಡಿ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಗರಿಷ್ಟ 30 ಲಕ್ಷ ರೂಪಾಯಿ ತನಕ ಹೂಡಿಕೆ ಮಾಡಲು ಅವಕಾಶ ಇರುತ್ತೆ. ಯೋಜನೆಯ ಅವಧಿ 5 ವರ್ಷ ಆಗಿದೆ ಮತ್ತು ಈ ಯೋಜನೆಯ ಮುಕ್ತಾಯದ ನಂತರ ಮತ್ತೆ 3 ವರ್ಷಗಳ ತನಕ ಯೋಜನೆ ಮುಂದುವರೆಸಬಹುದು. 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಲಾಭದಾಯಕವಾದ ಯೋಜನೆಯಾಗಿದೆ.
3. ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme)
ಪೋಷಕರು ಮಗಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.7 ತನಕ ಬಡ್ಡಿ ಪಡೆದುಕೊಳ್ಳಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಬಹುದು ಮತ್ತು ಈ ಯೋಜನೆಯ ಮುಕ್ತಾಯದ ಅವಧಿ 15 ವರ್ಷ ಆಗಿದ್ದು 21 ವರ್ಷದ ನಂತರ ಬಡ್ಡಿ ಸಮೇತ ಸಂಪೂರ್ಣ ಹಣ ಪಡೆದುಕೊಳ್ಳಬಹುದು. ವಾರ್ಷಿಕವಾಗಿ 250 ರೂಪಾಯಿಯಿಂದ 1.5 ಲಕ್ಷ ರೂ ತನಕ ಹೂಡಿಕೆ ಮಾಡಬಹುದು ಮತ್ತು ಈ ಯೋಜನೆ ಸಂಪೂರ್ಣ ತೆರಿಗೆ ಮುಕ್ತವಾದ ಯೋಜನೆಯಾಗಿದೆ.
4. ಸಾರ್ವಜಿಕ ಭವಿಷ್ಯ ನಿಧಿ (PPF Scheme)
ದೀರ್ಘಕಾಲಿಕ ಹೂಡಿಕೆ ಮಾಡುವವರಿಗೆ ಈ PPF ಯೋಜನೆ ಒಂದು ಉತ್ತಮವಾದ ಆಯ್ಕೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7% ಬಡ್ಡಿ ಪಡೆದುಕೊಳ್ಳಬಹುದು. ಇದೊಂದು ತೆರಿಗೆ ವಿನಾಯಿತಿ ಯೋಜನೆಯಾಗಿದ್ದು ವರ್ಷವಾಗಿ 500 ರೂಪಾಯಿಯಿಂದ 1.5 ಲಕ್ಷ ರೂ ತನಕ ಹೂಡಿಕೆ ಮಾಡಬಹುದು.
5. ರಾಷ್ಟ್ರೀಯ ಪಿಂಚಣಿ ಯೋಜನೆ (NPS)
ಹೂಡಿಕೆ ಮಾಡಲು ವಯಸುವವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಕೂಡ ಒಂದು ಉತ್ತಮವಾದ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ 10% ನಿಂದ 14% ರಿಟರ್ನ್ ಪಡೆದುಕೊಳ್ಳಬಹುದು. ಸ್ವಲ್ಪ ರಿಸ್ಕ್ ಇದ್ದರೂ ಕೂಡ FD ಯೋಜನೆಗೆ ಹೋಲಿಕೆ ಮಾಡಿದರೆ ಈ ಯೋಜನೆ ಬಹಳ ಲಾಭದಾಯವಾದ ಯೋಜನೆ ಆಗಿದೆ. 60 ವರ್ಷದ ಈ ಯೋಜನೆಯಲ್ಲಿ ನೀವು 60 ವರ್ಷದ ನಂತರ ಶೇಕಡಾ 60 ರಷ್ಟು ಹಣ ತೆರಿಗೆ ರಹಿತವಾಗಿ ಪಡೆದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

