Aadhaar card update easy method: ಆಧಾರ್ ಕಾರ್ಡ್ (Aadhaar Card) ಇದು ಭಾರತೀಯ ನಿವಾಸಿಗಳಿಗೆ ನೀಡಲಾಗುವ 12 ಅಂಕಿಯ ಒಂದು ದಾಖಲೆಯಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಅತಿ ಅಗತ್ಯ ಆಗಿದೆ. ಬ್ಯಾಂಕಿಂಗ್ ವಯಲ, ಸರ್ಕಾರೀ ಯೋಜನೆಗಳು, ಸಿಮ್ ಖರೀದಿಸಲು ಇನ್ನು ಹಲವು ಕೆಲಸ ಗಳಿಗೆ ಆಧಾರ್ ಕಾರ್ಡ್ ಅತಿ ಅಗತ್ಯವಾಗಿದೆ. ಇದೀಗ ನಾವು ನಿಮಗೆ ಆಧಾರ್ ಕಾರ್ಡ್ ನಲ್ಲಿ ಇರುವ ಮಾಹಿತಿಯನ್ನ ಅತಿ ಸುಲಭವಾಗಿ ಮನೆಯಲ್ಲೇ ಕುಳಿತು ಹೇಗೆ ಬದಲಾಯಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡುತ್ತೇವೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯ
ಹಳೆಯ ಆಧಾರ್ ಕಾರ್ಡ್ ಬಳಕೆ ಮಾಡುವವರು ಅದನ್ನು ನವೀಕರಣ ಮಾಡುವುದು ಕಡ್ಡಾಯ ಎಂದು UIDAI ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆ. ಇದೀಗ ಜನರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಂತಹ ಅಗತ್ಯ ಮಾಹಿತಿಯನ್ನ ಕಚೇರಿಗೆ ಹೋಗಿ ಭೇಟಿ ಕೊಟ್ಟು ಸರಿ ಪಡಿಸುವ ಅಗತ್ಯ ಇಲ್ಲ. ಮನೆಯಲ್ಲೇ ಕುಳಿತು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕ್ಕೊಳ್ಳಬಹುದಾಗಿದೆ. ಇದೀಗ ನೀವು ಮನೆಯಲ್ಲೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಕೆಲವೇ ಸಮಯದಲ್ಲಿ ಪೂರ್ಣಗೊಳಿಸಬಹುದಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಗೆ ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ ದೈನಂದಿನ ಜೀವನದಲ್ಲಿ ಅತಿ ಅಗತ್ಯವಾದ ದಾಖಲೆ ಆಗಿರುವುದರಿಂದ ಅದರಲ್ಲಿನ ಮಾಹಿತಿ ಸರಿಯಾಗಿರುವುದು ಬಹಳ ಮುಖ್ಯವಾಗಿದೆ. ಇದೀಗ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ನಿಮ್ಮ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬೇಕು. ನಿಮ್ಮ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಇಲ್ಲದಿದ್ದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಲಿಂಕ್ ಮಾಡಿಸಿಕೊಳ್ಳಿ.
ಮನೆಯಲ್ಲೇ ಕುಳಿತು ಸುಲಭವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ
1. ವಿಳಾಸ ಬದಲಾವಣೆ
ಮೊದಲು https://myaadhaar.uidai.gov.in/ ಗೆ ಭೇಟಿ ನೀಡಿ, ಆಧಾರ್ ನಂಬರ್ ಟೈಪ್ ಮಾಡಿ CAPTCHA ಭರ್ತಿ ಮಡಿದ ನಂತರ OTP ಬರುತ್ತದೆ. ನಂತರ ವಿಳಾಸ ಆಯ್ಕೆ ಮಾಡಿ ಹೊಸ ವಿಳಾಸವನ್ನ ಭರ್ತಿ ಮಾಡಿ, ಅಗತ್ಯ ದಾಖಲೆಯನ್ನ ಅಪ್ಲೋಡ್ ಮಾಡಿ ( ಬ್ಯಾಂಕ್ ಸ್ಟೇಟ್ಮೆಂಟ್, ರೇಷನ್ ಕಾರ್ಡ್, etc ) ಸಬ್ ಮೀಟ್ ಕೊಡಿ.
ವಿಳಾಸ ಬದಲಾವಣೆಗೆ ಯಾವುದೇ ದಾಖಲೆ ಇಲ್ಲದಿದ್ದರೆ, “Address Validation Letter ” ಮೂಲಕ ವಿಳಾಸ ಬದಲಾವಣೆಯನ್ನ ಮಾಡಿಕೊಳ್ಳಬಹುದಾಗಿದೆ. ಇನ್ನೊಬ್ಬರು ವೆರಿಫೈ ಮಾಡುತ್ತಾರೆ.
2. ಹೆಸರು ಅಥವಾ ಜನ್ಮ ದಿನಾಂಕ ಬದಲಾವಣೆ
ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನ ಬದಲಾವಣೆ ಮಾಡಲು ಪಾಸ್ಪೋರ್ಟ್ ಅಥವಾ ಮದುವೆ ಪ್ರಮಾಣ ಪತ್ರ ಅಗತ್ಯವಾಗಿದೆ. ಹಾಗೆ ಜನ್ಮ ದಿನಾಂಕವನ್ನ ಒಮ್ಮೆ ಮಾತ್ರ ಬದಲಾವಣೆ ಮಾಡಲು ಸಾಧ್ಯ.
ನೀವು ಅಪ್ಡೇಟ್ ಮಾಡಿದ ಸ್ಟೇಟಸ್ ಅನ್ನು ಪರಿಶೀಲಿಸಲು “Check Aadhaar Update Status ” ಗೆ ಭೇಟಿ ನೀಡಿ. 30 ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಪೂರ್ಣಗೊಳ್ಳುತ್ತದೆ.
ಡಿಸೆಂಬರ್ 31 ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲಿ ಲಾಸ್ಟ್ ಡೇಟ್
ಈಗಾಗಲೇ ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ ಮತ್ತು UIDAI ಎಚ್ಚರಿಕೆ ನೀಡಿದ್ದು ಡಿಸೆಂಬರ್ 31 ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಆಗಿದೆ. ಡಿಸೆಂಬರ್ 31 ರೊಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡದೆ ಇದ್ದರೆ ಅಂತವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಮತ್ತು ಅವರು ಪಾನ್ ಕಾರ್ಡ್ ಬಳಸಿಕೊಂಡು ಅನೇಕ ಕೆಲಸ ಮಾಡಲು ಸಾಧ್ಯವಿಲ್ಲ. ಕೊನೆಯ ದಿನಾಂಕದ ನಂತರ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದರೆ ಅವರು ಕಡ್ಡಾಯವಾಗಿ 1000 ರೂಪಾಯಿ ದಂಡ ಪಾವತಿ ಮಾಡಬೇಕು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

