Sukanya Samriddhi Scheme Investment Plan: ಸುಕನ್ಯಾ ಸಮೃದ್ಧಿ ಯೋಜನೆ, ಇದು ಹೆಣ್ಣು ಮಕ್ಕಳಿಗಾಗಿಯೇ ಜಾರಿಗೆ ತಂದ ಒಂದು ಉಳಿತಾಯ ಯೋಜನೆಯಾಗಿದೆ. 2015 ರಲ್ಲಿ ನೆಡೆದ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದಲ್ಲಿ ನರೇಂದ್ರ ಮೋದಿ ಅವರು ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಜಾರಿಗೆ ತಂದಿದ್ದಾರೆ. ಹೆಣ್ಣು ಮಕ್ಕಳ ಭವಿಷ್ಯದ ಶಿಕ್ಷಣ ಮತ್ತು ಮದುವೆಗಾಗಿ ಹಣವನ್ನ ಉಳಿತಾಯ ಮಾಡಲು ಈ ಯೋಜನೆಯನ್ನ ಜಾರಿಗೆ ತರಲಾಗಿದೆ. ಈ ಯೋಜನೆ ಸರ್ಕಾರೀ ಬೆಂಬಲಿತವಾಗಿದ್ದು, ಹೆಚ್ಚಿನ ಬಡ್ಡಿ ಮತ್ತು ತೆರಿಗೆ ವಿನಾಯಿತಿಯನ್ನ ನೀಡಲಾಗುತ್ತದೆ.
ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ತೆರೆಯಬಹುದು ಯೋಜನೆಯ ಖಾತೆ
ಪೋಷಕರು ಹೆಣ್ಣು ಮಗಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ಅಥವಾ ಯಾವುದೇ ಬ್ಯಾಂಕಿನಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು. ಈ ಯೋಜನೆಯ ಸುರಕ್ಷಿತ ಆದಾಯ ತಂದುಕೊಂಡುವ ಒಂದು ಸರ್ಕಾರೀ ಯೋಜನೆ ಆಗಿರುತ್ತದೆ. ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಈ ಯೋಜನೆಯಲ್ಲಿ ಹೊದಿಕೆ ಮಾಡಿದವರು ಸುಮಾರು 1.5 ಲಕ್ಷ ರೂಪಾಯಿಯ ತನಕ ತೆರಿಗೆ ವಿನಾಯಿತಿ ಕೂಡ ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ ಹೂಡಿಕೆ ಮಾಡುವವರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಉತ್ತಮವಾದ ಆಯ್ಕೆ ಆಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳು
* 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು
* ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ವಾರ್ಷಿಕವಾಗಿ ಠೇವಣಿ ಮಾಡಬಹುದು.
* ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಯಬಹುದು
* ಒಂದು ಬಾಲಕಿಗೆ ಒಂದು ಖಾತೆ ಮಾತ್ರ
* 18 ವರ್ಷ ತುಂಬಿದ ನಂತರ 50 % ಹಣವನ್ನ ಹಿಂಪಡೆಯಬಹುದು
ಮಗಳ ಮದುವೆ ಅಥವಾ ಶಿಕ್ಷಣಕ್ಕೆ ಈ ಯೋಜನೆ ಉತ್ತಮ
ಮಗಳ ಮದುವೆ ಅಥವಾ ಶಿಕ್ಷಣಕ್ಕಾಗಿ ಹೂಡಿಕೆ ಮಾಡಲು ಸುಕನ್ಯಾ ಸಮೃದ್ಧಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಮಗಳಿಗೆ ಹತ್ತು ವರ್ಷ ತುಂಬುವುದರ ಒಳಗೆ ಸುಕನ್ಯಾ ಸಂರಿದ್ಧಿ ಯೋಜನೆಯನ್ನು ಆರಂಭಿಸಿದರೆ ಯೋಜನೆಯ ಮುಕ್ತಾಯದ ಸಮಯದಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು. ಉದಾಹರಣೆಗೆ ವರ್ಷಕ್ಕೆ 20,000 ಹೂಡಿಕೆ ಮಾಡಿದರೆ, 21 ವರ್ಷಕ್ಕೆ ಸುಮಾರು 9.23 ಲಕ್ಷ ರೂಪಾಯಿಯನ್ನ ಹಿಂಪಡೆಯಬಹುದಾಗಿದೆ. ಹೌದು ವರ್ಷಕ್ಕೆ 20,000 ಠೇವಣಿಯಂತೆ 15 ವರ್ಷಕ್ಕೆ 3 ಲಕ್ಷ ರೂಪಾಯಿ ಹೂಡಿಕೆ ಯಾಗುತ್ತದೆ. ಪ್ರಸ್ತುತ 8.2 % ಬಡ್ಡಿಯನ್ನ ಪಡೆದುಕೊಳ್ಳಬಹುದಾಗಿದೆ.
21 ವರ್ಷಕ್ಕೆ 6.23 ಲಕ್ಷ ಬಡ್ಡಿಯನ್ನ ಪಡೆದುಕೊಳ್ಳಬಹುದು, ಒಟ್ಟಾಗಿ 21 ವರ್ಷದಲ್ಲಿ ಮ್ಯಾಚುರಿಟಿ ಮೊತ್ತ 9.23 ಲಕ್ಷ ಆಗಿರುತ್ತದೆ. ಇದರಲ್ಲಿ ಬಡ್ಡಿ ಮತ್ತು ಮ್ಯಾಚುರಿಟಿ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. 2025 ರಲ್ಲಿ ಖಾತೆ ತೆರೆದು 15 ವರ್ಷ 20,000 ಹಣವನ್ನ ಹೂಡಿಕೆ ಮಾಡಿದರೆ 2046 ರಲ್ಲಿ 9.23 ಲಕ್ಷ ಲಾಭ ಗಳಿಸಬಹುದಾಗಿದೆ. ಇದು ನಿಮ್ಮ ಮಗಳ ಮದುವೆ ಅಥವಾ ಭವಿಷ್ಯದ ಶಿಕ್ಷಣಕ್ಕೆ ಬಹಳ ಉಪಯುಕ್ತವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

