ಈ ಖ್ಯಾತ ನಟಿಯರ ಪ್ರತಿ ಪೋಸ್ಟ್ ಗೆ ಇನ್‌ಸ್ಟಾಗ್ರಾಮ್‌ ಎಷ್ಟು ಹಣವನ್ನ ನೀಡುತ್ತದೆ ಗೊತ್ತಾ, ಶಾಕಿಂಗ್ ಸಂಪಾಧನೆ.

ಭಾರತ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅತೀ ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಅಂದರೆ ಇನ್‌ಸ್ಟಾಗ್ರಾಮ್ ಎಂದು ಹೇಳಬಹುದು. ಹೆಚ್ಚಿನ ಜನರು ದಿನದ ಹೆಚ್ಚಿನ ಸಮಯವನ್ನ ಇನ್‌ಸ್ಟಾಗ್ರಾಮ್ ನಲ್ಲಿ ಕಳೆಯುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರು ಹೇಗೆ ಫೇಸ್ ಬುಕ್ ಬಳಕೆ ಮಾಡುತ್ತಾರೋ ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್ ಅನ್ನು ಬಳಕೆ ಮಾಡುತ್ತಾರೆ. ಇನ್ನು ಇನ್‌ಸ್ಟಾಗ್ರಾಮ್ ಕೂಡ ಫೇಸ್ ಬುಕ್ ಒಡೆತನವನ್ನ ಹೊಂದಿದೆ. ಅದೇ ರೀತಿಯಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ಮತ್ತು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಆಟಗಾರರು ಹೆಚ್ಚುಹೆಚ್ಚು ಇನ್‌ಸ್ಟಾಗ್ರಾಮ್ ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಅದೇ ರೀತಿಯಲ್ಲಿ ಭಾರತ ಸ್ಟಾರ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶೆಟ್ಟಿ, ದೀಪಿಕಾ ಪಡುಕೋಣೆ ಕೂಡ ಇನ್‌ಸ್ಟಾಗ್ರಾಮ್ ಬಳಸುತ್ತಾರೆ. ಇನ್ನು ಈ ಸ್ಟಾರ್ ನಟಿಯರು ಇನ್‌ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದರೆ ಅದನ್ನ ಕೋಟಿಗಟ್ಟಲೆ ಜನರು ಲೈಕ್ ಮಾಡುತ್ತಾರೆ. ಈ ಸ್ಟಾರ್ ನಟಿಯರಿಗೆ ಇನ್‌ಸ್ಟಾಗ್ರಾಮ್ ನಲ್ಲಿ ಕೋಟಿಗಟ್ಟಲೆ ಹಿಂಬಾಲಕರು ಇದ್ದು ಇವರು ಯಾವುದೇ ಪೋಸ್ಟ್ ಹಂಚಿಕೊಂಡರು ಹಿಂಬಾಲಕರು ಅದಕ್ಕೆ ಲೈಕ್ಸ್ ಕೊಡುತ್ತಾರೆ. ನಿಮ್ಮ ತಲೆಯಲ್ಲಿ ಇರಬಹುದು ಈ ನಟಿಯರು ಹಾಕಿದ ಪೋಸ್ಟ್ ಗೆ ಇಷ್ಟು ಲೈಕ್ಸ್ ಬರುತ್ತದೆ ಮತ್ತು ಅದರಿಂದ ಅವರಿಗೆ ಎಷ್ಟು ಲಾಭ ಸಿಗುತ್ತದೆ ಅನ್ನುವುದರ ಬಗ್ಗೆ.

instagram advertise

ಹಾಗಾದರೆ ಇನ್‌ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದರೆ ಈ ಸ್ಟಾರ್ ನಟಿಯರಿಗೆ ಸಿಗುವ ಹಣ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಿಮಗೆಲ್ಲ ತಿಳಿದಿರುವ ಹಾಗೆ ದೊಡ್ಡ ದೊಡ್ಡ ಸ್ಟಾರ್ ನಟಿಯರಿಗೆ ದೊಡ್ಡ ದೊಡ್ಡ ಕಂಪನಿಗಳು ಜಾಹಿರಾತುಗಳನ್ನ ನೀಡುತ್ತದೆ ಮತ್ತು ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್ ಕೂಡ ಈ ಸ್ಟಾರ್ ನಟಿಯರಿಗೆ ಜಾಹಿರಾತುಗಳನ್ನ ನೀಡುತ್ತದೆ ಮತ್ತು ತಮ್ಮ ಕಂಪನಿಗೆ ಇವರನ್ನ ಬ್ರಾಂಡ್ ಗಳನ್ನ ಮಾಡಲಾಗುತ್ತದೆ. ಇನ್ನು ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವುದಕ್ಕೆ ಈ ಸ್ಟಾರ್ ನಟಿಯರು ಶುಲ್ಕವನ್ನ ನಿದಿಸುತ್ತಾರೆ.

ಇನ್ನು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಸುಮಾರು 79 ಮಿಲಿಯನ್ ಹಿಂಬಾಲಕರನ್ನ ಹೊಂದಿದ್ದು ಇವರು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲು ಪ್ರತಿ ಪೋಸ್ಟ್ ಗೆ 1.80 ಕೋಟಿ ರೂಪಾಯಿಯನ್ನ ಪಡೆಯುತ್ತಾರಂತೆ. ಇನ್ನು ಅದೇ ರೀತಿಯಲ್ಲಿ 67 ಮಿಲಿಯನ್ ಹಿಂಬಾಲಕರನ್ನ ಹೊಂದಿರುವ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಮಾಡಲು ಇನ್‌ಸ್ಟಾಗ್ರಾಮ್ ನಿಂದ ಬರೋಬ್ಬರಿ 1.5 ಕೋಟಿ ರೂಪಾಯಿಯನ್ನ ಪಡೆದುಕೊಳ್ಳುತ್ತಾರಂತೆ. ಅದೇ ರೀತಿಯಲ್ಲಿ ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಅನುಷ್ಯ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಜಾಹೀರಾತು ಪೋಸ್ಟ್ ಗೆ 1 ಕೋಟಿ ರೂಪಾಯಿಯನ್ನ ಪಡೆಯುತ್ತಾರಂತೆ. ಸ್ನೇಹಿತರೆ ಈ ಖ್ಯಾತ ನಟಿ ಈ ಸಂಪಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

instagram advertise

Join Nadunudi News WhatsApp Group