8th Pay Commission: ಇದೀಗ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆಗಾಗಿ ಕಾಯುತ್ತಿದ್ದಾರೆ. ಇದರ ನಡುವೆ ಇದೀಗ 8 ನೇ ವೇತನ ಆಯೋಗದ ಸುದ್ದಿ ಹರಿದಾಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಶೀಘ್ರದಲ್ಲೇ ಏಳನೇ ವೇತನ ಆಯೋಗವನ್ನು ಎಂಟನೇ ವೇತನ ಆಯೋಗದೊಂದಿಗೆ ಬದಲಾಯಿಸಲಿದೆ.
ಎಂಟನೇ ವೇತನ ಆಯೋಗ ರಚನೆಗೆ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರವು 2023 ರ ಕೇಂದ್ರ ಬಜೆಟ್ ನಲ್ಲಿಯೇ ಎಂಟನೇ ವೇತನ ಆಯೋಗವನ್ನು ಬದಲಾಯಿಸಲಿದೆ ಎಂಬ ವರದಿಯಾಗಿದೆ. ಆದರೆ ಫೆಬ್ರವರಿ 1 ರಂದು ಘೋಷಣೆ ಇರಲಿಲ್ಲ. ಇದರಿಂದ ನೌಕರರು ನಿರಾಸೆಗೊಂಡಿದ್ದಾರೆ.
ಸಾಮಾನ್ಯವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗದ ನಿಯಮಗಳು ಬದಲಾಗುತ್ತದೆ. 5 ನೇ ವೇತನ ಆಯೋಗ, 6 ನೇ ವೇತನ ಆಯೋಗ ಮತ್ತು 7 ನೇ ವೇತನ ಆಯೋಗಕ್ಕೂ ಇದೆ ವಿಧಾನವನ್ನು ಅನುಸರಿಸಲಾಗಿದೆ.
ಏಳನೇ ವೇತನ ಆಯೋಗವನ್ನು 2014 ರಲ್ಲಿ ಸ್ತಾಪಿಸಲಾಯಿತು. ಏನಂದ್ರೆ 9 ವರ್ಷಗಳು ಕಳೆದಿವೆ. ಇದು 2014 ರ ವೇಳೆಗೆ 10 ವರ್ಷಗಳನ್ನು ಪೂರೈಸುತ್ತದೆ.
ಮುಂದಿನ ವರ್ಷದೊಳಗೆ 7 ನೇ ವೇತನದ ಆಯೋಗದ ಬದಲಾಗಿ 8 ನೇ ವೆತನ ಆಯೋಗ ಬರಲಿದೆ ಎನ್ನುವುದು ಇತ್ತೀಚಿನ ಸುದ್ದಿಯಾಗಿದೆ.
ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ 8 ನೇ ವೇತನ ಆಯೋಗವನ್ನು ಪ್ರಕಟಿಸಬಹುದು ಎನ್ನಲಾಗುತ್ತಿದೆ. 8 ನೇ ವೇತನದ ಆಯೋಗದ ಘೋಷಣೆಯು 2024 ರ ಅಂತ್ಯದ ವೇಳೆಗೆ ಬರಬಹುದು. ಈ ಶಿಫಾರಸ್ಸುಗಳನ್ನು 2026 ರ ವೇಳೆಗೆ ಜಾರಿಗೊಳಿಸಲಾಗುವುದು ಎನ್ನಲಾಗುತ್ತಿದೆ.