Insurance: ಇನ್ಶೂರೆನ್ಸ್ ಪಾಲಿಸಿ ಮಾಡಿಸಿದವರ ಗಮನಕ್ಕೆ, ಇಂತಹ ಪಾಲಿಸಿಗಳ ಪ್ರೀಮಿಯಂ ದರ ಹೆಚ್ಚಳ.

ಜೀವ ವಿಮಾ ಪಾಲಿಸಿಗಳ ಪ್ರೀಮಿಯಂ ದರ ಹೆಚ್ಚಳ ಆಗಿದೆ ಮತ್ತು ಜನರು ಇನ್ನುಮುಂದೆ ಹೆಚ್ಚಿನ ಪ್ರೀಮಿಯಂ ಕಟ್ಟಬೇಕು.

Insurance Policy Premium Rate Hike: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ವಿಮೆ ತೆಗೆದುಕೊಳ್ಳುತ್ತಿದ್ದಾರೆ. ಕೊರೊನಾ ನಂತರ ವಿಮೆ ತೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.  ಜನರು ತಮ್ಮ ಕುಟುಂಬದ ಮತ್ತು ತಮ್ಮ ಸುರಕ್ಷತೆಯ ಉದ್ದೇಶದಿಂದ ಜೀವ ವಿಮಾ ಪಾಲಿಸಿಯನ್ನು ಮಾಡುತ್ತಾರೆ.

ಆರೋಗ್ಯ ವಿಮೆಯ ಜೊತೆಗೆ ವಿವಿಧ ರೀತಿಯ ವಿಮಾ ಪಾಲಿಸಿ (Insurance Policy) ಗಳು ಲಭ್ಯವಿದೆ. ಆದರೆ ಮುಂದಿನ ದಿನಗಳಲ್ಲಿ ಪ್ರೀಮಿಯಂ ಹಣ ಹೆಚ್ಚಾಗಲಿದೆ.

Insurance Policy Premium Rate Hike
Image Credit: economictimes

ವಿಮಾ ಪಾಲಿಸಿ ಪ್ರೀಮಿಯಂ ಹೆಚ್ಚಳ
ವಿಮಾ ಪಾಲಿಸಿ ಪ್ರೀಮಿಯಂ ಗಳು 10% ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಮೋಟಾರು, ಆಸ್ತಿ ಮತ್ತು ಇತರ ವಿವಿಧ ವಿಮಾ ಪಾಲಿಸಿಗಳ ಪ್ರೀಮಿಯಂಗಳು ಸಹ ಹೆಚ್ಚಾಗಬಹುದು.

ಮುಂದಿನ ಅವಧಿಯಲ್ಲಿ ಶ್ರೀಸಾಮಾನ್ಯನ ಮೇಲೆ ಹಣದುಬ್ಬರದ ಹೊರೆ ಪರಿಣಾಮ ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಮರುವಿಮೆ ಕಂಪನಿಗಳು ಗಮನಾರ್ಹ ನಷ್ಟವನ್ನು ಅನುಭವಿಸಿವೆ. ಇದರೊಂದಿಗೆ ಈ ಕಂಪನಿಗಳು ಅದಾಗಲೇ ತಮ್ಮ ದರವನ್ನು 40 ರಿಂದ 60% ಹೆಚ್ಚಿಸಿದೆ.

Insurance Policy latest news
Image Credit: geeksforgeeks

ವಿಮಾ ಪಾಲಿಸಿ
ಮರುವಿಮೆ ದರಗಳ ಹೆಚ್ಚಳದಿಂದಾಗಿ ಭಾರತದಲ್ಲಿ ಆರೋಗ್ಯ, ಆಟೋ ಮತ್ತು ಆಸ್ತಿ ಪಾಲಿಸಿಗಳ ಪ್ರೀಮಿಯಂ ಗಳು 10% ರಷ್ಟು ಹೆಚ್ಚಾಗುವ ಆತಂಕವಿದೆ. ನೀವು ಮೊದಲು ರೂಪಾಯಿ 10,000 ಪ್ರೀಮಿಯಂ ಪಾವತಿಸಿದರೆ ನಂತರ ನೀವು ರೂಪಾಯಿ 11,000 ಪಾವತಿಸಬೇಕಾಗಬಹುದು. ವಿಮಾ ಕಂಪನಿಗಳು ಮರು ವಿಮಾ ಕಂಪನಿಗಳೊಂದಿಗೆ ವಿಮೆಯ ಮೂಲಕ ತಮ್ಮ ನಷ್ಟವನ್ನು ಭರಿಸುತ್ತದೆ.

Join Nadunudi News WhatsApp Group

ಮರು ವಿಮಾ ಕಂಪನಿಗಳು ಪ್ರೀಮಿಯಂ ಹೆಚ್ಚಿಸಿದಂತೆ ಸಾಮಾನ್ಯ ವಿಮಾ ಕಂಪನಿಗಳು ಸಾರ್ವಜನಿಕರಿಗೆ ನೀಡುವ ಪಾಲಿಸಿಗಳಿಗೆ ಪ್ರೀಮಿಯಂ ಗಳನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಸಾಮಾನ್ಯ ವಿಮಾ ಪಾಲಿಸಿಗಳು ಹೆಚ್ಚು ದುಬಾರಿಯಾಗುತ್ತದೆ.

Join Nadunudi News WhatsApp Group