Interfaith Marriage: ಬೇರೆ ಧರ್ಮದವರನ್ನ ಮದುವೆಯಾದರೆ ಅವರಿಗೆ ಹುಟ್ಟುವ ಮಗು ಯಾವ ಧರ್ಮಕ್ಕೆ ಸೇರುತ್ತದೆ, ಕೋರ್ಟ್ ಆದೇಶ.
ಬೇರೆ ಬೇರೆ ಧರ್ಮದವರು ಮದುವೆಯಾಗಿದ್ದಾರೆ ಅವರ ಮಕ್ಕಳು ಯಾವ ಧರ್ಮಕ್ಕೆ ಸೇರುತ್ತಾರೆ ಎನ್ನುವ ಬಗ್ಗೆ ಕೋರ್ಟ್ ಮಹತ್ವದ ಆದೇಶ.
Interfaith Marriage: ಬೇರೆ ಬೇರೆ ಧರ್ಮದವರು ಮದುವೆಯಾದರೆ ಅದು ಅಂತರ್ಧರ್ಮಿಯ ವಿವಾಹ (Interfaith Marriage) ಆಗುತ್ತದೆ. ಸಾಮಾನ್ಯವಾಗಿ ಅಂತರ್ಧರ್ಮಿಯ ವಿವಾಹವನ್ನು ಎಲ್ಲರು ವಿರೋಧಿಸುತ್ತಾರೆ.
ತಮ್ಮ ಧರ್ಮವನ್ನು ಬಿಟ್ಟು ಬೇರೆ ಧರ್ಮದವರನ್ನು ವಿವಾಹವಾಗುವುದು ಕೆಲವು ಧರ್ಮದಲ್ಲಿಒಂದು ರೀತಿಯ ಅಪರಾಧವಾಗಿದೆ. ಇನ್ನು ಬೇರೆ ಬೇರೆ ಧರ್ಮದವರು ಮದುವೆಯಾಗಿದ್ದಾರೆ ಅವರ ಮಕ್ಕಳು ಯಾವ ಧರ್ಮಕ್ಕೆ ಸೇರುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದೆ ಇರುತ್ತದೆ.
ಅಂತರ್ಧರ್ಮಿಯ ವಿವಾಹ
ದೇಶದಲ್ಲಿ ಅಂತರ್ಧರ್ಮಿಯ ವಿವಾಹದ ಪ್ರಕರಣಗಳು ಸಾಕಷ್ಟಿವೆ. ಹಿಂದೂ ಮುಸ್ಲಿಂ, ಹಿಂದೂ ಕ್ರಿಶ್ಚಿಯನ್, ಮುಸ್ಲಿಂ ಕ್ರಿಶ್ಚಿಯನ್ ಸೇರಿದಂತೆ ಇನ್ನಿತರ ಧರ್ಮದವರು ಅಂತರ್ಧರ್ಮಿಯ ವಿವಾಹ ಆಗುತ್ತಾರೆ. ಇನ್ನು ಅಂತರ್ಧರ್ಮಿಯ ವಿವಾಹವು ಕೆಲವು ಕಡೆ ವಿವಾದವನ್ನು ಸೃಷ್ಟಿಸುತ್ತವೆ.
ವಿಶೇಷವಾಗಿ ಹಿಂದೂ ಹಾಗೂ ಮುಸ್ಲಿಂ ಧರ್ಮದವರು ಮದುವೆಯಾದರೆ ಹೆಚ್ಚಿನ ವಿರೋಧ ವ್ಯಕ್ತವಾಗುತ್ತದೆ. ಇನ್ನು ಅಂತರ್ಧರ್ಮೀಯ ವಿವಾಹಗಳನ್ನು ಬಲವಂತದ ಮತಾಂತರದ ಅಂತರ್ಗತ ಸೂಚನೆಯಾಗಿ ತೆಗೆದುಕೊಳ್ಳಲಾಗಿದೆ, ಕೆಲವು ವ್ಯಕ್ತಿಗಳು ಮದುವೆಯಾದರು ಅವರು ಮತಾಂತರಗೊಳ್ಳುವುದಿಲ್ಲ.
ಬೇರೆ ಧರ್ಮದವರನ್ನ ಮದುವೆಯಾದರೆ ಅವರಿಗೆ ಹುಟ್ಟುವ ಮಗು ಯಾವ ಧರ್ಮಕ್ಕೆ ಸೇರುತ್ತದೆ
ಇನ್ನು ಕೆಲ ಅಂತರ್ಧರ್ಮೀಯ ವಿವಾಹದಲ್ಲಿ ಪತಿ ಅಥವಾ ಪತ್ನಿ ಯಾವುದಾದರು ಒಂದು ಧರ್ಮಕ್ಕೆ ಮತಾಂತರ ಆಗುತ್ತಾರೆ. ಇನ್ನು ಬೇರೆ ಧರ್ಮದವರನ್ನ ಮದುವೆಯಾದರೆ ಅವರಿಗೆ ಹುಟ್ಟುವ ಮಗು ಯಾವ ಧರ್ಮಕ್ಕೆ ಸೇರಬೇಕು ಎನ್ನುವುದು ಮಕ್ಕಳ ಆಯ್ಕೆಯಲ್ಲಿರುತ್ತದೆ.
ಇನ್ನು ಪೋಷಕರು ಕೂಡ ಮಕ್ಕಳು ಯಾವ ಧರ್ಮಕ್ಕೆ ಸೇರಬೇಕು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಪತಿ ಹಾಗು ಪತ್ನಿ ಅವರ ಸ್ವಇಚ್ಛೆಯ ಮೇರೆಗೆ ಬೇರೆ ಧರ್ಮಕ್ಕೆ ಮತಾಂತರ ಆಗಬೇಕು. ಮಕ್ಕಳಿಗೂ ಕೂಡ ಯಾವ ಧರ್ಮಕ್ಕೆ ಮತಾಂತರ ಆಗಬೇಕು ಎನ್ನುವ ಬಗ್ಗೆ ಪೋಷಕರಾಗಲಿ ಇತರರಾಗಲಿ ಒತ್ತಾಯ ಮಾಡಬಾರದು. ಮಕ್ಕಳು ವಯಸ್ಸಿಗೆ ಬಂದಮೇಲೆ ಇದು ಅವರ ಆಯ್ಕೆಗೆ ಸೀಮಿತವಾದ ವಿಚಾರ ಕೂಡ ಆಗಿರುತ್ತದೆ.