Transaction Rules: 50 ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವವರಿಗೆ ಜಾರಿಗೆ ಬಂತು ಹೊಸ ನಿಯಮ, ಕೇಂದ್ರದ ಆದೇಶ.
ಅಂತರ್ರಾಷ್ಟ್ರೀಯ ವಹಿವಾಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ನಿಯಮ.
Rule For International Money Transaction Limits: ದೇಶದಲ್ಲಿ ಅಕ್ರಮ ಹಣದ ವರ್ಗಾವಣೆ ಹೆಚ್ಚುತ್ತಿರುವ ಹಿನ್ನಲೆ ಕೇಂದ್ರ ಸರ್ಕಾರ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಲೇ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮನಿ ಲಾಂಡರಿಂಗ್ ತಡೆಗಟ್ಟುವ ಬಗ್ಗೆ ಹೆಚ್ಚು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಅಕ್ರಮ ಹಣದ ವರ್ಗಾವಣೆಯ ತಡೆಗಟ್ಟುವಿಕೆ ಸರ್ಕಾರದ ಗುರಿಯಾಗಿದೆ. ಹೀಗಾಗಿ ಸರ್ಕಾರ ಅಂತಾರಾಷ್ಟ್ರೀಯ ವಹಿವಾಟಿಗೆ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಕೆಲವು ವಹಿವಾಟುಗಳಿಗೆ ಸಂಬಂಧಿಸಿದಂತೆ ಈಗ RBI ನಿಯಮವನ್ನ ಜಾರಿಗೊಳಿಸಿದ್ದು ಜನರು RBI ನಿಯಮವನ್ನ ಪಾಲಿಸುವುದು ಕಡ್ಡಾಯವಾಗಿದೆ.
ಮನಿ ಲಾಂಡರಿಂಗ್ ತಡೆಗಟ್ಟುವಿಕೆಗೆ ಕೇಂದ್ರದ ಹೊಸ ನಿಯಮ
ಸದ್ಯ ಅಕ್ರಮ ಹಣದ ವರ್ಗಾವಣೆಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಹಿವಾಟಿಗೆ (International Transaction) ಹೊಸ ನಿಯಮವನ್ನು ಪರಿಚಯಿಸಿದೆ. ಹೆಚ್ಚುತ್ತಿರುವ ವಂಚನೆಯನ್ನು ತಡೆಗಟ್ಟಲು ಹಾಗೂ ಸುರಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಸರ್ಕಾರ ಹಣ ವರ್ಗಾವಣೆ ತಡೆ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಹಣದ ವಹಿಟಿಗೆ ಪರಿಚಯಿಸಿರುವ ಹೊಸ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ.
50 ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವವರಿಗೆ ಜಾರಿಗೆ ಬಂತು ಹೊಸ ನಿಯಮ
ಇನ್ನುಮುಂದೆ 50 ಸಾವಿರ ರೂ. ಗಿಂತ ಹೆಚ್ಚಿನ ಅಂತಾರಾಷ್ಟ್ರೀಯ ವಹಿವಾಟು ಕೂಡ ಪರಿಶೀಲನೆಗೆ ಒಳಪಡಲಿದೆ. ಸರ್ಕಾರದ ಈ ಹೆಜ್ಜೆಯು ಟೀಟರ್ ಫಂಡಿಂಗ್ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಮಾಡಿದ ನಿಯಮಗಳನ್ನು ಹೆಚ್ಚು ಕಠಿಣಗೊಳಿಸಿದೆ. ಇದರಿಂದ ಸರ್ಕಾರವು ವಹಿವಾಟು ಪ್ರಕರಣಗಳನ್ನು ತನಿಖೆ ಮಾಡಲು ಸಾಧ್ಯವಾಗುತ್ತದೆ.
ವಾಸ್ತವವಾಗಿ, ಕೇಂದ್ರ ಸರ್ಕಾರವು 2005 ರಲ್ಲಿ ಮನಿ-ಲಾಂಡರಿಂಗ್ ತಡೆಗಟ್ಟುವಿಕೆ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಈ ನಿಯಮವು ರೂ. 50,000 ಕ್ಕಿಂತ ಹೆಚ್ಚಿನ ಅಂತರರಾಷ್ಟ್ರೀಯ ವಹಿವಾಟುಗಳನ್ನು ದಾಖಲಿಸಲು ಹೆಚ್ಚು ಕಷ್ಟಕರವಾಗಿದೆ. ಆದರೆ ಈಗ ಸರ್ಕಾರ ಮತ್ತೆ ತಿದ್ದುಪಡಿ ಮಾಡಿದೆ. ಸರ್ಕಾರದ ಈ ಕ್ರಮದಿಂದ 50,000 ರೂ.ಗಿಂತ ಹೆಚ್ಚಿನ ಪ್ರತಿ ವಿದೇಶಿ ವಹಿವಾಟು ಪರಿಶೀಲನೆಗೆ ಒಳಪಡುತ್ತದೆ. ವಹಿವಾಟುದಾರರನ್ನು ಗುರುತಿಸಿ, ವ್ಯವಹಾರದ ಉದ್ದೇಶವನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕಿದೆ.