iPhone 13: ಐಫೋನ್ ಪ್ರಿಯರಿಗೆ ಬಂಪರ್ ಆಫರ್, ಕೇವಲ 26 ಸಾವಿರಕ್ಕೆ ಖರೀದಿಸಿ ಐಫೋನ್ 13.

ಫ್ಲಿಪ್ಕಾರ್ಟ್ ನಲ್ಲಿ ಐಫೋನ್ ಮೇಲೆ ಆಫರ್ ಘೋಷಣೆ, ಅಗ್ಗದ ಬೆಲೆಗೆ ಖರೀದಿಸಿ ಐಫೋನ್

iPhone 13 Discount: ಭಾರತೀಯ ಮಾರುಕಟ್ಟೆಯಲ್ಲಿ iPhone ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. iPhone ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ Flipkart ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ.

ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 15 ಬಿಡುಗಡೆ ಕಾರಣ ಐಫೋನ್ ನ ಇನ್ನಿತರ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ ಅನ್ನು ಖರೀದಿಸಬಹುದು.

iPhone 13 Offer
Image Credit: Arstechnica

ಐಫೋನ್ ಪ್ರಿಯರಿಗೆ ಬಂಪರ್ ಆಫರ್
ಇನ್ನು 128GB ಸ್ಟೋರೇಜ್ ಹೊಂದಿರುವ iPhone 13 ಫೋನ್ ಬೆಲೆ 59,900 ರೂ.ಆಗಿದೆ. ನೀವು ಫ್ಲಿಪ್‌ ಕಾರ್ಟ್‌ ನ ನಡೆಯುತ್ತಿರುವ ಆಫರ್‌ ನಲ್ಲಿ ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ದುಬಾರಿ ಫೋನ್ ಅನ್ನು ಫ್ಲಿಪ್‌ ಕಾರ್ಟ್‌ನಲ್ಲಿ ಕೇವಲ 26,147 ರೂ. ಗಳಿಗೆ ರಿಯಾಯಿತಿ, ವಿನಿಮಯ ಮೌಲ್ಯ, ಸುರಕ್ಷಿತ ಪ್ಯಾಕೇಜಿಂಗ್ ಶುಲ್ಕ, ಪಿಕಪ್ ಶುಲ್ಕದ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಕೇವಲ 26 ಸಾವಿರಕ್ಕೆ ಖರೀದಿಸಿ ಐಫೋನ್ 13
ನಿಮ್ಮ ಹಳೆಯ iPhone 13 ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 27,150 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ನಂತರ ಕೆಲವು ಕೊಡುಗೆಗಳ ಮೂಲಕ ನೀವು 26,147 ರೂ.ಗಳಲ್ಲಿ iPhone 13 ಅನ್ನು ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಗಳಲ್ಲಿ ರೂ.1,000 ಇನ್‌ ಸ್ಟಂಟ್ ಕ್ಯಾಶ್‌ ಬ್ಯಾಕ್ ಪಡೆಯಬಹುದು. ಇದರ ಜೊತೆಗೆ ರೂ. 4,000 ಎಕ್ಸ್‌ ಚೇಂಜ್ ಬೋನಸ್, ರೂ. 5,000 ಇನ್‌ ಸ್ಟಂಟ್ ಸ್ಟೋರ್ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ.

iPhone 13 Discount
Image Credit: Hindustantimes

iPhone 13 Feature
ಈ iPhone 13 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. iPhone 13 ಪ್ರಾಥಮಿಕ ಕ್ಯಾಮರಾವನ್ನು 12MP ಮತ್ತು ಮುಂಭಾಗದ ಸೆಲ್ಫಿ ಕ್ಯಾಮರಾದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. A15 ಬಯೋನಿಕ್ ಚಿಪ್‌ ಸೆಟ್‌ನ ಪ್ರೊಸೆಸರ್ ಅನ್ನು ಪಡೆಯಬಹುದು. iPhone 13 ರ ಆರಂಭಿಕ ಬೆಲೆ 59,900 ರೂ. ಆಗಿದ್ದು ನೀವು ಫ್ಲಿಪ್ ಕಾರ್ಟ್ ನಲ್ಲಿ ಆಕರ್ಷಕ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group