iPhone 14: iPhone ಖರೀದಿಸುವವರಿಗೆ ವರಮಹಾಲಕ್ಷ್ಮಿ ಹಬ್ಬದ ಆಫರ್, 24 ಸಾವಿರಕ್ಕೆ ಖರೀದಿಸಿ iPhone 14 ಪ್ಲಸ್.

ಇದೀಗ ಶಕ್ತಿಯುತ ಬ್ಯಾಟರಿ ಪ್ಯಾಕ್ ಹೊಂದಿದ ಐಫೋನ್ 14 ಪ್ಲಸ್ ಅನ್ನು ಭರ್ಜರಿ ರಿಯಾಯಿತಿ ಖರೀದಿಸಿ.

iPhone 14 Plus Flipkart Offer: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ ಕಾರ್ಟ್ (Flipkart) ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ.

ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಫೋನ್ 15 ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಐಫೋನ್ ನ ಈ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ.

Buy iPhone 14 Plus for just 24 thousand
Image Credit: Hindustantimes

ಈ ಮಾದರಿಯ ಐಫೋನ್ ಖರೀದಿಗೆ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್
ಇತ್ತೀಚಿಗೆ ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಖರೀದಿಯ ಮೇಲೆ ವರಮಹಾಲಕ್ಷ್ಮಿ ಹಬ್ಬದ ಬಹುದೊಡ್ಡ  ರಿಯಾಯಿತಿ ಲಭ್ಯವಾಗುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಐಫೋನ್ 14 ಪ್ಲಸ್ (iPhone 14 Plus) ಮೇಲೆ ಭರ್ಜರಿ ಕೊಡುಗೆಯನ್ನು ನೀಡಲಿದೆ. ನೀವು ಅತಿ ಕಡಿಮೆ ಬೆಲೆಗೆ ಐಫೋನ್ 14 ಪ್ಲಸ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಐಫೋನ್ 14 ಪ್ಲಸ್ 512GB ಸ್ಟೋರೇಜ್, 6.7 ಇಂಚಿನ HD ಡಿಸ್ ಪ್ಲೇಯನ್ನು ಪಡೆದಿದೆ. ಐಫೋನ್ 14, 12 ಮೆಗಾಪಿಕ್ಸೆಲ್ ಕ್ಯಾಮರಾ ರಚನೆಯನ್ನು ಪಡೆದುಕೊಂಡಿದೆ.

ಐಫೋನ್ 14 ಪ್ಲಸ್ ಭರ್ಜರಿ ಡಿಸ್ಕೌಂಟ್
ಈ ಐಫೋನ್ 14 ಪ್ಲಸ್ ನ ಆರಂಭಿಕ ಬೆಲೆ 89,900 ರೂ. ಆಗಿದೆ. ಫ್ಲಿಪ್ ಕಾರ್ಟ್ ಐಫೋನ್ 14 ಪ್ಲಸ್ ಖರೀದಿಯ ಮೇಲೆ ರಿಯಾಯಿತಿ ನೀಡಿದ್ದು, ನೀವು ಈ ಐಫೋನ್ ಅನ್ನು ಕೇವಲ 76,999 ರೂ. ಗೆ ಖರೀದಿಸಬಹುದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 14 ಪ್ಲಸ್ ಖರೀದಿಯ ಮೇಲೆ 12,901 ರೂ. ಗಳನ್ನೂ ಉಳಿಸಬಹುದಾಗಿದೆ. ಇನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಬರೋಬ್ಬರಿ 4000 ರೂ ಗಳ ರಿಯಾಯಿತಿಯ ಮೂಲಕ ಕೇವಲ 72,999 ರೂ. ಗಳಲ್ಲಿ ಖರೀದಿಸಬಹುದು.

Bumper offer on Flipkart for iPhone purchase
Image Credit: Aajtak

ಕೇವಲ 24 ಸಾವಿರಕ್ಕೆ ಖರೀದಿಸಿ ಐಫೋನ್ 14 ಪ್ಲಸ್
ಇನ್ನು ನಿಮ್ಮ ಬಳಿ ಹಳೆಯ ಐಫೋನ್ 12 ಮಾದರಿ ಇದ್ದರೆ ಇದರ ವಿನಿಮಯದೊಂದಿಗೆ ನೀವು 48,999 ರೂ ಗಳ ವಿನಿಮಯ ಕೊಡುಗೆಯನ್ನು ಕೂಡ ಪಡೆಯಬಹುದು. ವಿನಿಮಯ ಸೌಲಭ್ಯವನ್ನು ಬಳಸಿಕೊಂಡು ಕೇವಲ 24,000 ಸಾವಿರದಲ್ಲಿ ಈ ಐಫೋನ್ 14 ಪ್ಲಸ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಐಫೋನ್ 14 ಪ್ಲಸ್ ನಲ್ಲಿ ಶಕ್ತಿಯುತ ಬ್ಯಾಟರಿಯನ್ನು ಅಳವಡಿಸಿದ್ದು 4323 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group