iPhone 15 Problem: ಐಫೋನ್ 15 ನಲ್ಲಿ ದೊಡ್ಡ ವಿಫಲತೆ, ಐಫೋನ್ 15 ಖರೀದಿಯ ಆಸೆ ಇದ್ದವರಿಗೆ ಬೇಸರದ ಸುದ್ದಿ.

ಹಲವು ವರ್ಷಗಳ ನಂತರ ಮೊದಲ ಬಾರಿಗೆ ಬಾಳಿಕೆ ಪರೀಕ್ಷೆಯಲ್ಲಿ ಐಫೋನ್ ವಿಫಲವಾಗಿದೆ.

iPhone 15 Pro Max Failure: ಸದ್ಯ Apple ಕಂಪನಿಯ iPhone 15, iPhone 15 Pro, iPhone 15 Plus, iPhone 15 Pro Max ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಅಕ್ರೇಜ್ ಹುಟ್ಟಿಸಿವೆ ಎನ್ನಬಹುದು. iPhone ಸರಣಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿನಿಂದ ಇನ್ನಿತರ ಬ್ರಾಂಡ್ ಗಳು ತಮ್ಮ ಬೇಡಿಕೆ ಕಳೆದುಕೊಳ್ಳುತ್ತಿದೆ. ಹತ್ತು ಹಲವು ಸುಧಾರಿತ ಫೀಚರ್ ಇರುವ iPhone 15 ಲಾಂಚ್ ಆಗಿರುವುದು ಇದನ್ನು ಖರೀದಿಸಲು ಜನರು ಕ್ಯೂ ನಲ್ಲಿ ನಿಂತಿದ್ದಾರೆ.

ಇನ್ನು ಕಂಪನಿಯು ತನ್ನ ನಾಲ್ಕು ಮಾದರಿಗಳ ಮಾರಾಟವನ್ನು ಪ್ರಾರಂಭಿಸಿದೆ. ಹೆಚ್ಚಿನ ಸುರಕ್ಷತಾ ಫೀಚರ್ ಇರುವ iPhone ಸದ್ಯ ದೊಡ್ಡ ಮಟ್ಟಿನ ವಿಫಲತೆ ಕಂಡು ಕೊಂಡಿದೆ. ಈ ಮೂಲಕ iPhone 15 ಖರೀದಿಸಿದವರಿಗೆ ಶಾಕ್ ನೀಡಿದೆ. iPhone 15 ಸರಣಿಯ ಯಾವ ಮಾದರಿ ಬಾಳಿಕೆ ಪರೀಕ್ಷೆಯಲ್ಲಿ ವಿಫಲವಾಗಿದೆ ಎನ್ನುವ ಬಗ್ಗೆ ವಿವರಣೆ ತಿಳಿಯೋಣ.

iphone 15 pro max
Image Credit: Indiatimes

iPhone 15 Pro Max ನಲ್ಲಿ ದೊಡ್ಡ ವಿಫಲತೆ
ಸದ್ಯ iPhone 15 ಸರಣಿಯ ಫೋನ್ ಗಳು 80 ಸಾವಿರದಿಂದ 2 ಲಕ್ಷ ಬೆಲೆಯವರೆಗೂ ಲಭ್ಯವಾಗಲಿದೆ. ಇದೀಗ iPhone 15 Pro Max ರ ಸರಣಿ ಐಫೋನ್ ಖರೀದಿಯ ಆಸೆಯಲ್ಲಿದ್ದವರಿಗೆ ಬೇಸರ ಮೂಡಿಸಿದೆ. Apple ತನ್ನ iPhone 15 Pro Max ನಲ್ಲಿ ಟೈಟಾನಿಯಂ ಅನ್ನು ಬಳಸಿದೆ ಎಂದು ಹೇಳಿಕೊಂಡಿದೆ. ಈ ಫೀಚರ್ ಫೋನ್ ಅನ್ನು ತುಂಬಾ ಪ್ರಬಲಗೊಳಿಸುತ್ತದೆ. ಆದರೆ ವಾಸ್ತವವಾಗಿ iPhone 15 Pro Max ಬಾಳಿಕೆ ಪರೀಕ್ಷೆಯಲ್ಲಿ ವಿಫಲವಾಗಿದೆ.

ಐಫೋನ್ 15 ಖರೀದಿಯ ಆಸೆ ಇದ್ದವರಿಗೆ ಬೇಸರದ ಸುದ್ದಿ
ಜನಪ್ರಿಯ ಟೆಕ್ ಯೂಟ್ಯೂಬರ್ JerryRigEverything Apple iPhone 15 Pro Max ನಲ್ಲಿ ಬಾಳಿಕೆ ಪರೀಕ್ಷೆಯನ್ನು ಮಾಡಿದ್ದಾರೆ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಬಾಳಿಕೆ ಪರೀಕ್ಷೆಯಲ್ಲಿ ಐಫೋನ್ ವಿಫಲವಾಗಿದೆ. YouTuber ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ Apple iPhone 15 Pro Max ಬಾಳಿಕೆ ಪರೀಕ್ಷೆಯನ್ನು ಕಾಣಬಹುದಾಗಿದೆ. iPhone 15 Pro Max ನ 128GB ಇನ್ನು 1,59,900 ರೂ. ಬೆಲೆಯ iPhone 15 Pro Max ಬಾಳಿಕೆ ಪರೀಕ್ಷೆಯಲ್ಲಿ ವಿಫಲಗೊಂಡಿರುವು Apple ಕಂಪನಿಗೆ ದೊಡ್ಡ ಹೊಡೆತವನ್ನು ನೀಡಲಿದೆ ಎನ್ನಬಹುದು.

iphone 15 pro max failure
Image Credit: Newsbytesapp

ಕೇವಲ 5 ಸೆಕೆಂಡುಗಳಲ್ಲಿ ಒಡೆದುಹೋದ iPhone
ಪರೀಕ್ಷೆಯ ಸಮಯದಲ್ಲಿ ಫೋನ್‌ ನ ಹಿಂದಿನ ಪ್ಯಾನೆಲ್‌ ನಲ್ಲಿರುವ ಗಾಜು ಕೇವಲ 5 ಸೆಕೆಂಡುಗಳಲ್ಲಿ ಒಡೆದಿದೆ. ಫೋನ್‌ನ ಡಿಸ್ಪ್ಲೇ, ಬ್ಯಾಕ್ ಪ್ಯಾನೆಲ್ ಮತ್ತು ಬದಿಗಳನ್ನು ಸ್ಕ್ರಾಚ್ ಮಾಡುವ ಪ್ರಯತ್ನದಲ್ಲಿ ಯೂಟ್ಯೂಬರ್ ಚಾಕುವನ್ನು (ಕಟರ್) ಬಳಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. 2014 ರಲ್ಲಿ iPhone 6 Plus ವಿಫಲಗೊಂಡ ಬಳಿಕ ಇದೀಗ ಹಲವು ವರ್ಷಗಳ ನಂತರ 2023 iPhone 15 Pro Max ವಿಫಲಗೊಂಡಿದೆ.

Join Nadunudi News WhatsApp Group

Join Nadunudi News WhatsApp Group