iPhone 15: ಬಿಡುಗಡೆಗೂ ಮುನ್ನವೇ ಲೀಕ್ ಆಯಿತು ಐಫೋನ್ 15 ಬೆಲೆ ಮತ್ತು ಫೀಚರ್, ಸಕತ್ ಆಗಿದೆ ಐಫೋನ್ 15.
ಇನ್ನು ಕೆಲವೇ ತಿಂಗಳುಗಳಲ್ಲಿ ಮರುಕಟ್ಟೆಗೆ ಎಂಟ್ರಿ ಕೊಡಲಿರುವ ಐಫೋನ್ 15 ನ ಫೀಚರ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
iPhone 15 Feature: ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿರುವ ಬ್ರಾಂಡ್ ಎಂದರೆ ಅದು ಐಫೋನ್. ಐಫೋನ್ ಖರೀದಿಯ ಬೆಲೆಯಲ್ಲಿ ಎರಡು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಬಹುದಾಗಿದೆ. ದೇಶದ ದುಬಾರಿ ಬ್ರಾಂಡ್ ಆಗಿರುವ ಐಫೋನ್ ಬಳಕೆದಾರರಿಗೆ ವಿಭಿನ್ನ ಫೀಚರ್ ಅನ್ನು ನೀಡುತ್ತದೆ. ಹೆಚ್ಚಿನ ಫೀಚರ್ ನೀಡುವ ಐಫೋನ್ ದುಬಾರಿಯಾದರೂ ಇದರ ಮೇಲಿನ ಬೇಡಿಕೆ ಕೊಂಚವೂ ಕಡಿಮೆ ಆಗುವುದಿಲ್ಲ.
ಇನ್ನು Apple ಕಂಪನಿಯು ನೂತನ ಮಾದರಿಯ ಐಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಐಫೋನ್ 15 ಬಾರಿ ವೈರಲ್ ಆಗುತ್ತಿದೆ. ಇನ್ನು ಐಫೋನ್ 15 ಫೀಚರ್ ನಲ್ಲಿ ಹಲವು ಬದಲಾವಣೆ ತರಲಾಗಿದೆ. ಐಫೋನ್ 15 ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡಲಿದೆ.
ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಐಫೋನ್ 15 ಕ್ರೇಜ್
ಐಫೋನ್ 15 ಇನ್ನು ಕೆಲವೇ ಕೆಲವು ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬಿಡುಗಡೆಗೂ ಮುನ್ನ ಐಫೋನ್ 15 ಬಾರಿ ಸದ್ದು ಮಾಡಿದ್ದು ಇದೀಗ ಐಫೋನ್ 15 ನ ಫೀಚರ್ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಐಫೋನ್ 15 ಬಿಡುಗಡೆಯ ದಿನಾಂಕ ಸದ್ಯದಲ್ಲೆ ಬಹಿರಂಗವಾಗಲಿದ್ದು ಫೀಚರ್ ಸೋರಿಕೆಯಾದ ಕಾರಣ ಬಿಡುಗಡೆಗೂ ಮುನ್ನವೇ ಐಫೋನ್ 15 ನ ಮೇಲಿನ ಕ್ರೇಜ್ ಹೆಚ್ಚಿಸಿದೆ. ಐಫೋನ್ 15 ನಲ್ಲಿ ಐಫೋನ್ 15, ಐಫೋನ್ 15 ಪ್ರೊ, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮ್ಯಾಕ್ಸ್ ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ.
ಐಫೋನ್ 15 ಸ್ಪೆಷಲ್ ಫೀಚರ್
iPhone 15 6 .1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು ಡ್ಯುಯೆಲ್ ಕ್ಯಾಮರವನ್ನು ಒಳಗೊಂಡಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ. ಐಫೋನ್ 15 ಪವರ್ ಫುಲ್ ಬಯೋನಿಕ್ A16 SoC ಪ್ರೊಸೆಸರ್ ಅನ್ನು ಹೊಂದಿದೆ. ಐಫೋನ್ 15 ಐಫೋನ್ 14 ನ ಮಾದರಿಯನ್ನು ಹೊಲಲಿದೆ. ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳು ಬಯೋನಿಕ್ A17 ಪ್ರೊಸೆಸರ್ ನಲ್ಲಿ ಬರಲಿದೆ.
ಐಫೋನ್ 15 ಬೆಲೆ
ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ. ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 1538 77mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ.
ಇನ್ನು ಐಫೋನ್ 14 ಮಾದರಿಯ ಬೆಲೆಯ ಆಧಾರದ ಮೇಲೆ ಐಫೋನ್ 15 ಗೆ ಸರಿಸುಮಾರು 79,900 ರೂ ಆರಂಭಿಕ ಬೆಲೆಯನ್ನು ಅಂದಾಜಿಸಲಾಗಿದೆ. ಇನ್ನು ಕಂಪನಿಯು ಈ ಮಾದರಿಯ ಬೆಲೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ. ಸೆಪ್ಟೆಂಬರ್ ಅಂತ್ಯದೊಳಗೆ ಐಫೋನ್ 15 ಅನ್ನು ಕಂಪನಿಯು ಬಹಿರಂಗಪಡಿಸಲಿದೆ.