iPhone 16: ಲೀಕ್ ಆಯಿತು ಐಫೋನ್ 16 ಫೀಚರ್, ಫೀಚರ್ ಕಂಡು ಇಡೀ ಟೆಕ್ ಲೋಕವೇ ಆಶ್ಚರ್ಯವಾಗಿದೆ.

ಜನರನ್ನು ಅಚ್ಚರಿಗೊಳಿಸುತ್ತಿದೆ iPhone 16 ಫೀಚರ್.

iPhone 16 Feature: ದೇಶದ ದುಬಾರಿ ಬ್ರಾಂಡ್ ಆಗಿರುವ iPhone ಸದ್ಯ iPhone 16 ಬಿಡುಗಡೆಯ ಸಿದ್ಧತೆಯಲ್ಲಿದೆ. ಬಿಡುಗಡೆಗೆ ಇನ್ನು ಸಾಕಷ್ಟು ಸಮಯವಿದ್ದರೂ ಕೂಡ iPhone 16 ರ ಒಂದಿಷ್ಟು ಫೀಚರ್ ಸೋರಿಕೆಯಾಗಿ ಸಕ್ಕತ್ ವೈರಲ್ ಆಗುತ್ತಿದೆ. ಹೌದು ಐಫೋನ್ 16 ಕ್ಯಾಮೆರಾ ಮತ್ತು ಫೀಚರ್ ಬಗ್ಗೆ ಒಂದಿಷ್ಟು ಮಾಹಿತಿ ಈಗ ಸೋರಿಕೆ ಆಗಿದ್ದು ಜನರು ಐಫೋನ್ 16 ಫೀಚರ್ ಕಂಡು ಮೆಚ್ಚುಗೆ ಹೊರಹಾಕಿದ್ದಾರೆ.

2023 ರಲ್ಲಿ iPhone 15 ಸರಣಿ ಬಿಡುಗಡೆಗೊಂಡಿದ್ದು, 2024 ರಲ್ಲಿ iPhone 16 ಮಾರುಕಟ್ಟೆಯಲ್ಲಿ ಗ್ರಾಂಡ್ ಎಂಟ್ರಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. iPhone 15 ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಪಾಡೆದುಕೊಂಡಿದೆ. ಸದ್ಯ iPhone 16 ಭರ್ಜರಿಯಾಗಿ ರೆಡಿಯಾಗುತ್ತಿದೆ. ಸದ್ಯ iPhone 16 ಫೀಚರ್ ಜನರನ್ನು ಅಚ್ಚರಿಗೊಳಿಸುತ್ತಿದೆ.

iPhone 16 Feature
Image Credit: Macworld

ಲೀಕ್ ಆಯಿತು ಐಫೋನ್ 16 ಫೀಚರ್
ಮುಂಬರಲಿರುವ iPhone 16 ಸರಣಿಯಲ್ಲಿ iPhone 16, iPhone 16 Pro, iPhone 16 Pro Max and iPhone 16 Plus ಮಾದರಿಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು iPhone 16 ಸರಣಿ 6.1 ಇಂಚಿನ ಡಿಸ್ಪ್ಲೇ, iPhone 16 Pro ಸರಣಿ 6.3 ಇಂಚಿನ ಡಿಸ್ಪ್ಲೇ, iPhone 16 Pro Max ಸರಣಿ 6.9 ಇಂಚಿನ ಡಿಸ್ಪ್ಲೇ, iPhone 16 Pro Plus ಸರಣಿ 6.7 ಇಂಚಿನ ಡಿಸ್ಪ್ಲೇ ಹೊಂದಿದೆ.

iPhone 16 ಪ್ರೊಸೆಸರ್ ನ ವಿಶೇಷತೆಯೇನು..?
ಐಫೋನ್ 16 ಮಾದರಿಗಳು A18 ಬಯೋನಿಕ್ ಚಿಪ್‌ ಸೆಟ್‌ ನೊಂದಿಗೆ ಬರುತ್ತವೆ. ಎಲ್ಲಾ ಮಾದರಿಗಳಲ್ಲಿ ಕಾರ್ಯಕ್ಷಮತೆಯನ್ನು ಸ್ಥಿರವಾಗಿಡಲು Apple ಕಂಪನಿಯು A18 ಚಿಪ್‌ ಸೆಟ್ ಅನ್ನು ಬಳಸಬಹುದು ಎಂದು ವರದಿಯಾಗಿದೆ. ಈ ಚಿಪ್‌ ನಲ್ಲಿರುವ t8140 ಸಿಸ್ಟಮ್ ಎಲ್ಲಾ iPhone 16 ಮಾದರಿಗಳಿಗೆ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. 2024 ರ ಸೆಪ್ಟೆಂಬರ್ ತಿಂಗಳಿನಲ್ಲಿ iPhone 16 ಮಾರುಕಟ್ಟೆಯಲ್ಲಿ ರಿಲೀಸ್ ಆಗಲಿದೆ. ಇನ್ನು iPhone 16 ನಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಸೆನ್ಸಾರ್ ಅನ್ನು ನೀಡಲಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ.

iPhone 16 Feature Leak
Image Credit: Techcrunch

ಫೀಚರ್ ಕಂಡು ಇಡೀ ಟೆಕ್ ಲೋಕವೇ ಆಶ್ಚರ್ಯವಾಗಿದೆ
ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಐಫೋನ್ 16 ಬೆಲೆ 90 ಸಾವಿರದಿಂದ ಆರಂಭ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. iPhone 16 ಸರಣಿಯು 3-ನ್ಯಾನೋಮೀಟರ್ A18 ಚಿಪ್ ಅನ್ನು ನೀಡುತ್ತದೆ. ಕ್ಯಾಮೆರಾಗೆ ಸಂಬಂಧಿಸಿದಂತೆ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ‘ಟೆಟ್ರಾ-ಪ್ರಿಸ್ಮ್’ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿವೆ ಎಂದು ವರದಿಯಾಗಿದೆ.

Join Nadunudi News WhatsApp Group

ಬೆಸ್ಟ್ ಕ್ವಾಲಿಟಿ ಫೋಟೋಗ್ರಫಿಗಾಗಿ ಆಪ್ಟಿಕಲ್ ಜೂಮ್ ಅನ್ನು 3x ನಿಂದ 5x ಗೆ ಹೆಚ್ಚಿಸಲಾಗಿದೆ. ಐಫೋನ್ 16 ಪ್ರೊ ಸರಣಿಗೆ ಬಳಸಲಾದ 48- ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನ್ 16 ಆರಂಭಿಕ ಬೆಲೆ ಸುಮಾರು 90 ಸಾವಿರ ಆಗಿರಬಹುದು ಎಂದು ಹೇಳಲಾಗುತ್ತಿದೆ.

Join Nadunudi News WhatsApp Group