iPhone 9:41 AM Secrete: ಲಾಂಚ್ ಆಗುವ ಎಲ್ಲಾ iPhone ನಲ್ಲಿ 9:41 AM ಎಂದು ಏಕೆ ಇರುತ್ತದೆ…? ಸಾಕಷ್ಟು ಜನರಿಗೆ ತಿಳಿದಿಲ್ಲ.

ಡಿವೈಸ್ ಗಳ ಮೇಲೆ 9:41 AM ಇರುವುದಕ್ಕೆ ಕಾರಣ ಏನು...?

iPhone Device Display Timing Secrete: ದೇಶದ ಜನಪ್ರಿಯ ಬ್ರಾಂಡ್ ಆಗಿರುವ iPhone ಮಾರುಕಟ್ಟೆಯಲ್ಲಿ ಒಂದು ರೀತಿಯ ಕ್ರೇಜ್ ಹುಟ್ಟಿಸಿದೆ. Apple ಬ್ರಾಂಡ್ ಗಳು ದೇಶದ ದುಬಾರಿ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ iPhone 15 ಮಾದರಿಗಳು ಬಿಡುಗಡೆಯಾಗಿದ್ದು ಇದರ ಬೇಡಿಕೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡಿದೆ.

ಇನ್ನು ದೇಶದಲ್ಲಿ ಸಾಕಷ್ಟು ಜನರು iPhone ಅನ್ನು ಬಳಸುತ್ತಾರೆ. iPhone ಬಳಸುವ ಹೆಚ್ಚಿನ ಜನರಿಗೆ iPhone ಬಗ್ಗೆ ಸಾಕಷ್ಟು ವಿಷಯಗಳು ತಿಳಿದಿರುವುದಿಲ್ಲ. ಇದೀಗ ನಾವು Apple ಕಂಪನಿ ಲಾಂಚ್ ಮಾಡುವ ಐಫೋನ್ ನ ಬಗ್ಗೆ ಜನರಿಗೆ ತಿಳಿದಿರ ಒಂದು ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.

iPhone Secrete
Image Credit: Tomsguide

ಲಾಂಚ್ ಆಗುವ iPhone ಡಿವೈಸ್ ಗಳಲ್ಲಿ 9 :41 AM ಎಂದು ಏಕೆ ಇರುತ್ತದೆ..?
ನೀವು ಗಮನಿಸಿದ್ದೀರಾ..? Apple ಕಂಪನಿಯು ಲಾಂಚ್ ಮಾಡುವ ತನ್ನ ಉತ್ಪನ್ನಗಳ ಡಿವೈಸ್ ನಲ್ಲಿ 9: 41 AM ಇರುವುದನ್ನು. ಐಫೋನ್, ಐಪ್ಯಾಡ್ ಡಿವೈಸ್ ಡಿಸ್ಪ್ಲೇ ಗಳ ಮೇಲೆ 9:41AM ಇರುವ ಫೋಟಿವನ್ನು ನೀವು ನೋಡಿರಬಹುದು. ನೀವು ಇದು ಸಮಯ ಎಂದು ಭಾವಿಸರಬಹುದು. ಆದರೆ ಅದು ಸಮಯ ಮಾತ್ರವಲ್ಲ. Apple ಕಂಪನಿಗೆ ಅದೊಂದು ಭಾವನಾತ್ಮಕ ವಿಷಯವಾಗಿದೆ. ಲಾಂಚ್ ಆಗುವ iPhone ಡಿವೈಸ್ ಗಳಲ್ಲಿ 9:41 AM ಎಂದು ಏಕೆ ಇರುತ್ತದೆ..? ಎನ್ನುವ ಪ್ರಶ್ನೆ ಇಲ್ಲಿದೆ ಉತ್ತರ.

ಡಿವೈಸ್ ಗಳ ಮೇಲೆ 9:41 AM ಇರುವುದಕ್ಕೆ ಕಾರಣ ಇದೆ ನೋಡಿ
iPhone ಡಿವೈಸ್ ಗಳ ಮೇಲೆ ಇರುವ 9 :41 AM ಗು ಆಪಲ್ ಕಂಪನಿಗೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಈ ಕಾರಣಕ್ಕೆ ಕಂಪನಿಯು ತನ್ನ ಎಲ್ಲ ಉತ್ಪನ್ನಗಳ ಡಿವೈಸ್ ಮೇಲೆ 9 :41 AM ಎಂದು ಹಾಕಿರುತ್ತದೆ. ಸ್ಟೀವ್ ಜಾಬ್ಸ್ ಜನವರಿ 9, 2007 ರಂದು ಮ್ಯಾಕ್‌ವರ್ಲ್ಡ್ ಕಾನ್ಫರೆನ್ಸ್ ಮತ್ತು ಎಕ್ಸ್‌ಪೋದಲ್ಲಿ ಐಫೋನ್ ಮತ್ತು ಐಪ್ಯಾಡ್ ಅನ್ನು ಬಿಡುಗಡೆ ಮಾಡಿದರು. ಸ್ಟೀವ್ ಜಾಬ್ಸ್ ತಮ್ಮ ಉತ್ಪನ್ನವನ್ನು ಪ್ರಾರಂಭಿಸುವಾಗ ಆ ಕ್ಷಣದ ನಿಖರವಾದ ಸಮಯವನ್ನು ತೋರಿಸಲು ಬಯಸಿದ್ದರು. ಈಗ ಆ ಕಾರ್ಯಕ್ರಮವು 9:00 ಗಂಟೆಗೆ ಪ್ರಾರಂಭವಾಯಿತು.

iPhone Device Display Timing Secrete
Image Credit: Techxmedia

ಅತಿಥಿಗಳನ್ನು ಸ್ವಾಗತಿಸಿದ ನಂತರ, ವೇದಿಕೆಯ ಪರದೆಯ ಮೇಲೆ ಐಫೋನ್ ಅನ್ನು ಪ್ರಸ್ತುತಪಡಿಸಲಾಯಿತು. ನಿಖರವಾಗಿ 9:40 ಕ್ಕೆ ಪರದೆಯ ಮೇಲೆ ಐಫೋನ್‌ ನ ಫೋಟೋವನ್ನು ಪ್ರದರ್ಶಿಸಲಾಗುತ್ತದೆ ಎಂದು ಮೊದಲೇ ಯೋಜಿಸಲಾಗಿತ್ತು. ಆದರೆ, ಒಂದೆರಡು ನಿಮಿಷ ತಡವಾಗಬಹುದು ಎಂಬ ಕಾರಣಕ್ಕೆ 41 ರಿಂದ 42 ನಿಮಿಷಗಳ ನಡುವಿನ ಸಮಯವನ್ನು ಹೊಂದಿಸಲಾಗಿದೆಯಂತೆ.

Join Nadunudi News WhatsApp Group

ಅದೇನೆಂದರೆ, ಈವೆಂಟ್‌ ನಲ್ಲಿ ಹಾಜರಿದ್ದ ಪ್ರತಿಯೊಬ್ಬರ ವಾಚ್ ಮತ್ತು ಫೋನ್ ಡಿಸ್‌ ಪ್ಲೇಯಲ್ಲಿ ಪ್ರದರ್ಶಿಸಲಾದ ಸಮಯವನ್ನು ಇಲ್ಲಿ ತೋರಿಸಿರುವ ಸಮಯದಂತೆ ಮಾಡುವುದು ಅತಿಥಿಗಳನ್ನು ಆಕರ್ಷಿಸುವ ತಂತ್ರವಾಗಿ ಕೆಲಸ ಮಾಡಿದೆ. ಪರದೆಯ ಮೇಲೆ ಐಫೋನ್‌ ನ ಫೋಟೋವನ್ನು ಪ್ರದರ್ಶಿಸಿದಾಗ, ಗಡಿಯಾರದಲ್ಲಿ ಅದು 9:41 ಆಗಿತ್ತು.

ಅಂದಿನಿಂದ ಸ್ಮಾರ್ಟ್ ವಾಚ್ ಹೊರತುಪಡಿಸಿ ಎಲ್ಲಾ ಆಪಲ್ ಉತ್ಪನ್ನಗಳಲ್ಲಿ ಸಮಯ 9:41 ಅನ್ನು ಪ್ರದರ್ಶಿಸಲಾಗುತ್ತದೆ. ಈ ಎಲ್ಲ ವಿಷಯವನ್ನು ಗಮನಿಸಿದ ಬಾಲಕ ತಿಳಿದುಬಂದ ವಿಷಯವೇನೆಂದರೆ 9:41 AM ಸಮಯವು ಮೊದಲ ಐಫೋನ್ ಡಿವೈಸ್ ಲಾಂಚ್ ಮಾಡಿದ ಸಮಯವಾಗಿದೆ. ಹೀಗಾಗಿ ಎಲ್ಲ ಐಫೋನ್ ಡಿವೈಸ್ ನಲ್ಲಿಯೂ ಅದೇ ಸಮಯವನ್ನು ತೋರಿಸಲಾಗುತ್ತದೆ.

Join Nadunudi News WhatsApp Group