Flipkart Offer: ಅತಿ ಅಗ್ಗದ ಬೆಲೆಯಲ್ಲಿ iPhone ವಿವಿಧ ಮಾದರಿಗಳು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ.
ಐಫೋನ್ ಖರೀದಿಸಬಯಸುವವರಿಗೆ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ.
iPhone Offer In Flipkart: ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಗ್ರಾಹಕರಿಗಾಗಿ ವಿವಿಧ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು ದೇಶದ ದುಬಾರಿ ಬ್ರಾಂಡ್ ಆಗಿರುವ ಐಫೋನ್ (iPhone) ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ವಿವಿಧ ಕೊಡುಗೆಗಳು ಲಭ್ಯವಿದೆ.
ಇನ್ನು ಫ್ಲಿಪ್ ಕಾರ್ಟ್ ಇದೀಗ ಐಫೋನ್ 11, ಐಫೋನ್ 13, ಐಫೋನ್ 14, ಖರೀದಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ನೀವು ಈ ದುಬಾರಿ ಐಫೋನ್ ಗಳನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಐಫೋನ್ ಖರೀದಿಸಲು ಬಯಸುವವರಿಗೆ ಇದೀಗ ಫ್ಲಿಪ್ಕಾರ್ಟ್ ಭರ್ಜರಿ ರಿಯಾಯಿತಿ ಘೋಷಿಸಿದೆ.
ಐಫೋನ್ 11 ಫ್ಲಿಪ್ ಕಾರ್ಟ್ ಆಫರ್
ಫ್ಲಿಪ್ಕಾರ್ಟ್ ಇದೀಗ ಐಫೋನ್ 11 ಖರೀದಿಯ ಮೇಲೆ 11 ಪ್ರತಿಶತ ರಿಯಾಯಿತಿಯನ್ನು ನೀಡಲಿದೆ. ಐಫೋನ್ 11 ನ ಮೂಲ ಬೆಲೆ ₹ 43,900 ಆಗಿದ್ದು, ರಿಯಾಯಿತಿ ನಂತರ ₹ 39,999ಕ್ಕೆ ಗ್ರಾಹಕರಿಗೆ ನೀಡಲಾಗುತ್ತಿದೆ.
ಇನ್ನು ಗ್ರಾಹಕರಿಗೆ ₹ 35,000 ವಿನಿಮಯ ಬೋನಸ್ ಅನ್ನು ಸಹ ನೀಡಲಾಗುತ್ತಿದೆ. ಈ ವಿನಿಮಯ ಬೋನಸ್ನ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ನೀವು ಅದರ ಬೆಲೆಯನ್ನು ಕೇವಲ ₹ 3,999 ರೂ. ಗಳಲ್ಲಿ ಖರೀದಿಸಬಹುದಾಗಿದೆ. ಈ ಐಫೋನ್ 11 64GB ಸ್ಟೋರೇಜ್ ಅನ್ನು ಹೊಂದಿದೆ. ಇದರೊಂದಿಗೆ 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ಪ್ಲೇ ಸಹ ಲಭ್ಯವಿದೆ.
ಐಫೋನ್ 13 ಫ್ಲಿಪ್ ಕಾರ್ಟ್ ಆಫರ್
ಐಫೋನ್ 13 ಖರೀದಿಯ ಮೇಲೆ ಗ್ರಾಹಕರಿಗಾಗಿ 4991 ರೂ. ಗಳ ಆಫರ್ ಅನ್ನು ಫ್ಲಿಪ್ಕಾರ್ಟ್ ಘೋಷಿಸಿದೆ. ಐಫೋನ್ 13 128GB ಸ್ಟೋರೇಜ್ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಈ ಐಫೋನ್ 13 ನ ಆರಂಭಿಕ ಬೆಲೆ 62,990 ರೂ. ಆಗಿದೆ. ಇನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.
ಫ್ಲಿಪ್ ಕಾರ್ಟ್ ಆಫರ್ ಅನ್ನು ಬಳಸಿಕೊಂಡು ಗ್ರಾಹಕರು ಐಫೋನ್ 13 ಅನ್ನು ಕೇವಲ 57999 ರೂ. ಗಳಲ್ಲಿ ಖರೀದಿಸಬಹುದು. ಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ರೂ 2,900 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು ಮತ್ತು ರೂ 54,099 ಗೆ iPhone 13 ಅನ್ನು ಖರೀದಿಸಬಹುದು.
ಐಫೋನ್ 14 ಫ್ಲಿಪ್ ಕಾರ್ಟ್ ಆಫರ್
ಐಫೋನ್ 14 512GB ಸ್ಟೋರೇಜ್, 15.49 cm ಅಂದರೆ 6.1 ಇಂಚು ರೆಟಿನಾ XDR ಡಿಸ್ ಪ್ಲೇಯನ್ನು ಪಡೆದಿದೆ. ಐಫೋನ್ 14 12 MP + 12MP ಮುಂಭಾಗದ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ.
ಈ ಐಫೋನ್ 14 ನ ಆರಂಭಿಕ ಬೆಲೆ 98,999 ರೂ. ಆಗಿದೆ. ಫ್ಲಿಪ್ ಕಾರ್ಟ್ ಐಫೋನ್ 14 ಖರೀದಿಯ ಮೇಲೆ ರಿಯಾಯಿತಿ ನೀಡಿದ್ದು ನೀವು ಈ ಐಫೋನ್ ಅನ್ನು ಕೇವಲ 98,999 ರೂ. ಗೆ ಖರೀದಿಸಬಹುದಾಗಿದೆ. ಐಫೋನ್ ಖರೀದಿಯ ಮೇಲೆ 15000 ಹಣವನ್ನು ಉಳಿಸಬಹುದು.