Ads By Google

iPhone Photography: ಐಫೋನ್ ಬಳಸುವವರಿಗೆ ಸಿಗಲಿದೆ ಚಿನ್ನದ ಬಹುಮಾನ, ಇಂದೇ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಗೆಲ್ಲಿ.

iPhone Photography Award

Image Credit: indiamart

Ads By Google

iPhone Photography Award: ದೇಶದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಬಳಕೆದಾರರಿಗೆ ಹೋಲಿಸಿದರೆ ಐಫೋನ್ (iPhone) ಬಳಕೆದಾರರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ಇನ್ನು ಐಫೋನ್ ದೇಶದ ದುಬಾರಿ ಬ್ರಾಂಡ್ ಎಂದೇ ಪ್ರಸಿದ್ದಿ ಪಡೆದಿದೆ. ಇನ್ನು ಐಫೋನ್ ಪ್ರಸ್ತುತ ಆನ್ಲೈನ್ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.

ಇನ್ನು Apple ತನ್ನ ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇವೆ. ಸದ್ಯ ಐಫೋನ್ 15 ಪ್ರೊ ಬಾರಿ ವೈರಲ್ ಆಗುತ್ತಿದೆ. ಇದೀಗ ಐಫೋನ್ ಬಳಕೆದಾರರಿಗೆ ಬಂಪರ್ ಆಫರ್ ಕೇಳಿಬಂದಿದೆ. ಈ ಆಫರ್ ನ ಮೂಲಕ ನೀವು ಮತ್ತೊಂದು ಐಫೋನ್ ಅನ್ನು ಕೂಡ ಖರೀದಿಸಬಹುದಾಗಿದೆ. ನೀವು ಐಫೋನ್ ಬಳಕೆದಾರರಾಗಿದ್ದರೆ ಈ ಆಫರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Image Credit: Oodlesof

ಐಫೋನ್ ಬಳಕೆದಾರರಿಗೆ ಬಂಪರ್ ಆಫರ್
ಸಾಮಾನ್ಯವಾಗಿ ಐಫೋನ್ ಉತ್ತಮ ಗುಣಮಟ್ಟದ ಕ್ಯಾಮರಾವನ್ನು ಹೊಂದಿರುತ್ತದೆ. ಫೋಟೋ ಚಿತ್ರೀಕರಣಕ್ಕೆ ಐಫೋನ್ ನಂಬರ್ ಒನ್ ಆಗಿದೆ. ಐಫೋನ್ ಮೂಲಕ ಹೆಚ್ ಡಿ ಕ್ವಾಲಿಟಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದುದಾಗಿದೆ. ಇದೀಗ ಫೋಟೋಗ್ರಫಿ ಮೇಲೆ ಆಸಕ್ತಿ ಇರುವವರಿಗೆ ವಿಶೇಷ ಆಫರ್ ಲಭಿಸಿದೆ. ಐಫೋನ್ ಬಳಕೆದಾರರು ಈ ವಿಶೇಷ ಆಫರ್ ಅನ್ನು ಬಳಸಿಕೊಳ್ಳಬಹುದು.

ಐಫೋನ್ ಫೋಟೋಗ್ರಫಿ ಅವಾರ್ಡ್ (IPPA)
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐಫೋನ್ ಫೋಟೋಗ್ರಫಿ ಅವಾರ್ಡ್ ಸ್ಪರ್ಧೆಗೆ ಆಹ್ವಾನ ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತ ಐಫೋನ್ ಬಳಕೆದಾರರು ಭಾಗವಹಿಸಬಹುದು. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಕೆಲವು ಶರತ್ತುಗಳಿವೆ. ಷರತ್ತಿನ ಮೇಲೆ ನೀವು ಫೋಟೋಗಳನ್ನು ಕಳುಹಿಸಬೇಕಾಗುತ್ತದೆ.

Image Credit: Menosfios

ಯಾವ ಫೋಟೋಗಳು ಸ್ಪರ್ಧೆಗೆ ಅರ್ಹ
ನೀವು ಕಳುಹಿಸುವ ಫೋಟೋಗಳು ಈ ವರೆಗೂ ಎಲ್ಲಿಯೂ ಹಂಚಿಕೊಂಡಿರಬಾರದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ ತೊಂದರೆ ಇರುವುದಿಲ್ಲ. ಇನ್ನು ಫೋಟೋ ಶಾಪ್ ನಂತಹ ಯಾವುದೇ ರೀತಿಯ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಫೋಟೋವನ್ನು ಎಡಿಟ್ ಮಾಡುವಂತಿಲ್ಲ. ಬಳಕೆದಾರರು ತಮ್ಮ ಫೋಟೋಗಳನ್ನು ಐಓಎಸ್ ಆಪ್ ಗಳನು ಬಳಸಿಕೊಂಡು ಎಡಿಟ್ ಮಾಡಲು ಅವಕಾಶವಿರುತ್ತದೆ.

ಸ್ಪರ್ಧೆಯ ವಿಜೇತರಿಗೆ ನೀಡುವ ಬಹುಮಾನಗಳು
ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ ಐಪ್ಯಾಡ್ ಏರ್ (iPad Air ), ಅಗ್ರ ಮೂರು ವಿಜೇತರಾಯಿಗೆ ಆಪಲ್ ವಾಚ್, 14 ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ವಿಜೇತರಿಗೆ ಗೋಲ್ಡ್ ಬಾರ್, 14 ವಿಭಾಗದಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದ ವಿಜೇತರಿಗೆ ಖಾಸಗಿ ಚಿನ್ನದ ಮಿಂಟ್ ನಿಂದ ಪ್ಲಾಟಿನಂ ಬಾರ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ.

Image Credit: Businessinsider

ಇನ್ನು ಈ ಸ್ಪರ್ಧೆಗೆ ಮಾರ್ಚ್ 31, 2024 ಕೊನೆಯ ದಿನಾಂಕವಾಗಿದೆ. ಇನ್ನು ನೀವು ಸಬ್ಮಿಟ್ ಮಾಡುವ ಚಿತ್ರದ ಆಧಾರದ ಮೇಲೆ ಸ್ಪರ್ಧೆಗೆ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in