Pakistan iPhone: ಪಾಕಿಸ್ತಾನದಲ್ಲಿ ಐಫೋನ್ ಬೆಲೆ ಎಷ್ಟು, ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯವಂತರು.

ಭಾರತಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನದಲ್ಲಿ ಐಫೋನ್ ಬೆಲೆ ಬಹಳ ದುಬಾರಿ ಆಗಿದೆ.

iPhone 14 Pro Max: ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸ್ಮಾರ್ಟ್ ಫೋನ್ ಪ್ಲಾಟ್ ಪಾರ್ಮ್ ಗಳಲ್ಲಿ ಐಫೋನ್ (iPhone) ಕೂಡ ಒಂದಾಗಿದೆ. ಇತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಐಫೋನ್ ಬೆಲೆ ಹೆಚ್ಚಾಗಿರುತ್ತದೆ. ಆಪಲ್ ವಾರ್ಷಿಕವಾಗಿ ಹೊಸ ಐಫೋನ್ ಮಾದರಿಗಳು ಮತ್ತು iOS ನವೀಕರಣವನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.

ಈಗಾಗಲೇ ಐಫೋನ್ ಸಾಕಷ್ಟು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಪಾಕಿಸ್ತಾನದಲ್ಲಿ ಐಫೋನ್ ಗಳ ಬೆಲೆ ಭಾರತಕ್ಕಿಂತಲೂ ದುಬಾರಿಯಾಗಿದೆ. ಭಾರತ ಹಾಗೂ ಪಾಕಿಸ್ತಾನದಲ್ಲಿ ಇರುವ ಐಫೋನ್ ಬೆಲೆಗಳ ನಡುವಿನ ವ್ಯತ್ಯಾಸ ಎಷ್ಟಿದೆ ಎನ್ನುವ ಬಗ್ಗೆ ತಿಳಿಯೋಣ.

iPhone 14 Pro Max
Image Source: DNP India

ಪಾಕಿಸ್ತಾನದಲ್ಲಿ ಐಫೋನ್ ಬೆಲೆ ಎಷ್ಟು
ವಿಶ್ವದೆಲ್ಲೆಡೆ ಆಪಲ್ ಐಫೋನ್ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್  (iPhone 14 Pro Max) ನ ಬೆಲೆ ಭಾರತದ ಐಫೋನ್ ಗಿಂತ ದುಪ್ಪಟ್ಟಿವೆ. ಭಾರತದಲ್ಲಿನ SUV ಗಿಂತ ಪಾಕಿಸ್ತಾನದಲ್ಲಿ ಐಫೋನ್ 14 ನ ಬೆಲೆ ಹೆಚ್ಚಿರುತ್ತದೆ. ಪಾಕಿಸ್ತಾನದಲ್ಲಿ ಐಫೋನ್ ಪ್ರೊ ಮ್ಯಾಕ್ಸ್ ನ ಬೆಲೆ ಎಷ್ಟಿದೆ ಎನ್ನುವ ಬಗ್ಗೆ ತಿಳಿವುಕೊಳೋಣ.

iPhone 14 Pro Max
Image Source: News18

ಭಾರತ ಹಾಗೂ ಪಾಕಿಸ್ತಾನದಲ್ಲಿ ಐಫೋನ್ ಬೆಲೆ
ಪ್ರಸ್ತುತ ಭಾರತದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್ ನ ಬೆಲೆ ರೂ. 1,39,900 ರಿಂದ ಪ್ರಾರಂಭವಾಗಲಿದೆ. ಲೈನ್ ಮಾಡೆಲ್ ಟಾಪ್ ರೂ. 1,89,900 ರೂಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್ ನ ಮೇಲೆ ವಿವಿಧ ರೀತಿಯ ರಿಯಾಯಿತಿ ದೊರೆಯುತ್ತದೆ.

ಇನ್ನು ಪ್ರಸ್ತುತ ಪಾಕಿಸ್ತಾನದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್ 1TB ವೇರಿಯೆಂಟ್ ನ ಬೆಲೆ ರೂ. 7.21 ಲಕ್ಷ ರೂ. ಆಗಿದೆ. ಪಾಕಿಸ್ತಾನದ ಐಫೋನ್ ಬೆಲೆಯಲ್ಲಿ ಭಾರತದಲ್ಲಿ ರೆನಾಲ್ಟ್ ಕೈಗಾರ್ 5 -ಸಿತಾರ್ SUV ಕಾರನ್ನು ಕಾರೀದಿಸಬಹುದು. ಎಸ್ ಯುವಿ ಕಾರ್ ನ ಬೆಲೆ 6 .50 ಲಕ್ಷ ರೂ. ನಿಂದ ಪ್ರಾರಂಭವಾಗುತ್ತದೆ.

Join Nadunudi News WhatsApp Group

iPhone 14 Pro Max
Image Source: Kannada Hindusthan Times

Join Nadunudi News WhatsApp Group