iPhone: ಐಫೋನ್ ಬಳಸುವವರು ತಕ್ಷಣ ಈ ಕೆಲಸ ಮಾಡಿ, ಎಲ್ಲಾ ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಆಪಲ್.

ಐಫೋನ್ ಹೊಂದಿರುವವರಿಗೆ ಅವರಿಗೆ ಆತಂಕದ ಸುದ್ದಿ, ತಕ್ಷಣವೇ ನಿಮ್ಮ ಫೋನ್ ನಲ್ಲಿ ಈ ಕೆಲಸ ಮಾಡುದು ಉತ್ತಮ.

iPhone: ಐಫೋನ್ ಬಳಕೆದಾರರಿಗೆ ಎಚ್ಚರಿಕೆಯ ಸುದ್ದಿ ಒಂದು ಹೊರ ಬಿದ್ದಿದೆ. ಐಫೋನ್ ಗಳ ಫೀಚರ್ ಮತ್ತು ಆಫರ್ ಅನ್ನು ತಿಳಿದುಕೊಂಡು ಗ್ರಾಹಕರು ಐಫೋನ್ ಅನ್ನು ಖರೀದಿಸುತ್ತಾರೆ. ಆದರೆ ಈಗ ಐಫೋನ್ ಹೊಂದಿರುವವರಿಗೆ ಅವರಿಗೆ ಆತಂಕದ ಸುದ್ದಿ ಒಂದು ಹೊರ ಬಿದ್ದಿದೆ.

ಐಫೋನ್ ಎಂದರೆ ಅದಕ್ಕೆ ಮತ್ತೊಂದು ಪರ್ಯಾಯ ಹೆಸರು ಎಂದರೆ ಅದು ಭದ್ರತೆ. ಆದರೆ ಈ ಫೋನ್ ಗಳ ಭದ್ರತಾ ವ್ಯವಸ್ಥೆಗೂ ಸ್ಕ್ಯಾಮರ್ ಗಳು ಎಂಟ್ರಿ ಕೊಡುತ್ತಿದ್ದು, ಇದನ್ನು ಶೀಘ್ರದಲ್ಲಿಯೇ ಪತ್ತೆ ಮಾಡಿರುವ ಆಪಲ್ ತಕ್ಷಣವೇ ಐಫೋನ್ ಗಳನ್ನೂ ಅಪ್ಡೇಟ್ ಮಾಡಬೇಕು ಎಂದು ತಿಳಿಸಿದೆ. ಹಾಗಾದರೆ ಐಫೋನ್ ಗಳಲ್ಲಿ ಸಂಭವಿಸಿದ ಸಮಸ್ಯೆಗಳೇನು, ಸ್ಕ್ಯಾಮರ್ ಗಳು ಇದರಿಂದ ಹೇಗೆ ಲಾಭ ಪಡೆಯಲಿದ್ದಾರೆ ಎಂಬ ಮಾಹಿತಿ ತಿಳಿಯೋಣ.

Warning for iPhone users
Image Credit: Notebookcheck

ಐಫೋನ್ ಬಳಕೆದಾರರಿಗೆ ಎಚ್ಚರದ ಮಾಹಿತಿ
ಆಪಲ್ ಡೆವಲಪರ್ ಗಳಿಗೆ iOS 16 .6 ರ ಬೀಟಾ ಆವೃತ್ತಿಗಳನ್ನು ಹೊರತಂದಿದ್ದು, ಇದು ಬಹುಪಾಲು ಬಳಕೆದಾರರಿಗೆ ಸಂಬಂಧಿಸದಿರಬಹುದು. ಆದರೆ ಇದು ಬಳಕೆದಾರರಿಗೆ ನಿರ್ಣಾಯಕವಾಗಿದೆ. ಹಾಗೆಯೇ ಆಪಲ್ ನ ರಾಪಿಡ್ ಸೆಕ್ಯೂರಿಟಿ ರೆಸ್ಪಾನ್ಸ್ ಸಿಸ್ಟಮ್ ನ ಭಾಗವಾಗಿದ್ದು iOS 16 .5 .1 ಗಾಗಿ ಮೀಸಲಿಡಲಾಗಿದೆ. ಜೊತೆಗೆ ಈ ಅಪ್ಡೇಟ್ ಹ್ಯಾಕರ್ ಗಳಿಂದ ದುರ್ಬಳಕೆಯಾಗಬಹುದಾದ ಭದ್ರತಾ ದೋಷವನ್ನು ಸರಿಪಡಿಸುತ್ತದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಬಳಕೆದಾರರು ತಮ್ಮ ಐಫೋನ್ ಗಳನ್ನೂ ಇತ್ತೀಚಿನ ಐ ಓ ಎಸ್ ಗೆ ನವೀಕರಿಸಲು ಸಲಹೆ ನೀಡಲಾಗುತ್ತದೆ. ಆದರೆ ಈ ರಾಪಿಡ್ ಸೆಕ್ಯೂರಿಟಿ ರೆಸ್ಪಾನ್ಸ್ಪ್‌ ಅಪ್ಡೇಟ್ ವಿಚಾರಕ್ಕೆ ಬಂದಾಗ ಮಾತ್ರ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ತಕ್ಷಣವೇ ಅಪ್‌ಡೇಟ್‌ ಮಾಡಬೇಕಿದೆ. ಯಾಕೆಂದರೆ ಹ್ಯಾಕರ್‌ಗಳು ಮತ್ತು ದುರುದ್ದೇಶ ಹೊಂದಿರುವವರು ಬಳಕೆದಾರರ ವೈಯಕ್ತಿಕ ಡೇಟಾ ವಿಭಾಗಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಟ್ಟು ಬಿಡುತ್ತಾರೆ.

Warning for iPhone users
Image Credit: Digitalspy

ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್
ಈ ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ ಸಂಪೂರ್ಣ ಸಾಫ್ಟ್‌ವೇರ್ ಅಪ್ಡೇಟ್ ಅಗತ್ಯವಿಲ್ಲದೇ ಬಳಕೆದಾರರಿಗೆ ಭದ್ರತಾ ಪರಿಹಾರಗಳನ್ನಷ್ಟೇ ನೀಡಲು ಕೇಂದ್ರೀಕರಿಸುತ್ತದೆ. ಇದು ಕೇವಲ ಅಪ್ಡೇಟ್‌ ಮಾತ್ರ ಅಗಿರಲಿದ್ದು, ಬದಲಾಗಿ ಇದು ಅಪ್‌ ಗ್ರೇಡ್‌ ಆಗಿರುವುದಿಲ್ಲ. ಇದರೊಂದಿಗೆ ರಾಪಿಡ್ ಸೆಕ್ಯುರಿಟಿ ರೆಸ್ಪಾನ್ಸ್ ಪ್ರತಿಕ್ರಿಯೆಗಳಿಗೆ ಡಿವೈಸ್‌ಗಳನ್ನು ರೀಸ್ಟಾರ್ಟ್‌ ಮಾಡಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group