iPhone Defects: ಐಫೋನ್ ಬಳಸುವವರಿಗೆ ಬೇಸರದ ಸುದ್ದಿ, ಸಮೀಕ್ಷೆ ಪ್ರಕಾರ ಈ ಐಫೋನ್ ಹೆಚ್ಚು ದುರ್ಬಲ.
ಇದೀಗ ಕೇಂದ್ರ ಸರ್ಕಾರ iPhone ಖರೀದಿಸುವವರಿಗೆ ಹಾಗೂ ಈಗಾಗಲೇ iPhone ಹೊಂದಿರುವವರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ.
iPhone Vulnerability: ಸದ್ಯ ಮಾರುಕಟ್ಟೆಯಲ್ಲಿ Apple iPhone ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಜನರು ಹೆಚ್ಚಾಗಿ iPhone ಗಳನ್ನು ಖರೀದಿಸಲು ಬಯಸುತ್ತಾರೆ.
ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ iPhone 15 ಲಾಂಚ್ ಆಗಿದ್ದು, ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ. ಜನರು iPhone 15 ಮಾದರಿಯನ್ನು ಖರೀದಿಸಲು ಇಷ್ಟಪಡುತ್ತಿದ್ದಾರೆ. ಸದ್ಯ iPhone ಹೊಂದಿರುವವರಿಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ.
iPhone ಬಳಕೆದಾರರಿಗೆ ಮಹತ್ವದ ಮಾಹಿತಿ
ಇನ್ನು iPhone ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು iPhone ಖರೀದಿಗೆ ಬಂಪರ್ ರಿಯಾಯಿತಿಯನ್ನು ಘೋಷಿಸುತ್ತಿದೆ. ಈ ಕಾರಣಕ್ಕೆ ಜನರು iPhone ಮಾದರಿಯನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ iPhone ಖರೀದಿಸುವವರಿಗೆ ಹಾಗೂ ಈಗಾಗಲೇ iPhone ಮಾದರಿಯನ್ನು ಹೊಂದಿರುವವರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ನೀವು iPhone ಖರೀದಿಯ ಬಗ್ಗೆ ಯೋಜನೆ ಮಾಡಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
iPhone ಮಾದರಿಯಲ್ಲಿ ಹೆಚ್ಚುತ್ತಿದೆ ದುರ್ಬಲತೆ
ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಆಪಲ್ ಉತ್ಪನ್ನಗಳಲ್ಲಿನ ಹೆಚ್ಚುತ್ತಿರುವ ದೋಷಗಳ ವಿರುದ್ಧ ಎಚ್ಚರಿಕೆ ನೀಡಿದೆ. ಕೇಂದ್ರವು ಆಪಲ್ ಬಳಕೆದಾರರಿಗೆ ‘ಹೆಚ್ಚಿನ ತೀವ್ರತೆಯ’ ಎಚ್ಚರಿಕೆಯನ್ನು ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್, ಆಕ್ರಮಣಕಾರರಿಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು, ಸವಲತ್ತುಗಳನ್ನು ಹೆಚ್ಚಿಸಲು ಅಥವಾ ಗುರಿ ವ್ಯವಸ್ಥೆಯಲ್ಲಿ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಅನುಮತಿಸುವ ಬಹು ದುರ್ಬಲತೆಗಳ ವಿರುದ್ಧ ಎಚ್ಚರಿಕೆ ನೀಡಿದೆ.
ಸೆಕ್ಯುರಿಟಿ ಕಾಂಪೊನೆಂಟ್ ನಲ್ಲಿನ ಪ್ರಮಾಣಪತ್ರ ಊರ್ಜಿತಗೊಳಿಸುವಿಕೆಯ ಸಮಸ್ಯೆ, ಕರ್ನಲ್ ನಲ್ಲಿನ ಸಮಸ್ಯೆ ಮತ್ತು ವೆಬ್ ಕಿಟ್ ಘಟಕದಲ್ಲಿನ ದೋಷದಿಂದಾಗಿ ಆಪಲ್ ಉತ್ಪನ್ನಗಳಲ್ಲಿ ಈ ದೋಷಗಳು ಅಸ್ತಿತ್ವದಲ್ಲಿವೆ. ವಿಶೇಷವಾಗಿ ರಚಿಸಲಾದ ವಿನಂತಿಯನ್ನು ಕಳುಹಿಸುವ ಮೂಲಕ ಆಕ್ರಮಣಕಾರರು ಈ ದುರ್ಬಲತೆಗಳನ್ನು ಬಳಸಿಕೊಳ್ಳಬಹುದು ಎಂದು CERT-IN ಹೇಳಿಕೆ ತಿಳಿಸಿದೆ.
ಈ ಎಲ್ಲಾ ಮಾದರಿಯಲ್ಲಿ ದೋಷಗಳನ್ನು ಕಾಣಬಹುದಾಗಿದೆ.
1. Apple macOS ಮಾನಿಟರಿ ಆವೃತ್ತಿಗಳು 12.7 ಕ್ಕಿಂತ ಮೊದಲು.
2. Apple macOS ವೆಂಚುರಾ ಆವೃತ್ತಿಗಳು 13.6 ಕ್ಕಿಂತ ಮೊದಲು.
3. 9.6.3 ಗೆ ಮುಂಚಿನ Apple watchOS ಆವೃತ್ತಿಗಳು.
4. 10.0.1 ಕ್ಕಿಂತ ಮುಂಚಿನ Apple watchOS ಆವೃತ್ತಿಗಳು.
5. 16.7 ರ ಹಿಂದಿನ Apple iOS ಆವೃತ್ತಿಗಳು ಮತ್ತು 16.7 ರ ಹಿಂದಿನ iPadOS ಆವೃತ್ತಿಗಳು.
6. 17.0.1 ರ ಹಿಂದಿನ Apple iOS ಆವೃತ್ತಿಗಳು ಮತ್ತು 17.0.1 ರ ಹಿಂದಿನ iPadOS ಆವೃತ್ತಿಗಳು.
7. ಆಪಲ್ ಸಫಾರಿ 16.6.1 ರ ಮೊದಲಿನ ಆವೃತ್ತಿ.