iPhone Setting: ಐಫೋನ್‌ ಬಳಸುವವರೇ ತಕ್ಷಣ ಈ ಎರಡು ಸೆಟ್ಟಿಂಗ್ ಆಫ್ ಮಾಡಿ, ಇಲ್ಲವಾದರೆ ಆಪಾಯ ಕಟ್ಟಿಟ್ಟ ಬುತ್ತಿ

ಐಫೋನ್ ಬಳಸುವವರಿಗೆ ತಕ್ಷಣ ಈ ಸೆಟ್ಟಿಂಗ್ ಆಫ್ ಮಾಡಿ, ಇಲ್ಲವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ

iPhone Setting Update: ಇತೀಚಿನ ದಿನಗಳಲ್ಲಿ ಫೋನ್ ಬಳಕೆ ಮಾಡದೇ ಇರುವವರ ಸಂಖ್ಯೆ ಬಹಳ ಕಡಿಮೆ ಮತ್ತು ಎಲ್ಲರ ಬಳಿ ಫೋನ್ ಇರುವುದು ಸಹಜ. ಇಂದಿನ ಸ್ಮಾರ್ಟ್ ಫೋನ್ ಅಥವಾ ಐಫೋನ್ ಯಾವುದೇ ಆಗಿರಲಿ ಅವುಗಳಲ್ಲಿ ಬಳಸುವವರ ಹಲವು ವೈಯಕ್ತಿಕ ಮಾಹಿತಿ ಅಡಕವಾಗಿರುತ್ತದೆ. ಇವುಗಳನ್ನು ನಾವು ತುಂಬ ಸೇಫ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಅದರಲ್ಲಿ ಈಗ ಐಫೋನ್ (iPhone) ಅನ್ನು ಬಳಸುತ್ತಿದ್ದರೆ, ನಿಮ್ಮ ಫೋನ್‌ನಲ್ಲಿ ಕೆಲವು ಸೆಟ್ಟಿಂಗ್‌ ಗಳಿವೆ, ಅದನ್ನು ನೀವು ಇಂದೇ ಆಫ್ ಮಾಡಬೇಕು, ಇಲ್ಲಾ ಅಂತಾದರೆ ಈ ಸೆಟ್ಟಿಂಗ್‌ಗಳು ನಮ್ಮನ್ನು ಭವಿಷ್ಯದಲ್ಲಿ ತೊಂದರೆಗೆ ಸಿಲುಕಿಸಬಹುದು. ಹಾಗಾಗಿ ಐಫೋನ್‌ನಲ್ಲಿ ಆಫ್ ಮಾಡಬೇಕಾದ ಸೆಟ್ಟಿಂಗ್‌ಗಳು ಯಾವುವು ಎಂಬುದನ್ನು ತತಿಳಿಯೋಣ.

Apple iPhone 16 Feature
Image Credit: Hindustantimes

ಐಫೋನ್ ಬಳಸುವವರು ನಿಮ್ಮ ಫೋನ್ ನಲ್ಲಿರುವ ಈ ಆಯ್ಕೆಯನ್ನು ಆಪ್ ಮಾಡಿ

ಐಫೋನ್‌ನ ಬಳಕೆದಾರರು ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ ಅಲ್ಲಿ ಹಾಟ್‌ ಸ್ಪಾಟ್ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ಆಟೋ ಜಾಯಿನ್ ಹಾಟ್‌ಸ್ಪಾಟ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಈಗ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಮೊದಲ ಆಯ್ಕೆ ನೆವರ್, ಎರಡನೆಯ ಆಯ್ಕೆ ಆಸ್ಕ್ ಟು ಜಾಯ್ನ್ ಮತ್ತು ಮೂರನೇ ಆಯ್ಕೆ ಸ್ವಯಂಚಾಲಿತವಾಗಿರುತ್ತದೆ. ನೀವು ಮೊದಲ ಆಯ್ಕೆಯನ್ನು ನೆವರ್ ಆರಿಸಿಕೊಳ್ಳಬೇಕು .

iPhone 15 Flipkart Offer
Image Credit: Macworld

ಅನಗತ್ಯ ಜಾಹೀರಾತುಗಳ ಆಯ್ಕೆಯನ್ನು ಆಫ್ ಮಾಡಬೇಕು

Join Nadunudi News WhatsApp Group

ಸಫಾರಿ ಬ್ರೌಸರ್ ಅನ್ನು ಬಳಸುತ್ತಿದ್ದರೆ, ಇದರಲ್ಲಿ ಅನಗತ್ಯ ಜಾಹೀರಾತುಗಳನ್ನು ನೋಡಿದರೆ ಸೆಟ್ಟಿಂಗ್‌ ಗಳಲ್ಲಿ ನೀವು ಈ ಆಯ್ಕೆಯನ್ನು ಆಫ್ ಮಾಡಬೇಕು. ಐಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಕೆಳಗೆ ಸ್ಕ್ರಾಲ್ ಮಾಡಿ. ಇಲ್ಲಿ ನೀವು ಸಫಾರಿ ಬ್ರೌಸರ್ ಇರುತ್ತದೆ. ಈ ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಮತ್ತೊಮ್ಮೆ ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ. ಕೆಳಭಾಗದಲ್ಲಿ ನೀವು ಅಡ್ವಾನ್ಸ್ ಆಯ್ಕೆಯನ್ನು ನೋಡುತ್ತೀರಿ. ಈ ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಗೌಪ್ಯತೆ ಆಯ್ಕೆಯಲ್ಲಿ ಗೌಪ್ಯತೆಯನ್ನು ಕಾಪಾಡುವ ಜಾಹೀರಾತನ್ನು ಆಫ್ ಮಾಡಬೇಕು. ಈ ಎಲ್ಲಾ ಸೆಟ್ಟಿಂಗ್ ಗಳು ಯಾವಾಗಲು ಆಫ್ ನಲ್ಲಿದ್ದರೆ ನಿಮ್ಮ ಫೋನ್ ಸೇಫ್ ನಲ್ಲಿ ಇದ್ದ ಹಾಗೆ ಎನ್ನಬಹುದು.

Join Nadunudi News WhatsApp Group