UPI Payment: ಈಗ ಪಿನ್ ಇಲ್ಲದೆ UPI ಮೂಲಕ ಹಣವನ್ನ ವರ್ಗಾವಣೆ ಮಾಡಬಹುದು, UPI ಬಳಕೆದಾರರಿಗಾಗಿ.

UPI ನಲ್ಲಿ ಯಾವುದೇ ಪಿನ್ ನಮೂದಿಸದೆ ಈಗ ಹಣವನ್ನ ವರ್ಗಾವಣೆ ಮಾಡಬಹುದು.

UPI Payment Latest: ಇದೀಗ ಆನ್ ಲೈನ್ ಪೇಮೆಂಟ್ ಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಸಾಮಾನ್ಯವಾಗಿ ನೀವು ಯಾವುದೇ ಪೇಮೆಂಟ್ ಮಾಡಲು ಮೊತ್ತದ ನಂತರ ನಿಮ್ಮ ಪಾಸ್ ವರ್ಡ್ ಅಥವಾ ಪಿನ್ ಹಾಕುವುದು ಅನಿವಾರ್ಯವಾಗಿದೆ. ಆದರೆ ಈಗ ನೀವು ಪಿನ್ ಬಳಸದೆ ಸಹ ಪೇಮೆಂಟ್ ಅನ್ನು ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Money can now be transferred without entering any PIN in UPI.
Image Credit: businesstoday

ಆನ್ ಲೈನ್ ಪೇಮೆಂಟ್ ಮಾಡುವವರಿಗೆ ಹೊಸ ಮಾಹಿತಿ
ನೀವು ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಗಳನ್ನೂ ಬಳಸಿ ಯಾವುದೇ ಪಿನ್ ಅಥವಾ ಪಾಸ್ ವರ್ಡ್ ಇಲ್ಲದೆಯೇ ಪೇಮೆಂಟ್ ಮಾಡಬಹುದು. ಆದರೆ ಹೀಗೆ ಮಾಡುವುದು ಸರಿ ಅಲ್ಲ ಎಂಬುದು ಜನರ ಅಭಿಪ್ರಾಯ.

ಒಂದು ವೇಳೆ ಕೆಲವು ಸಂದರ್ಭದಲ್ಲಿ ನಿಮ್ಮ ಫೋನ್ ಬೇರೆ ಅವರ ಕೈಗೆ ಸಿಕ್ಕಿದರೆ ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡುವುದು ಸುಲಭದ ಕೆಲಸವಾಗಿದೆ. ಆದರೂ ಸಹ ಸರ್ಕಾರ UPI LITE ಎನ್ನುವ ಹೊಸ ಸೇವೆಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ.

UPI ಪಿನ್ ಇಲ್ಲದೆ ಹಣ ವರ್ಗಾವಣೆ ಮಾಡುವುದು ಹೇಗೆ
UPI ಲೈಟ್ ಅನ್ನುವುದು ಆನ್ ಡಿವೈಸ್ ವ್ಯಾಲೆಟ್ನಂತೆ ಕಾರ್ಯನಿರ್ವಹಿಸುತ್ತದೆ. ನೀವು ಇದರಲ್ಲಿ 2000 ರೂಪಾಯಿಗಳವರೆಗೆ ಹಣವನ್ನು ಕಳುಹಿಸಬಹುದು.

Money can be transferred through UPI Lite without entering PIN.
Image Credit: mindgate.solutions

Paytm ತನ್ನ ಅಪ್ಲಿಕೇಶನ್ ನಲ್ಲಿ UPI ಲೈಟ್ ಅನ್ನು ಪರಿಚಯಿಸಿ ಮೊದಲ ಪಾವತಿ ಬ್ಯಾಂಕ್ ಆಗಿದೆ. ios ಬಳಕೆದಾರರು ಈಗ UPI ಲೈಟ್ ಅನ್ನು ಸಹ ಬಳಸಬಹುದು. UPI ಲೈಟ್ ಸಕ್ರಿಯ ಅಥವಾ ಸೆಟಪ್ ಆದ ನಂತರ ಬಳಕೆದಾರರು PIN ಲೈಟ್ ಅನ್ನು ಸಹ ಬಳಸಬಹುದು.

Join Nadunudi News WhatsApp Group

UPI ಲೈಟ್ ಸಕ್ರಿಯ ಅಥವಾ ಸೆಟಪ್ ಆದ ನಂತರ ಬಳಕೆದಾರರು PIN ಇಲ್ಲದೆಯೇ ರೂಪಾಯಿ 2000 ರವರೆಗಿನ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. UPI ಲೈಟ್ ಅನ್ನು ಬಳಸಿಕೊಂಡು ದಿನಕ್ಕೆ ಎರಡು ಬಾರಿ ರೂಪಾಯಿ 2000 ಹಣವನ್ನು ಕಳುಹಿಸಬಹುದು.

Join Nadunudi News WhatsApp Group