Ads By Google

IPL Toss Coin: IPL ಟಾಸ್ ಸಮಯದಲ್ಲಿ ಬಳಸುವ ನಾಣ್ಯದ ಬೆಲೆ ಎಷ್ಟು ಗೊತ್ತಾ…? ಇದು ದುಬಾರಿ ನಾಣ್ಯ

IPL Toss Coin Details

Image Credit: Original Source

Ads By Google

IPL Toss Coin 2024: ಸದ್ಯ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ ನ 17 ನೇ ಆವೃತ್ತಿ ನೆಡೆಯುತ್ತಿದೆ. ಮೇ 26 ರಂದು IPL ನ ಫೈನಲ್ ಪಂದ್ಯ ನೆಡೆಯುತ್ತದೆ. ಈ ಬಾರಿ ಯಾವ ತಂಡ IPL ಕಪ್ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ. ಇನ್ನು ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆ ನಡೆಸಲಾಗುತ್ತದೆ.

ನಾಣ್ಯವನ್ನು ಚಿಮ್ಮಿಸುವ ಮೂಲಕ ಟಾಸ್ ಪ್ರಕ್ರಿಯೆ ನಡೆಸಲಾಗುತ್ತದೆ. ಟಾಸ್‌ ಗೆಲ್ಲುವ ತಂಡವು ತನ್ನ ಇಷ್ಟದಂತೆ ಬ್ಯಾಟಿಂಗ್ ಅಥವಾ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇದೀಗ ನಾವು ಟಾಸ್ ಸಮಯದಲ್ಲಿ ಬಳಸುವ ನಾಣ್ಯದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Image Credit: Outlookindia

ಟಾಸ್ ಸಮಯದಲ್ಲಿ ಬಳಸುವ ನಾಣ್ಯವನ್ನು ಯಾವ ಲೋಹದಿಂದ ಮಾಡಲಾಗುತ್ತದೆ…?
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ಟಾಸ್‌ ಪ್ರಕ್ರಿಯೆ ವೇಳೆ ನಾಣ್ಯವನ್ನು ಹತ್ತಿರದಿಂದ ಜೂಮ್‌ ಮಾಡಿ ತೋರಿಸುತ್ತಾರೆ. ಆಗ ನೀವು ಆ ನಾಣ್ಯವನ್ನು ನೋಡಿರಬಹುದು. ಆ ನಾಣ್ಯದ ಮೇಲೆ IPL ಲೋಗೋ ಇರುವುದನ್ನು ನೀವು ನೋಡಿರಬಹುದು. IPL ಟಾಸ್‌ಗೆ ಬಳಸುವ ನಾಣ್ಯವನ್ನು ಮುಖ್ಯವಾಗಿ ಚಿನ್ನದಿಂದ ಮಾಡಲಾಗಿದೆ.

ಇದನ್ನು ಪಂದ್ಯಾವಳಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಅಂದರೆ ಬೇರೆ ಯಾವುದೇ ಟೂರ್ನಿಗೂ ಈ ನಾಣ್ಯಗಳನ್ನು ಬಳಸಲಾಗುವುದಿಲ್ಲ. 2023 ರಲ್ಲಿ ನಡೆದ IPL 16 ನೇ ಸೀಸನ್‌ನಲ್ಲಿ ಬಳಸಲಾದ ನಾಣ್ಯದ ತೂಕ 16 ಗ್ರಾಂ ಇದೆ. ಈ ಬಾರಿಯ ಟೂರ್ನಿಯ ಕಾಯಿನ್‌ ತೂಕ ಬಹಿರಂಗಗೊಂಡಿಲ್ಲ. ಆದರೆ ಬಹುತೇಕ ಇದೇ ತೂಕ ಇರುವ ಸಾಧ್ಯತೆ ಇದೆ. ಒಂದು ನಾಣ್ಯವನ್ನು ವಿನ್ಯಾಸಗೊಳಿಸಲು 4000 ರೂಪಾಯಿವರೆಗೆ ವೆಚ್ಚವಾಗುತ್ತದೆ.

IPL ಪಂದ್ಯಾವಳಿಯನ್ನು ನಡೆಸುವ BCCI ಈ ಕಾಯಿನ್ ತಯಾರಿಸುತ್ತದೆ. IPL ಪಂದ್ಯಾವಳಿಯನ್ನು ನಡೆಸುವ BCCI, ಈ ಕಾಯಿನ್ ತಯಾರಿಸುತ್ತದೆ. ಪಂದ್ಯಾವಳಿಗಾಗಿ ಸುಮಾರು 20 ರಿಂದ 25 ಟಾಸ್‌ ನಾಣ್ಯಗಳನ್ನು ತಯಾರಿಸಲಾಗುತ್ತದೆ. ಪಂದ್ಯಗಳು ನಡೆಯುವ ಪ್ರತಿ ಮೈದಾನಕ್ಕೂ ತಲಾ 2 ನಾಣ್ಯಗಳನ್ನು ನೀಡಲಾಗುತ್ತದೆ. ಉಳಿದವುಗಳನ್ನು ಬ್ಯಾಕಪ್ ನಾಣ್ಯಗಳಾಗಿ ಇಟ್ಟುಕೊಳ್ಳುತ್ತದೆ.

ಈ ನಾಣ್ಯದ ಒಂದು ಬದಿಯಲ್ಲಿ H ಹಾಗೂ ಇನ್ನೊಂದು ಬದಿಯಲ್ಲಿ T ಎಂದು ಬರೆಯಲಾಗಿದೆ. ಅಂದರೆ ಹೆಡ್ಸ್ ಮತ್ತು ಟೇಲ್ಸ್ ಎಂದರ್ಥ. ಇದರೊಂದಿಗೆ IPL ಪ್ರಾಯೋಜಕರ ಹೆಸರನ್ನು ಒಂದು ಬದಿಯಲ್ಲಿ ಹಾಗೆ ಪಂದ್ಯಾವಳಿಯ ವರ್ಷವನ್ನು ಮತ್ತೊಂದು ಬದಿಯಲ್ಲಿ ಬರೆಯಲಾಗುತ್ತದೆ. IPL ಮುಗಿದ ನಂತರ ನಾಣ್ಯಗಳನ್ನು BCCI ಇಟ್ಟುಕೊಳ್ಳುತ್ತದೆ. ಕಾಲಕಾಲಕ್ಕೆ ಅದನ್ನು ಹರಾಜಿನ ಮೂಲಕ ಮಾರಾಟ ಮಾಡುತ್ತದೆ.

Image Credit: Medium
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field