iQOO 15 vs OnePlus 15 Comparison: ಇದೀಗ ನೀವು ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯುನ್ನತ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ನ ಅತ್ಯಾಧುನಿಕ ಮತ್ತು ಪ್ರೀಮಿಯಂ ಮಾದರಿ ಫೋನ್ ಖರೀದಿಸಬೇಕು ಅಂದುಕೊಂಡಿದ್ದರೆ ನಿಮಗೆ ಒಂದೊಳ್ಳೆ ಅವಕಾಶ. ಮೊಬೈಲ್ ಖರೀದಿಸುವ ಯೋಜನೆ ಹಾಕಿಸಿಕೊಂಡಿದ್ದರೆ iQOO 15 ಮತ್ತು OnePlus 15 ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಬಹಳ ಅಗತ್ಯ. ಇವೆರಡನ್ನೂ ಹೋಲಿಕೆ ಮಾಡಿ ನಿಮಗೆ ಯಾವುದು ಉತ್ತಮ ಅನಿಸುತ್ತದೆ ಅದನ್ನು ಖರೀದಿ ಮಾಡಬಹುದಾಗಿದೆ.
iQOO 15 ಮತ್ತು OnePlus 15 ಡಿಸ್ಪ್ಲೇ
* iQOO 15, 6.85-ಇಂಚು 2K LTPO AMOLED ಸ್ಕ್ರೀನ್ ಅನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್, 2600 ನಿಟ್‌ಗಳ HBM ಬ್ರೈಟ್ ನೆಸ್ ಮತ್ತು 6000 ನಿಟ್‌ಗಳ ಪೀಕ್ ಬ್ರೈಟ್ ನೆಸ್ ನೀಡುತ್ತದೆ. 3D ಆಲ್ಟ್ರಾ ಸೌಂಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿದ್ದು ಗೇಮಿಂಗ್ ಮತ್ತು ಔಟ್ ಡೋರ್ ಬಳಕೆಗೆ ಸೂಕ್ತವಾಗಿದೆ.
* OnePlus 15 ನಲ್ಲಿ 6.78-ಇಂಚು QHD+ AMOLED ಡಿಸ್ಪ್ಲೇ ಅನ್ನು ಅಳವಡಿಸಲಾಗಿದೆ. 165Hz ರಿಫ್ರೆಶ್ ರೇಟ್ ನೊಂದಿಗೆ Sunlight Display Enhancement ಮತ್ತು 1800 ನಿಟ್‌ಗಳ Peak Britannia ಹೊಂದಿದೆ.
iQOO 15 ಮತ್ತು OnePlus 15 ಕಾರ್ಯಕ್ಷಮತೆ
ಎರಡು ಫೋನ್ ಗಳು snapdragon elite 8 gen 5 ಚಿಪ್ ಸೆಟ್ ನೊಂದಿಗೆ ಬರುತ್ತದೆ. iQOO 15 ಯಲ್ಲಿ Q3 Supercomputing chip ಮತ್ತು 8000 sq mm 8K ವೇಪರ್ ಚೇಂಬರ್ ಕೂಲಿಂಗ್ ಇದ್ದು, ದೀರ್ಘಕಾಲದ ಗೇಮಿಂಗ್ ನಲ್ಲಿ Thermal throttling ತಡೆಯುತ್ತದೆ. ಗೇಮರ್ ಆಗಿದ್ದರೆ iQOO ಉತ್ತಮ, ಆದರೆ ಡೈಲಿ ಯೂಸ್ ಗೆ OnePlus ಸ್ಮುತ್ ಆಗಿದೆ. Hexagon NPU ಯೊಂದಿಗೆ 46 % AI ಬೂಸ್ಟ್ ಎರಡಲ್ಲೂ ಇದೆ, Multi modal AI ಮಾಡೆಲ್ ಗಳಿಗೆ ಸಪೋರ್ಟ್ ಮಾಡುತ್ತದೆ.
iQOO 15 ಮತ್ತು OnePlus 15 ಕ್ಯಾಮೆರಾ ಕ್ವಾಲೀಟಿ
ಕ್ಯಾಮರಾ ವಿಭಾಗದಲ್ಲಿ ಎರಡೂ 50MP ಟ್ರಿಪಲ್ ಸೆಟಪ್ ನೀಡುತ್ತವೆ, ಆದರೆ ಸೆನ್ಸಾರ್ ಗಳು ಭಿನ್ನವಾಗಿದೆ. iQOO 15 ಯಲ್ಲಿ Sony IMX921 Main sensor, 50MP Sony IMX882 Periscope Telephoto ಮತ್ತು 50MP ಅಲ್ಟ್ರಾ ವೈಡ್ ಇದ್ದು, Spectra AI ISP ಯೊಂದಿಗೆ AI Visual editing, Reflection Eraser ಮತ್ತು 8K@30fps ವೀಡಿಯೋ ಸಪೋರ್ಟ್. 32MP ಫ್ರಂಟ್ ಕ್ಯಾಮರಾ AI Beauty feature ಗಳೊಂದಿಗೆ ಉತ್ತಮ ಸೆಲ್ಫೀ ಗಳನ್ನು ನೀಡುತ್ತದೆ. ಇನ್ನು OnePlus 15 ನಲ್ಲಿ Sony IMX906 ಮೇನ್, Samsung JN5 ಟೆಲಿಫೋಟೊ ಮತ್ತು OV50D Ultrawide ಸೇರಿದೆ. 32MP ಫ್ರಂಟ್ ಕ್ಯಾಮರಾ HDR ಮತ್ತು AI Enhancement ಹೊಂದಿದೆ. ಫೋಟೋಗ್ರಾಫರ್ ಆಗಿದ್ದರೆ OnePlus ಝೂಮ್ ಮತ್ತು ವೀಡಿಯೋ ಕ್ವಾಲಿಟಿಯಲ್ಲಿ ಮುಂದೆ, ಹಾಗೆ iQOO AI ಎಡಿಟಿಂಗ್ ನಲ್ಲಿ ಮುಂದೆ ಇದೆ.
iQOO 15 ಮತ್ತು OnePlus 15 ಬ್ಯಾಟರಿ ಕೆಪ್ಯಾಸಿಟಿ
ಬ್ಯಾಟರಿ ವಿಭಾಗದಲ್ಲಿ OnePlus 15 ಉತ್ತಮವಾಗಿದೆ. 7300mAh ಸಾಮರ್ಥ್ಯದೊಂದಿಗೆ 120W ಸೂಪರ್ ಫ್ಲ್ಯಾಷ್ ಚಾರ್ಜ್ (39 ನಿಮಿಷಗಳಲ್ಲಿ ಫುಲ್) ಮತ್ತು 50W ವೈರ್ ಲೆಸ್ ಚಾರ್ಜ್ ನೀಡುತ್ತದೆ, 1.5 ಗಂಟೆಗಳಷ್ಟು ಹೆಚ್ಚು ಪ್ಲೇ ಟೈಮ್. ಇನ್ನು iQOO 15 ನಲ್ಲಿ 7000mAh Silicon carbon battery ಇದ್ದು, 100W ವೈರ್ಡ್ (40 ನಿಮಿಷಗಳಲ್ಲಿ ಫುಲ್) ಮತ್ತು 40W ವೈರ್ ಲೆಸ್ ಸಪೋರ್ಟ್ ಮಾಡುತ್ತದೆ. 1 ಗಂಟೆ 48 ನಿಮಿಷಗಳ ಹೆಚ್ಚು ಗೇಮಿಂಗ್ ಟೈಮ್ ಇರುತ್ತದೆ. ಎರಡು ಫೋನ್ ಗಳು Android 16 ಮೇಲೆ ರನ್ ಆಗುತ್ತವೆ. iQOO OriginOS 6 / Funtouch OS 15 ನೊಂದಿಗೆ 5 OS ಅಪ್‌ಗ್ರೇಡ್ ಗಳು ಮತ್ತು 7 ವರ್ಷಗಳ ಸುರಕ್ಷತೆ, OnePlus OxygenOS 16 ನೊಂದಿಗೆ 4 OS ಮತ್ತು 6 ವರ್ಷಗಳ ಸುರಕ್ಷತೆ.
iQOO 15 ಮತ್ತು OnePlus 15 ಮೊಬೈಲ್ ಬೆಲೆ
ಭಾರತದಲ್ಲಿ iQOO 15 ಬೆಲೆ 12GB RAM / 256GB ಗೆ 72,999 ಆರಂಭಿಕ ಬೆಲೆ ಆಗಿದೆ. 7,000 ಬ್ಯಾಂಕ್ ಡಿಸ್ಕೌಂಟ್ ನೊಂದಿಗೆ 65,999 ಕ್ಕೆ ಖರೀದಿ ಮಾಡಬಹುದಾಗಿದೆ. ಮತ್ತು 16GB RAM / 512GB ಗೆ 79,999 ರೂ. ಆಗಿದೆ. ಇನ್ನು OnePlus 15 ಸ್ಮಾರ್ಟ್ ಫೋನ್ 12GB RAM /256GB ಗೆ 72,999 ಆಗಿದೆ, 4,000 ಡಿಸ್ಕೌಂಟ್ ನೊಂದಿಗೆ 68,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. 16GB RAM /512GB ಗೆ 79,999 ರೂ. ಆಗಿದೆ. ಈ ಎರಡು ಫೋನ್ ಗಳು Amazon, ಅಧಿಕೃತ ಸೈಟ್ ಗಳು ಮತ್ತು ಆಫ್ ಲೈನ್ ಸ್ಟೋರ್ ಗಳಲ್ಲಿ ಡಿಸೆಂಬರ್ 1 ರಿಂದ ಮಾರಾಟ ಆರಂಭವಾಗುತ್ತದೆ. iQOO ಗೇಮಿಂಗ್ ಮತ್ತು ಬ್ರೈಟ್ ಡಿಸ್ಪ್ಲೇ ಗೆ ಮತ್ತು OnePlus ಬ್ಯಾಟರಿ ಮತ್ತು ವೀಡಿಯೋ ಗೆ ಉತ್ತಮವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

