Charging Mobile: 10 ನಿಮಿಷದಲ್ಲಿ 50% ಚಾರ್ಜ್ ಆಗುವ ಈ ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು, ಅಗ್ಗದ ಮೊಬೈಲ್.
5000 mAh ಬ್ಯಾಟರಿ ಸಾಮರ್ಥ್ಯ ಇರುವ ಈ ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು.
Fast Charging Mobile: ಹೊಸ Smartphone ಖರೀದಿ ಮಾಡಲು ಎಲ್ಲರು ಇಷ್ಟಪಡುತ್ತಾರೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿದೆ.
ದೇಶದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರ ಆಯ್ಕೆಗೆ ನೀಡುತ್ತಿದೆ. ಇನ್ನು IQOO ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಇದೀಗ ಕಂಪನಿಯು ಈ ಮಾದರಿಯ ಸ್ಮಾರ್ಟ್ ಫೋನ್ ಖರೀದಿಗೆ ಉತ್ತಮ ಅವಕಾಶ ನೀಡಿದೆ.
IQOO Neo 7 Smartphone
ಐಕ್ಯೂ ನಿಯೋ 7 ಕಳೆದ ವರ್ಷ ಬಿಡುಗಡೆಯಾಗಿ ಸದ್ದು ಮಾಡಿತ್ತು. ಐಕ್ಯೂ ನಿಯೋ 7 ಸ್ಮಾರ್ಟ್ ಫೋನ್ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. 8GB RAM + 128 GB ಸ್ಟೋರೇಜ್ ಆಯ್ಕೆಗೆ 29,999 ರೂಪಾಯಿ ನಿಗದಿ ಮಾಡಲಾಗಿದೆ. ಇದರ 128 GB RAM + 256 GB ವೆರಿಯಂಟ್ ಗೆ 33,999 ರೂಪಾಯಿ ಆಗಿದೆ. ಇದು ಫಿಯರ್ ಲೆಸ್ ಫ್ಲೇಮ್ ಮತ್ತು ಡಾರ್ಕ್ ಸ್ಟೋರ್ಮ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
IQOO Smartphone ಖರೀದಿಗೆ ಭರ್ಜರಿ ಆಫರ್
ಇದೀಗ ಕಂಪನಿಯು ಈ IQOO Neo 7 Smartphone ಬೆಲೆಯಲ್ಲಿ ಇಳಿಕೆ ಮಾಡಿದೆ. 8GB RAM + 128 GB ಸ್ಟೋರೇಜ್ ಆಯ್ಕೆಗೆ 27,999 ರೂ. ಹಾಗೂ 128 GB RAM + 256 GB ವೆರಿಯಂಟ್ ಗೆ 31,999 ರೂ. ನಿಗದಿಪಡಿಸುವ ಮೂಲಕ ಎರಡು ರೂಪಾಂತರದಲ್ಲಿಯೂ ತಲಾ 2000 ರೂ. ಇಳಿಕೆ ಮಾಡಿದೆ. ಈ ಮೂಲಕ ಸ್ಮಾರ್ಟ್ ಫೋನ್ ಖರೀದಿದಾರರಿಗೆ IQOO ಭರ್ಜರಿ ಆಫರ್ ನೀಡಿದೆ.
IQOO Neo 7 Smartphone Feature
ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್ ಫೋನ್ 2400 x1080 ಪಿಕ್ಸೆಲ್ ರೆಸಲ್ಯೂಷನ್ ಸಾಮರ್ಥ್ಯದ 6.78 ಇಂಚಿನ ಅಮೋಲೆಡ್ ಡಿಸ್ ಪ್ಲೆ ಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 120 hz ರಿಫ್ರೆಶ್ ರೇಟ್ ಹೊಂದಿದೆ. ಇದರಿಂದ ಸ್ಮಾರ್ಟ್ಫೋನ್ ಡಿಸ್ ಪ್ಲೇ ನಯವಾಗಿ ಇರಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಈ ಸ್ಮಾರ್ಟ್ ಫೋನ್ ಗೇಮಿಂಗ್ಗೆ ಹೇಳಿ ಮಾಡಿಸಿದ್ದಾಗಿದೆ.
ಕೇವಲ 10 ನಿಮಿಷದಲ್ಲಿ 50 % ಚಾರ್ಜ್
ಇನ್ನು ಈ ಸ್ಮಾರ್ಟ್ ಫೋನ್ 50 MP ಕ್ಯಾಮೆರಾವನ್ನು ಹೊಂದಿದೆ. ಇನ್ನು ಇನ್ನು 120W ಫ್ಲಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದು, 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು IQOO Neo 7 Smartphone ನ ವಿಶೇಷವೇನೆಂದರೆ ಈ ಸ್ಮಾರ್ಟ್ ಫೋನ್ ಕೇವಲ 10 ನಿಮಿಷದಲ್ಲಿ 50 % ಚಾರ್ಜ್ ಆಗಲಿದೆ. ಇನ್ನು 20 ನಿಮಿಷ ಚಾರ್ಜ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು.