Ishant Sharma: ವಿರಾಟ್ ಕೊಹ್ಲಿ ಅಸಲಿ ಮುಖ ಏನೆಂದು ತಿಳಿಸಿದ ಇಶಾಂತ್ ಶರ್ಮಾ, ವೈರಲ್ ಆಗಿದೆ ಇಶಾಂತ್ ಹೇಳಿಕೆ.
ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ ಹೇಗೆ ಎಂದು ಹಿರಿಯ ಆಟಗಾರ ಇಶಾಂತ್ ಶರ್ಮ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
Ishant Sharma About Virat Kohli: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯತ್ತಮ ಕ್ರಿಕೆಟ್ ಆಟಗಾರರಾಗಿದ್ದಾರೆ. ಸಿನಿಮಾ ಸೆಲೆಬ್ರೆಟಿಗಳಿಂದ ಹಿಡಿದು ರಾಜಕೀಯ ಗಣ್ಯರು ಕೂಡ ವಿರಾಟ್ ಕೊಹ್ಲಿಯವರನ್ನು ಹೊಗಳುತ್ತಾರೆ. ವಿರಾಟ್ ಕೊಹ್ಲಿ ತಮ್ಮ ಅತ್ತುತ್ಯಮ ಕ್ರಿಕೆಟ್ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಅವರು ಸುದ್ದಿಯಾಗಿದ್ದಾರೆ. ವಿರಾಟ್ ಕೊಹ್ಲಿ ಅವರ ವಕ್ತಿತ್ವದ ಬಗ್ಗೆ ಮತ್ತೊಬ್ಬ ಭಾರತೀಯ ತಂಡದ ಕ್ರಿಕೆಟ್ ಆಟಗಾರ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಶಾಂತ್ ಶರ್ಮಾ (Ishant Sharma) ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ ಇಶಾಂತ್ ಶರ್ಮಾ
“ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಅತ್ಯತ್ತಮ ನಾಯಕ, ಯುವ ಆಟಗಾರರನ್ನು ಹೇಗೆ ಬೆಳಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ರಿಷಬ್ ಪ್ಯಾಂಟ್ ಹಾಗೂ ಇನ್ನುಳಿದ ಜೂನಿಯರ್ ಗಳಿಗೆ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಆಡಬೇಕು ಎಂದು ಪ್ರೋತ್ಸಾಹಿಸಿದ್ದರು. ನಿರ್ಧಿಷ್ಟವಾಗಿ ಹೀಗೆ ಆಡಬೇಕು ಎಂದು ಒತ್ತಡ ಹೇರಿರಲಿಲ್ಲ” ಎಂದು ಇಶಾಂತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ.
ಯುವ ಕ್ರಿಕೆಟಿಗರ ಪ್ರಗತಿಗೆ ಕೊಹ್ಲಿ ವಹಿಸಬಹುದಾದ ಪಾತ್ರದ ಬಗ್ಗೆಯೂ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಹಿರಿಯ ಆಟಗರಾಗಿದ್ದರೆ ಮೊದಲು ಉತ್ತಮ ರನ್ ಗಳಿಸಬೇಕು. ಇಲ್ಲದಿದ್ದರೆ ಜೂನಿಯರ್ ಗಳು ನೀವು ಸೀನಿಯರ್ ಆಗಿರುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾರೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.
ಕೊಹ್ಲಿ ಅವರ ಬ್ಯಾಟಿಂಗ್ ವಿಧಾನ ನೋಡಿದರೆ ಖಂಡಿತವಾಗಿಯೂ ಉತ್ತಮ ರನ್ ಗಳಿಸುತ್ತಾರೆ. ವೆಸ್ಟ್ ಇಂಡೀಸ್ ಪ್ರವಾಸದ ಮೊದಲ ಪಂದ್ಯದಲ್ಲಿ ಚೊಚ್ಚಲ ಆಟಗಾರ ಯಶಸ್ವಿ ಜೈಸ್ಟಲ್ ಅವರ ಯಶಸ್ಸು ಟೀಮ್ ಇಂಡಿಯಾದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ ಜೈಸ್ಟಲ್ ಮತ್ತು ಶುಮಾನ್ ಗಿಲ್ ಕ್ರಿಕೆಟ್ ದಾಖಲೆಯನ್ನು ಉರುಳಿಸುವತ್ತ ಮುನ್ನುಗುತ್ತಿದ್ದರೆ. ಇದರಿಂದ ಟೀಮ್ ಇಂಡಿಯಾ ಬಲಿಷ್ಠವಾಗಿರುವುದು ಘೋಚರಿಸುತ್ತದೆ ಎಂದಿದ್ದಾರೆ.