Pushpa 2: ಪುಷ್ಪ 2 ಚಿತ್ರಕ್ಕೆ ಆಘಾತ ನೀಡಿದ ತೆರಿಗೆ ಇಲಾಖೆ, ಅರ್ಧಕ್ಕೆ ನಿಂತ ಪುಷ್ಪ 2 ಶೂಟಿಂಗ್.
ಪುಷ್ಪ 2 ನಿರ್ದೇಶಕರಾದ ಸುಕುಮಾರ್ ಅವರ ಮನೆಯ ಮೇಲೆ ತೆರಿಗೆ ಇಲಾಖೆ ದಾಳಿ ಮಾಡಿದೆ.
Pushpa 2 Movie Shooting Stop: ಖ್ಯಾತ ನಟ ಅಲ್ಲೂ ಅರ್ಜುನ್ (Allu Arjun) ಹಾಗು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪಾ (Pushpa) ಸಿನಿಮಾ ಸಾಕಷ್ಟು ಯಶಸ್ಸು ಕಾಣದ ಸಿನಿಮಾವಾಗಿದೆ. ಈ ಸಿನಿಮಾದಿಂದ ನಟಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲೂ ಅರ್ಜುನ್ ಅವ
ರಿಗೆ ಹೆಚ್ಚು ಖ್ಯಾತಿ ಬಂದಿದೆ. ಈ ಜೋಡಿ ಮತ್ತೆ ಜೊತೆಯಾಗಿ ಪುಷ್ಪಾ 2 (Pushpa 2) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ದಿನಗಳಿಂದ ಪುಷ್ಪಾ 2 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಈ ಸಿನಿಮಾ ಆದಷ್ಟು ಬೇಗ ಶೂಟಿಂಗ್ ಮುಗಿಸಿ ಬೇಗ ರಿಲೀಸ್ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದೀಗ ಪುಷ್ಪಾ 2 ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿದೆ.
ಅರ್ಧಕ್ಕೆ ನಿಂತ ಪುಷ್ಪಾ 2 ಸಿನಿಮಾದ ಶೂಟಿಂಗ್
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಸುಕುಮಾರ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಸುದ್ದಿ ಆಗಿದೆ. ಇದರಿಂದ ಪುಷ್ಪಾ 2 ಸಿನಿಮಾದ ಮೇಲೆ ಪರಿಣಾಮ ಬಿದ್ದಂತಿದೆ. ಐಟಿ ಅಧಿಕಾರಿಗಳ ದಾಳಿಯಿಂದ ಪುಷ್ಪಾ 2 ಸಿನಿಮಾದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.
ನಿರ್ದೇಶಕ ಸುಕುಮಾರ್ ನಿವಾಸಕ್ಕೆ ದಾಳಿ ನಡೆಸಿದ ಐಟಿ ಅಧಿಕಾರಿಗಳು
ವೈಜಾಗ್ ನಲ್ಲಿ ನಡೆಯುತ್ತಿರುವ ಪುಷ್ಪಾ 2 ಸಿನಿಮಾದ ಚಿತ್ರೀಕರಣವನ್ನು ನಿರ್ಮಾಪಕರು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲೂ ಅರ್ಜುನ್ ಮತ್ತು ಇತರ ಕೆಲವು ಫಾರಿನ್ ಫೈಟರ್ಸ್ ಗಳ ಅದ್ದೂರಿ ಆಕ್ಷನ್ ಸೀಕ್ವೆನ್ ಚಿತ್ರೀಕರಣವನ್ನು ಪ್ರಾರಂಭಿಸಿದ್ದ ಸುಕುಮಾರ್ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ.
ಐಟಿ ದಾಳಿಯ ವಿಚಾರ ಎಲ್ಲಾ ಕ್ಲಿಯರ್ ಆದ ಮೇಲೆ ಮತ್ತೆ ಶೂಟಿಂಗ್ ಶುರುವಾಗಲಿದೆ. ಸದ್ಯ ತೆರಿಗೆ ಇಲಾಖೆ ದಾಳಿಯಾದ ಕಾರಣ ಶೋಟಿಂಗ್ ಅರ್ಧಕ್ಕೆ ನಿಂತಿದೆ ಮತ್ತು ಎಲ್ಲಾ ಸಮಸ್ಯೆ ಬಗೆಹರಿದ ನಂತರ ಮತ್ತೆ ಶೂಟಿಂಗ್ ಶುರುವಾಗಲಿದೆ.