Itel Earbud: 35 ದಿನಗಳ ಕಾಲ ಬ್ಯಾಟರಿ ಸಾಮರ್ಥ್ಯ ಮತ್ತು ಬೆಲೆ 849 ರೂ ಮಾತ್ರ, ಈ Earbuds ಖರೀದಿಸಲು ಜನರ ಕ್ಯೂ.

ಆಕರ್ಷಕ ವಿನ್ಯಾಸದ ಇಯರ್ ಬಡ್ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಲಭ್ಯ.

Itel Earbud T1 Pro: ಸಾಮಾನ್ಯವಾಗಿ ಎಲ್ಲರು ಮೊಬೈಲ್ ಫೋನ್ ಅನ್ನು ಬಳಸುತ್ತಾರೆ. ಸದ್ಯ ಮೊಬೈಲ್ ಫೋನ್ ಜನರ ಅವಿಭಾಜ್ಯ ಅಂಗವಾಗಿದೆ ಎನ್ನಬಹುದು. ಮೊಬೈಲ್ ಫೋನ್ ಬಳಸದೆ ಯಾರ ದಿನವೂ ಪೂರ್ಣಗೊಳ್ಳುವುದಿಲ್ಲ ಎನ್ನಬಹುದು. ಇನ್ನು ಮೊಬೈಲ್ ಫೋನ್ ಬಳಸುವವರು ಹೆಚ್ಚಾಗಿ Ear Phone, Bluetooth, Ear Bud ಗಳನ್ನೂ ಬಳಸುತ್ತಾರೆ.

ಸ್ಮಾರ್ಟ್ ಫೋನ್ ಗಳ ಜೊತೆಗೆ ಇವುಗಳಿಗೂ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಸದ್ಯ ದೇಶದಲ್ಲಿ Electronic ವಸ್ತುಗಳ ಖರೀದಿಗೆ ಭರ್ಜರಿ ಆಫರ್ ಘೋಷಣೆಯಾಗಿದ್ದು ಬಾರಿ ಸೇಲ್ ಕಾಣುತ್ತಿದೆ ಎನ್ನಬಹುದು. ಇದೀಗ ಮಾರುಕಟ್ಟೆಯಲ್ಲಿ Itel ತನ್ನ ಹೊಸ ಇಯರ್‌ ಬಡ್‌ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹಗುರವಾದ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಈ ಇಯರ್ ಬಡ್ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ.

Itel Earbud T1Pro Price
Image Credit: Navbharattimes

Itel TWS Earbud
ಸದ್ಯ ಮಾರುಕಟ್ಟೆಯಲ್ಲಿ Itel TWS Earbud ಖರೀದಿಗೆ ಲಭ್ಯವಿದೆ ಎನ್ನಬಹುದು. ಕಂಪನಿಯು ಇವುಗಳನ್ನು IPX5 ಜಲನಿರೋಧಕ ವಿನ್ಯಾಸದೊಂದಿಗೆ ಮಾಡಿದೆ. ಮಳೆ ಹನಿಗಳು ಅಥವಾ ನೀರಿನ ಸ್ಲ್ಯಾಷ್ ಗಳಿಂದ ಈ ಬಡ್ ಸುರಕ್ಷಿತವಾಗಿರುತ್ತದೆ. ಇನ್ನು ಈ ಬಡ್ ನಲ್ಲಿ AI ENC ಫೀಚರ್ ಇರುವುದರಿಂದ ಕರೆಗಳ ಸಮಯದಲ್ಲಿ ಹಿನ್ನೆಲೆ ಶಬ್ದ ಕೇಳಿಸುವುದಿಲ್ಲ. ಇದರಲ್ಲಿ ಬಳಕೆದಾರರು ಸ್ಮಾರ್ಟ್ ಟಚ್ ನಿಯಂತ್ರಣವನ್ನು ಸಹ ಪಡೆಯುತ್ತಾರೆ. ಈ ಫೀಚರ್ ನ ಮೂಲಕ ಅವರು ತಮ್ಮ ಆಡಿಯೊವನ್ನು ಸುಲಭವಾಗಿ ನಿಯಂತ್ರಿಸಬಹುದು.

Earbud ನ ಬ್ಯಾಟರಿ ಸಾಮರ್ಥ್ಯ
Itel TWS Earbud 10-ಮೀಟರ್ ವ್ಯಾಪ್ತಿಯಲ್ಲಿ ಬಲವಾದ ಸಂಪರ್ಕಕ್ಕಾಗಿ ಬ್ಲೂಟೂತ್ V5.3 ಅನ್ನು ಬಳಸುತ್ತವೆ. ಪ್ರತಿ ಇಯರ್‌ಬಡ್ 30mAh ಬ್ಯಾಟರಿಯನ್ನು ಹೊಂದಿದೆ ಮತ್ತು ಚಾರ್ಜಿಂಗ್ ಕೇಸ್ ಅವುಗಳನ್ನು ಆರು ಬಾರಿ ರೀಚಾರ್ಜ್ ಮಾಡಬಹುದು, ಒಂದೇ ಚಾರ್ಜ್‌ನಲ್ಲಿ 35 ಗಂಟೆಗಳವರೆಗೆ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ.

Itel Earbud T1Pro
Image Credit: Gyanhigyan

Itel Earbud T1Pro
ಇನ್ನು ಈ Earbud ನಲ್ಲಿ ಟೈಪ್-ಸಿ ಚಾರ್ಜಿಂಗ್ ಇಂಟರ್ಫೇಸ್ ಅನ್ನು ಬಳಸುತ್ತಾರೆ. Itel T1 Pro ಬಳಕೆದಾರರ ಅನುಭವವನ್ನು ಸುಧಾರಿಸಲು ಇನ್-ಇಯರ್ ಡಿಟೆಕ್ಷನ್ ಮತ್ತು ಧ್ವನಿ ಸಹಾಯವನ್ನು ಸಹ ಒಳಗೊಂಡಿದೆ. Itel T1Pro ಇಯರ್‌ ಬಡ್‌ ಗಳ ಬೆಲೆ ಮಾರುಕಟ್ಟೆಯಲ್ಲಿ ರೂ. 849 ಆಗಿದೆ. ಡೀಪ್ ಬ್ಲೂ ಮತ್ತು ಗ್ರೇ ಆಯ್ಕೆಯ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯ ಅಧಿಕೃತ ವೆಬ್‌ ಸೈಟ್‌ ನಿಂದ Itel Earbud T1Pro ಅನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group