Itel it5330: 12 ದಿನಗಳ ಕಾಲ ಚಾರ್ಜ್ ಮಾಡುವ ಅಗತ್ಯ ಇಲ್ಲ, 1499 ರೂಪಾಯಿಗೆ ಲಾಂಚ್ ಆಯಿತು ಫೀಚರ್ ಮೊಬೈಲ್
12 ದಿನಗಳ ಬ್ಯಾಕಪ್ ಹೊಂದಿರುವ ಈ ಫೀಚರ್ ಫೋನ್ ಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ
Itel it5330 Feature Phone: ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪನಿಯ Smartphone ಗಳು ರಾರಾಜಿಸುತ್ತಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳೇ ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ಟ್ರೆಂಡ್ ನಲ್ಲಿ ಇದ್ದರೂ ಕೂಡ Keypad Phone ಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ ಎನ್ನಬಹುದು.
ಈಗಲೂ ಕೂಡ ಫೀಚರ್ ಫೋನ್ ಗಳನ್ನೂ ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಫೀಚರ್ ಫೋನ್ ಗಳನ್ನು ತಯಾರಿಸುತ್ತಿದೆ. ಅದರಲ್ಲಿ Itel ಕೂಡ ಒಂದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Itel ಕಂಪನಿ 12 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿರುವ ಫೀಚರ್ ಫೋನ್ ಅನ್ನು ಗ್ರಾಹಕರ ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ. ಐಟೆಲ್ ಕಂಪನಿಯ ಹೊಸ ಫೀಚರ್ ಫೋನ್ ನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
12 ದಿನಗಳ ಬ್ಯಾಕಪ್ ಹೊಂದಿರುವ Itel it5330 ಫೀಚರ್ ಫೋನ್ ಬಿಡುಗಡೆ
ಫೀಚರ್ ಫೋನ್ ಗಳ ಆಯ್ಕೆಯಲ್ಲಿ ಇದೀಗ Itel it5330 ಫೋನ್ ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ. Itel it5330 ಫೀಚರ್ ಫೋನ್ ಕೇವಲ 11.1mm ದಪ್ಪವನ್ನು ಹೊಂದಿದೆ ಮತ್ತು 2.8-ಇಂಚಿನ ಕ್ಲರ್ ಡಿಸ್ಪ್ಲೇ ಹೊಂದಿದೆ. ಇದು 1900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಮತ್ತು 31.7 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ.
ಇದು 12 ದಿನಗಳ ಬ್ಯಾಕಪ್ ಅನ್ನು ಸಹ ನೀಡುತ್ತದೆ. ಫೋನ್ 32GB ವರೆಗೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬರಲಿದ್ದು, ಫೋನ್ ನಲ್ಲಿ ಮಲ್ಟಿ ಮೀಡಿಯಾವನ್ನು ಸಂಗ್ರಹಿಸಲು ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.
ಮಾರುಕಟ್ಟೆಯಲ್ಲಿ Itel it5330 ಫೀಚರ್ ಫೋನ್ ನ ಬೆಲೆ ಎಷ್ಟು..?
ಮಾರುಕಟ್ಟೆಯಲ್ಲಿ Itel it5330 ಫೀಚರ್ ಫೋನ್ ಸರಿಸುಮಾರು 1499 ರೂ. ನಲ್ಲಿ ಲಭ್ಯವಾಗಲಿದೆ. 2000 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತಹ ಎಲ್ಲ ಮಾದರಿಯ ಕೀಪ್ಯಾಡ್ ಫೋನ್ ಗಳಿಗೆ ಈ ನೂತನ ಮಾದರಿ ನೇರ ಸ್ಪರ್ಧೆ ನೀಡಲಿದೆ. ಅಧಿಕ ಬ್ಯಾಟರಿ ಬ್ಯಾಕಪ್ ಹೊಂದಿರುವುದರಿಂದ ಗ್ರಾಹಕರಿಗೆ ಬಹುಬೇಗ ಇಷ್ಟವಾಗಲಿದೆ. ನೀಲಿ, ತಿಳಿ ಹಸಿರು, ತಿಳಿ ನೀಲಿ, ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ನೀವು Itel it5330 ಫೀಚರ್ ಫೋನ್ ಅನ್ನು ಖರೀದಿಸಬಹುದು.