Smartphone:ಬಡವರಿಗಾಗಿಯೇ ಬಂತು ಬೆಸ್ಟ್ ಫೋನ್, 7000mAh ಬ್ಯಾಟರಿ ಜೊತೆ HD ಕ್ಯಾಮರಾ

ಐಟೆಲ್ ಇದೀಗ ಹೊಸ ಐಟೆಲ್ P40 ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

itel P40+ Smartphone: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿವೆ. ಹಲವಾರು ಮೊಬೈಲ್ ತಯಾರಕ ಕಂಪನಿಗಳು ಪೈಪೋಟಿ ಎನ್ನುವಂತೆ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿರುವಂತೆ. ಅದರಲ್ಲಿ ಐಟೆಲ್ ಕಂಪನಿ ಸಹ ಒಂದಾಗಿದೆ. ಐಟೆಲ್ ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಕೈಗೆಟಕುವ ಬೆಲೆಯಲ್ಲಿ ಐಟೆಲ್ ತನ್ನ ಸ್ಮಾರ್ಟ್ ಫೋನ್ ನನ್ನ ಬಿಡುಗಡೆ ಮಾಡುತ್ತಾ ಇರುತ್ತದೆ. ಹಲವು ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸಿರುವ ಐಟೆಲ್ ಇದೀಗ ಹೊಸ ಐಟೆಲ್ P40 ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡಿದೆ.

Itel P40+ Smartphone Price
Image Credit: Gadgets360

ಐಟೆಲ್‌ P40+ ಸ್ಮಾರ್ಟ್‌ಫೋನ್‌
ಐಟೆಲ್‌ P40+ ಸ್ಮಾರ್ಟ್‌ಫೋನ್‌ ಡುಯೆಲ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 13 ಮೆಗಾಫಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಫೋನ್ 7000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಐಟೆಲ್‌ P40+ ಸ್ಮಾರ್ಟ್‌ಫೋನ್‌ 6.8 ಇಂಚಿನ ಹೆಚ್ ಡಿ ಪ್ಲಸ್ ಐಪಿಎಸ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಡಿಸ್ ಪ್ಲೇ 720 X 1640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಐಟೆಲ್‌ P40+ ಸ್ಮಾರ್ಟ್‌ಫೋನ್‌ ನ ಬೆಲೆ
ಭಾರತದಲ್ಲಿ ಐಟೆಲ್‌ P40+ ಸ್ಮಾರ್ಟ್‌ಫೋನ್‌ ನ ಬೆಲೆ 4GB RAM +128 GB ಸ್ಟೋರೇಜ್ ಮಾದರಿಗೆ 8099 ರೂಪಾಯಿ. ನೀವು ಈ ಫೋನನ್ನು ಪೋರ್ಸ್ ಬ್ಲಾಕ್ ಮತ್ತು ಐಸ್ ಸಾಯನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.

Itel P40+ Smartphone Price
Image Credit: Gadgets360

ಈ ಹೊಸ ಸ್ಮಾರ್ಟ್ ಫೋನ್ ಜುಲೈ 11 ರಿಂದ ಅಮೆಜಾನ್ ಮೂಲಕ ಸೇಲ್ ಆಗಲಿದೆ. ಇದಲ್ಲದೆ. ICICI ಬ್ಯಾಂಕ್ ಕಾರ್ಡ್ ಗಳು ಮತ್ತು SBI ಕಾರ್ಡ್ ಗಳನ್ನೂ ಬಳಸಿಕೊಂಡು ಖರೀದಿಸುವವರಿಗೆ 10% ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group